ಸೊಲಾರ್ ಚಾರ್ಜರ್ ಮೊಬೈಲ್ ಫೋನ್: 2500 ರೂ

Posted By: Varun
ಸೊಲಾರ್ ಚಾರ್ಜರ್ ಮೊಬೈಲ್ ಫೋನ್: 2500 ರೂ

ಇದು ಮಳೆಗಾಲದ ಸೀಸನ್ ಆದರೂಸರಿಯಾಗಿ ಮಳೆ ಇಲ್ಲ ಎಂದ ಮೇಲೆ ಸರ್ಕಾರ ಪವರ್ ಕಟ್ ಮಾಡಲೇಬೇಕು. ಎಲ್ಲರ ಮನೇಲೂ UPS ಇಲ್ದೆ ಇರೋದ್ರಿಂದ ಟಿವಿ ನೋಡೋದ್ ಇರ್ಲಿ, ಮೊಬೈಲ್ ಅನ್ನ ಚಾರ್ಜ್ ಮಾಡೋದು ಕೂಡ ಕಷ್ಟ ಆಗಿಬಿಡುತ್ತೆ.

ಇಂಥ ಸಮಯದಲ್ಲಿ ಒಂದೋ ಶಕ್ತಿಯುತವಾದ ಬ್ಯಾಟರಿ ಇರೋ ಮೊಬೈಲ್ ನ ತಗೋಬೇಕು, ಇಲ್ಲ ಅಂದ್ರೆ ಹೆಚ್ಚುವರಿ ಬ್ಯಾಟರಿ ತಗೊಂಡು ಆಫೀಸಲ್ಲಿ ಚಾರ್ಜ್ ಮಾಡ್ಕೊಂಡು ಮೊಬೈಲ್ ಅಲ್ಲಿ ಇರೋ ಬ್ಯಾಟರಿ ಚಾರ್ಜ್ ಖಾಲಿ ಅದಾಗ ಇದನ್ನ ಉಪಯೋಗಿಸಬೇಕು.

ಇಂಥ ತಾಪತ್ರಯ ಬೇಡಾ ಅಂತಾನೆ ಮೈಕ್ರೋಮ್ಯಾಕ್ಸ್, ಸೂರ್ಯಶಕ್ತಿಯಿಂದ ಚಾರ್ಜ್ ಆಗುವ ಸೋಲಾರ್ ಪ್ಯಾನಲ್ ಇರುವ ದ್ವಿಸಿಮ್ ಫೋನ್ ಒಂದನ್ನು ಹೊರತಂದಿದೆ.

ಮೈಕ್ರೋಮ್ಯಾಕ್ಸ್ X259 ಹೆಸರಿನ ಈ ಮೊಬೈಲ್ ಕೇವಲ 2,500 ರೂಪಾಯಿಗೆ ಬರಲಿದ್ದು, ವಿದ್ಯುತ್ ನಿಂದ ಚಾರ್ಜ್ ಮಾಡುವ ತೊಂದರೆ ತಪ್ಪಿಸುತ್ತದೆ. ಗ್ರಾಮೀಣ ಭಾಗಗಳಲ್ಲಿ ಇರುವ ಜನರು ನಗರ ಪ್ರದೇಶದ ಜನರಿಗಿಂತಾ ಹೆಚ್ಚು ವಿದ್ಯುತ್ ಸಮಸ್ಯೆ ಎದುರಿಸುತ್ತಿರುವುದರಿಂದ ಇದು ಅವರಿಗೂಹೆಚ್ಚು ಉಪಯುಕ್ತವಾಗಲಿದೆ.

ಸೌರಶಕ್ತಿಯಿಂದ ಕೆಲಸ ಮಾಡುವ ಈ ಮೊಬೈಲ್ ಫೋನ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ 1.5 ಗಂಟೆ ಟಾಕ್ ಟೈಮ್ ಕೊಡಲಿದೆ ಎಂದು ಕಂಪನಿ ತಿಳಿಸಿದೆ. ಇದರ ಇತರೆ ಫೀಚರುಗಳು ಈ ರೀತಿ ಇವೆ:

  • 2.4 ಇಂಚ್ ನ ಡಿಸ್ಪ್ಲೇ, 240 X 320 ಪಿಕ್ಸೆಲ್ ರೆಸೊಲ್ಯೂಶನ್ ನೊಂದಿಗೆ

  • 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ

  • ಬ್ಲೂಟೂತ್, GPRS

  • ಮೈಕ್ರೋಮ್ಯಾಕ್ಸ್ ಆನ್ಲೈನ್ ಮಳಿಗೆಗೆ ಸಂಪರ್ಕ

  • 1000 mAh ಬ್ಯಾಟರಿ.
 

ಹೆಸರಾಂತ ರೀಟೇಲ್ ಮೊಬೈಲ್ ಅಂಗಡಿಗಳಲ್ಲಿ ಹಾಗು ಆನ್ಲೈನ್ ನಲ್ಲಿ ಈ ಫೋನ್ ಅನ್ನು ನೀವು ಖರೀದಿ ಮಾಡಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot