ವಿಂಡೋಸ್ ಬಳಕೆದಾರರಿಗೆ ಕಹಿ ಸುದ್ದಿ: ಸ್ಥಬ್ದವಾಗಲಿದೆ ವಿಂಡೋಸ್ ಫೋನ್‌ಗಳು..!!
ಮೈಕ್ರೋಸಾಫ್ಟ್ ಈ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿದ್ದು, ವಿಂಡೋಸ್ ಫೋನ್‌ಗಳಿಗೆ ಇನ್ನು ಮುಂದೆ ಯಾವುದೇ ಹೊಸ ಫೀಚರ್ ಗಳನ್ನು ಡೆವಲಪ್ ಮಾಡುವುದಿಲ್ಲ ಮತ್ತು ಹಾರ್ಡ್‌ವೇರ್ ಅನ್ನು ಅಭಿವೃದ್ಧಿ ಪಡಿಸುವುದಿಲ್ಲ ಎಂದು ತಿಳಿಸಿದೆ.
ಗೂಗಲ್ ಆಂಡ್ರಾಯ್ಡ್ ಮತ್ತು ಆಪಲ್ iSO ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ನಡುವೆ ಸ್ಪರ್ಧೆಯಲ್ಲಿ ಹಿಂದುಳಿದ್ದ ಮೈಕ್ರೋಸಾಫ್ಟ್ ಮಾಲೀಕತ್ವದ ವಿಂಡೋಸ್ ಫೋನ್‌ಗಳ ಕಾಲ ಶೀಘ್ರವೇ ಮುಗಿಯಲಿದೆ ಎನ್ನಲಾಗಿದೆ.

ಓದಿರಿ: ಶಿಯೋಮಿ ಹೇಳಿದಂತೆ ಕೇಳಿದ ಗೂಗಲ್.! ಯಾಕೆ..?
ಮೈಕ್ರೋಸಾಫ್ಟ್ ಈ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿದ್ದು, ವಿಂಡೋಸ್ ಫೋನ್‌ಗಳಿಗೆ ಇನ್ನು ಮುಂದೆ ಯಾವುದೇ ಹೊಸ ಫೀಚರ್ ಗಳನ್ನು ಡೆವಲಪ್ ಮಾಡುವುದಿಲ್ಲ ಮತ್ತು ಹಾರ್ಡ್‌ವೇರ್ ಅನ್ನು ಅಭಿವೃದ್ಧಿ ಪಡಿಸುವುದಿಲ್ಲ ಎಂದು ತಿಳಿಸಿದೆ.

ಸೆಕ್ಯೂರಿಟಿ ಆಪ್‌ಡೇಟ್ ಇರಲಿದೆ:
ಈಗಾಗಲೇ ವಿಂಡೋಸ್ ಬಳಕೆ ಮಾಡುತ್ತಿರುವವರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೆಕ್ಯೂರಿಟಿ ಆಪ್‌ಡೇಟ್ ಮತ್ತು ಬಗ್ ಫಿಕ್ಸ್ ಅಪ್ಡೇಟ್ ಗಳನ್ನು ನೀಡಲಾಗುವುದು. ಆದರೆ ಯಾವುದೇ ಹೊಸ ಫೀಚರ್ ಗಳನ್ನು ಪರಿಚಯಿಸುವುದಿಲ್ಲ ಎನ್ನಲಾಗಿದೆ.

ಆಪ್ ನಿರ್ಮಾಣವಾಗುತ್ತಿಲ್ಲ:
ಈ ಹಿಂದೆ ಪ್ರತಿ ಆಪ್‌ಗಳು ಆಂಡ್ರಾಯ್ಡ್, iOS ಮತ್ತು ವಿಂಡೋಸ್‌ಗಾಗಿ ನಿರ್ಮಾಣವಾಗುತ್ತಿದ್ದವು, ಆದರೆ ದಿನ ಕಳೆದಂತೆ ವಿಂಡೋಸ್ ಬಳಕೆದಾರರಿಗೆ ಯಾವುದೇ ಆಪ್‌ಗಳು ಲಭ್ಯವಿಲ್ಲ ಎನ್ನಲಾಗಿದೆ. ಇದರಿಂದಾಗಿ ವಿಂಡೋಸ್ ಹಿನ್ನಡೆ ಅನುಭವಿಸಲು ಮುಂದಾಗಿದೆ.

ಮೈಕ್ರೋಸಾಫ್ಟ್ ಮಾಲೀಕರೆ ವಿಂಡೋಸ್ ಬಳಸುತ್ತಿಲ್ಲ:
ಈ ಹಿಂದೆ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಬಳಕೆ ಮಾಡುತ್ತಿದ್ದ ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಕೆಲವು ದಿನಗಳ ಹಿಂದೆಯೇ ವಿಂಡೋಸ್ ಫೋನ್ ನಿಂದ ಆಂಡ್ರಾಯ್ಡ್ ಕಡೆಗೆ ಮುಖ ಮಾಡಿದ್ದರು.

ಟಾಪ್ ಎಂಡ್ ಫೋನ್‌ಗಳು ಲಭ್ಯವಿಲ್ಲ:
ಇದಲ್ಲದೇ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಟಾಪ್ ಎಂಡ್ ಆವೃತ್ತಿಗಳು ಲಭ್ಯವಿಲ್ಲ ಮತ್ತು ಟಾಪ್ ಕಂಪನಿಯ ಫೋನ್ ಗಳು ಸಹ ದೊರೆಯದೆ ಇದ್ದಿದ್ದು ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ.


Click it and Unblock the Notifications








