ಸರಿಯಾಗಿ ನೋಡಿ ಇದು ನೋಕಿಯಾ ಮೊಬೈಲ್ ಅಲ್ಲ ಮೈಕ್ರೊಮ್ಯಾಕ್ಸ್!! ಇದರ ಬೆಲೆ ಎಷ್ಟು ಗೊತ್ತಾ?

Written By:

ನೋಕಿಯಾ 3310 ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿವಸಗಳಲ್ಲಿ ನೋಕಿಯಾ 3310 ಮೊಬೈಲ್ ಅನ್ನು ನಕಲು ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.!! ಇಲ್ಲಿಯವರೆಗೂ ಹೆಸರು ಕೇಳಿರದ ಮೊಬೈಲ್ ಕಂಪೆನಿಗಳು ಮೊಬೈಲ್ ನಕಲು ಮಾಡುತ್ತಿದ್ದವು ಆದರೆ, ಈಗ ಮೈಕ್ರೋಮ್ಯಾಕ್ಸ್ ನೋಕಿಯಾ 3310ಯನ್ನು ನಕಲು ಮಾಡಿದೆ.!!

ಹೌದು, ನೋಕಿಯಾದ ಹೊಸ ಮೊಬೈಲ್ ನೋಕಿಯಾ 3310 ಈಗಾಗಲೇ ಎಲ್ಲೆಡೆ ಜನಪ್ರಿಯವಾಗಿದೆ. ಹಾಗಾಗಿ, ಮೈಕ್ರೋಮ್ಯಾಕ್ಸ್ ಕಂಪೆನಿ ನೋಕಿಯಾ 3310 ಮೊಬೈಲ್‌ ಅನ್ನು ನಕಲಿ ಮಾಡಿ ಮಾರುಕಟ್ಟೆಗೆ ಬರುತ್ತಿದೆ..!! ಇನ್ನೊಂದು ವಿಶೇಷವೆಂದರೆ ಮೈಕ್ರೋಮ್ಯಾಕ್ಸ್ ಮೊಬೈಲ್ ಹಳೆ ನೋಕಿಯಾ 3310 ಮೊಬೈಲ್‌ಗೆ ಹೋಲುತ್ತದೆ.!!

ಹಾಗಾದರೆ, ನೋಕಿಯಾವನ್ನು ನಕಲು ಮಾಡಿ ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಿರುವ ನೂತನ ಮೊಬೈಲ್ ಯಾವುದು? ಏನೇನು ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಎಕ್ಸ್1i

ಮೈಕ್ರೋಮ್ಯಾಕ್ಸ್ ಎಕ್ಸ್1i

ನೋಕಿಯಾ 3310 ಮೊಬೈಲ್ ನಕಲಾಗಿರುವ ಮೈಕ್ರೋಮ್ಯಾಕ್ಸ್‌ನ ನೂತನ ಮೊಬೈಲ್ ಹೆಸರು ಮೈಕ್ರೋಮ್ಯಾಕ್ಸ್ ಎಕ್ಸ್1i. ಇನ್ನು ಮಾರುಕಟ್ಟೆಗೆ ಎಂಟ್ರಿ ನೀಡದ ಮೈಕ್ರೋಮ್ಯಾಕ್ಸ್ ಎಕ್ಸ್1i ನೋಕಿಯಾವನ್ನು ಕಾಪಿ ಮಾಡಿ ಹೆಸರಾಗುತ್ತಿದೆ.!!

ಮೊಬೈಲ್ ಫೀಚರ್ ಏನು?

ಮೊಬೈಲ್ ಫೀಚರ್ ಏನು?

ನೋಕಿಯಾ 3310 ರೀತಿಯಲ್ಲಿಯೇ ಇರುವ ಮೈಕ್ರೋಮ್ಯಾಕ್ಸ್ ಎಕ್ಸ್1i 2.4 ಇಂಚ್‌ ಡಿಸ್‌ಪ್ಲೇ, 32MB ಮೆಮೊರಿ ಡ್ಯುಯಲ್ ಸಿಮ್ ಹಾಗೂ 1300MAh ಬ್ಯಾಟರಿಯನ್ನು ಹೊಂದಿದೆ.!!

ಹಳೆ ನೋಕಿಯಾ 3310 ಮೊಬೈಲ್‌ಗೆ ಹೋಲುತ್ತದೆ.!!

ಹಳೆ ನೋಕಿಯಾ 3310 ಮೊಬೈಲ್‌ಗೆ ಹೋಲುತ್ತದೆ.!!

ಹೊಸದಾಗಿ ಬಿಡುಗಡೆಯಾಗಿರುವ ನೋಕಿಯಾ 3310 ವಿನ್ಯಾಸಕ್ಕಿಂತ ಹಳೆ ನೋಕಿಯಾ ವಿನ್ಯಾಸವೇ ಚೆನ್ನಾಗಿತ್ತು ಎಂದು ಗ್ರಾಹಕರು ಹೇಳುತ್ತಿರುವಾಗಲೇ, ಹಳೆ ನೋಕಿಯಾ 3310 ಮೊಬೈಲ್‌ಗೆ ಹೋಲುವಂತೆ ಮೈಕ್ರೋಮ್ಯಾಕ್ಸ್ ಎಕ್ಸ್1i ಮೊಬೈಲ್ ಬಿಡುಗಡೆ ಮಾಡಲಾಗಿದೆ.!!

 ಮೈಕ್ರೋಮ್ಯಾಕ್ಸ್ ಎಕ್ಸ್1i ಬೆಲೆ ಎಷ್ಟು?

ಮೈಕ್ರೋಮ್ಯಾಕ್ಸ್ ಎಕ್ಸ್1i ಬೆಲೆ ಎಷ್ಟು?

ಬಿಡುಗಡೆಯಾಗಿರುವ ನೋಕಿಯಾ 3310 ಮೊಬೈಲ್ ಬೆಲೆ ಮೂರುಸಾವಿರಕ್ಕಿಂತ ಹೆಚ್ಚಿದ್ದು, ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಮ್ಯಾಕ್ಸ್ ಎಕ್ಸ್1i ಬರುತ್ತಿದೆ. ಹಾಗಾಗಿ, ಮೈಕ್ರೋಮ್ಯಾಕ್ಸ್ ಎಕ್ಸ್1i ಕೇವಲ 1,199 ರೂಪಾಯಿಗಳ ಬೆಲೆ ಹೊಂದಿದೆ.!!

ಓದಿರಿ:ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is another Nokia 3310 clone by Micromax. To know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot