ಬಂದಿದೆ ಟಚ್ ಅಂಡ್ ಸ್ಟೈಡ್ ಮೈಕ್ರೊಮ್ಯಾಕ್ಸ್ ಮೊಬೈಲ್

Posted By: Staff
ಬಂದಿದೆ ಟಚ್ ಅಂಡ್ ಸ್ಟೈಡ್ ಮೈಕ್ರೊಮ್ಯಾಕ್ಸ್ ಮೊಬೈಲ್

ಡ್ಯೂಯಲ್ ಸಿಮ್, ಟಚ್ ಸ್ಕ್ರೀನ್, ಟೈಪಿಂಗ್ ಪ್ಯಾಡ್, ಸ್ಮಾರ್ಟ್ ಲುಕ್ ಎಲ್ಲವನ್ನೂ ನೀವು ಒಂದೇ ಮೊಬೈಲ್ ನಿಂದ ಬಯಸುವುದಾದರೆ ಇಲ್ಲೊಂದು ಮೊಬೈಲ್ ನಿಮಗೆ ಸೂಕ್ತ ಆಯ್ಕೆಯಾಗಲಿದೆ.  ಮೈಕ್ರೊಮ್ಯಾಕ್ಸ್ ಕಂಪನಿ ವಿಶೇಷವಾದ ಮೈಕ್ರೊ ಮ್ಯಾಕ್ಸ್ X78 ಎಂಬ ಮೊಬೈಲನ್ನು ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದೆ.

ಟಚ್ ಮತ್ತು ಟೈಪ್ ಜೊತೆ ಸ್ಲೈಡರ್ ಇದ್ದು, ಡ್ಯೂಯಲ್ ಸಿಮ್ ನೊಂದಿಗೆ ಫೋನ್ ವಿನ್ಯಾಸಗೊಂಡಿದೆ. ಬಾರ್ ಮೊಬೈಲ್ ಮಾದರಿಯಲ್ಲಿ ಮೂಡಿಬಂದಿರುವ ಈ ಮೊಬೈಲ್ ನಲ್ಲಿ ನೀವು ಬಯಸುವ ಹಲವು ಆಯ್ಕೆಗಳು ಸಿಗಲಿದೆ. ಕಪ್ಪು ಮತ್ತು ಬಿಳುಪು ಎರಡೂ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದ್ದು, ಟ್ರ್ಯಾಕ್ ಪ್ಯಾಡ್ ಕೂಡ ಇದರಲ್ಲಿದೆ.

ಮೈಕ್ರೊ ಮ್ಯಾಕ್ಸ್ X78 ಮೊಬೈಲ್ ವಿಶೇಷತೆ:

* 140 ಗ್ರಾಂ ತೂಕ

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 2.8 ಇಂಚಿನ 240 x 320 ಪಿಕ್ಸಲ್ ರೆಸೊಲ್ಯೂಷನ್ ಡಿಸ್ಪ್ಲೇ

* ಟಚ್ ಸ್ಕ್ರೀನ್

* ಕ್ವೆರ್ಟಿ ಕೀಪ್ಯಾಡ್

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಮನರಂಜನೆ ಬಯಸುವವರಿಗೆಂದು ಮೀಡಿಯಾ ಪ್ಲೇಯರ್, ಆಧುನಿಕ ಮಲ್ಟಿ ಮೀಡಿಯಾ ಪ್ಲೇಯರ್ ಮತ್ತು ಎಫ್ ಎಂ ಇದೆ. Li-ion 950 mAh ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ 5 ಗಂಟೆ ಟಾಕ್ ಟೈಂ ಮತ್ತು 8 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಈ ಮೊಬೈಲ್ ಬೆಲೆಯೂ ಕೂಡ ನಿಮ್ಮನ್ನು ಚಕಿತಗೊಳಿಸುತ್ತೆ. 5,000ರು ಗಿಂತ ಕಡಿಮೆ ಬೆಲೆಗೆ ಈ ಮೈಕ್ರೊಮ್ಯಾಕ್ಸ್  X78 ಮೊಬೈಲ್ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot