Subscribe to Gizbot

ಇದು ಬ್ಲೇಡ್ ಮೊಬೈಲ್, ಹುಷಾರಾಗಿರಿ

Posted By: Staff
ಇದು ಬ್ಲೇಡ್ ಮೊಬೈಲ್, ಹುಷಾರಾಗಿರಿ

ಇದೀಗ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಭರಾಟೆ ಇದ್ದರೂ ಸಹ, ಸಾಮಾನ್ಯ ಮೊಬೈಲ್ ಗಳ ಬೇಡಿಕೆಯೂ ಹೆಚ್ಚಿದೆ. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮೈಕ್ರೊ ಮ್ಯಾಕ್ಸ್ ಸಾಗಿತ್ತಿದೆ. ಗ್ರಾಹಕರಿಗೆಂದೇ ವಿಶೇಷ ಮೈಕ್ರೊಮ್ಯಾಕ್ಸ್ X55 ಬ್ಲೇಡ್ ಎಂಬ ಮೊಬೈಲನ್ನು ಪರಿಚಯಿಸಿದೆ.

ಡ್ಯೂಯಲ್ ಸಿಮ್ ನೊಂದಿಗೆ ಬಾರ್ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಮೊಬೈಲ್ ನಲ್ಲಿ ಅನೇಕ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿದೆ. ಅದೇನೆಂದು ಮುಂದೆ ತಿಳಿಯಿರಿ.

ಮೈಕ್ರೊ ಮ್ಯಾಕ್ಸ್ X55 ಬ್ಲೇಡ್ ವಿಶೇಷತೆ:

* 2.4 ಇಂಚಿನ ಎಲ್ ಸಿಡಿ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* 118.2 x 51.4 x 10.3 ಸುತ್ತಳತೆ

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* ಕ್ಯಾಮೆರಾ ಜೊತೆ ಎಲ್ ಇಡಿ ಫ್ಲಾಶ್

* ಮಲ್ಟಿ ಫಾರ್ಮೆಟ್ ಬೆಂಬಲಿತ ಆಡಿಯೋ, ವಿಡಿಯೋ ಪ್ಲೇಬ್ಯಾಕ್

* ಸ್ಟಿರಿಯೋ ಎಫ್ ಎಂ

* 8 ಜಿಬಿವರೆಗೂ ಮೆಮೊರಿ ವಿಸ್ತರಣೆ ಸಾಮರ್ಥ್ಯ

* ಬ್ಲೂಟೂಥ್ ಸಂಪರ್ಕ

800 mAh ಲಿಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 4 ಗಂಟೆ ಟಾಕ್ ಟೈಂ 8 ದಿನಗಳವರೆಗೂ ಸ್ಟ್ಯಾಂಡ್ ಬೈ ಟೈಂ ಹೊಂದಿದೆ. ಈ ಮೊಬೈಲ್ ಬೆಲೆಯನ್ನು ಗುಪ್ತವಾಗಿರಿಸಿರುವ ಕಂಪನಿ ಇನ್ನು ಕೆಲವೇ ದಿನಗಳಲ್ಲಿ ಇದರ ಬೆಲೆಯನ್ನು ತಿಳಿಸಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot