ಕೇರಳದಲ್ಲಿ ಮೈಕ್ರೋಸಾಫ್ಟ್‌ನಿಂದ ನೋಕಿಯಾ ಎಕ್ಸ್‌ಎಲ್‌ ಲಾಂಚಿಂಗ್

Written By:

ಸ್ಮಾರ್ಟ್‌ಫೋನ್‌ಗಿರುವ ಅಸದಳ ಬೇಡಿಕೆ ಮತ್ತು ಸ್ಪರ್ಧಾತ್ಮಕ ನೆಲೆಗಟ್ಟು ಫೋನ್‌ಗಳ ಉತ್ಪತ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ತನ್ನ ನೋಕಿಯಾ ಎಕ್ಸ್‌ಎಲ್ ಡಿವೈಸ್ ಅನ್ನು ಕೇರಳದಲ್ಲಿ ಕೂಡ ಲಾಂಚ್ ಮಾಡಿದೆ.

ಕಳೆದ ವರ್ಷವಷ್ಟೇ ಭಾರತದಲ್ಲಿ 44 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು ಫೋನ್‌ಗಳ ಭವಿಷ್ಯಕ್ಕೆ ಉತ್ತಮ ಚೌಕಟ್ಟು ಭಾರತದಲ್ಲಿದೆ ಎಂಬುದನ್ನು ಕಂಪೆನಿ ಅರ್ಥಮಾಡಿಕೊಂಡೇ ಕೇರಳದಲ್ಲಿ ಈ ಫೋನ್‌ ಅನ್ನು ಮೈಕ್ರೋಸಾಫ್ಟ್ ಲಾಂಚ್ ಮಾಡಿದೆ. ಗ್ರಾಹಕರು ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗೆ ನೀಡುತ್ತಿರುವ ಇಂಪೋರ್ಟೆನ್ಸ್ ಹೆಚ್ಚಾಗಿದ್ದು ರೂ 6,000 -12,000 ದವರೆಗಿನ ಸ್ಮಾರ್ಟ್‌ಫೋನ್‌ಗಳು ಈಗ ಭಾರೀ ಪ್ರಮಾಣದಲ್ಲಿ ಬೇಡಿಕೆಯಲ್ಲಿರುವಂಥದ್ದು.

ಕೇರಳದಲ್ಲಿ ಮೈಕ್ರೋಸಾಫ್ಟ್‌ನಿಂದ ನೋಕಿಯಾ ಎಕ್ಸ್‌ಎಲ್‌ ಲಾಂಚಿಂಗ್

ಕೇರಳ ಮತ್ತು ತಮಿಳುನಾಡಿನಲ್ಲಿ ಮಾರುಕಟ್ಟೆ ಸ್ಥಿತಿಗತಿ ಉತ್ತಮವಾಗಿದ್ದು ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ನೆಲೆಯನ್ನು ಒದಗಿಸಲಿದೆ ಎಂದು ದಕ್ಷಿಣ ನೋಕಿಯಾದ ಡೈರೆಕ್ಟರ್ ಟಿ. ಎಸ್ ಶ್ರೀಧರ್ ತಿಳಿಸಿದ್ದಾರೆ.

ಈ ಸ್ಮಾರ್ಟ್‌ಫೋನ್ ವಿಭಿನ್ನ ಬಣ್ಣಗಳಲ್ಲಿ ಬಂದಿದ್ದು 5' ಐಪಿಎಸ್ ಸಾಮರ್ಥ್ಯವುಳ್ಳ ಬಣ್ಣದ ಟಚ್ ಸ್ಕ್ರೀನ್ ಅನ್ನು ಹೊಂದಿದೆ ಮತ್ತು ಇದರ ಬೆಲೆ ರೂ. 11,489 ಆಗಿದೆ. ಇದು ಸ್ಕೈಪ್‌ನಲ್ಲಿ ವೀಡಿಯೋ ಕರೆ ಮಾಡುವ ಅನುಕೂಲತೆಯನ್ನು ಹೊಂದಿದ್ದು 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ. 5 ಮೆಗಾಪಿಕ್ಸೆಲ್‌ಗಳ ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು ಆಟೋಫೋಕಸ್ ಫ್ಲ್ಯಾಶ್ ಹಾಗೂ 2000 mAh ಬ್ಯಾಟರಿ ಈ ಫೋನ್‌ನಲ್ಲಿದೆ.

ನೋಕಿಯಾ ಎಕ್ಸ್‌ಎಲ್‌ನಲ್ಲಿ ಬಳಕೆದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಸಲುವಾಗಿ ಕಂಪೆನಿ ಏರ್‌ಟೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ನೋಕಿಯಾ ಎಕ್ಸ್‌ಎಲ್ ಬಳಸುವವರು ಆರು ತಿಂಗಳುಗಳ ಕಾಲ ಉಚಿತವಾಗಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ. ಈ ಯೋಜನೆಯು ನಿಮಗೆ 500 ಎಂಬಿ ಉಚಿತ ಸಂಗ್ರಹಣೆಯನ್ನು ನೀಡಿದ್ದು ಗ್ರಾಹಕರು ತಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ನೋಕಿಯಾ ಸ್ಟೋರ್ ಅಥವಾ 1ಮೊಬೈಲ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting