Subscribe to Gizbot

ಮೈಕ್ರೋಸಾಫ್ಟ್‌ನಿಂದ ಬಂಪರ್ ಎರಡು ಫೋನ್‌ಗಳು

Written By:

ಮೈಕ್ರೋಸಾಫ್ಟ್ ಆಂಡ್ರಾಯ್ಡ್‌ನೊಂದಿಗೆ ಇದೀಗ ಪೈಪೋಟಿಗೆ ನಿಂತಿದ್ದು, ಎಲ್ಲಾ ಹೊಸ 400 ಸಿರೀಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಅಂದರೆ ಲೂಮಿಯಾ 435 ಮತ್ತು ಲೂಮಿಯಾ 435 ಡ್ಯುಯಲ್ ಸಿಮ್ ಆಗಿದೆ. ಇನ್ನು ಲೂಮಿಯಾ 532, ಲೂಮಿಯಾ 532 ಡ್ಯುಯಲ್ ಸಿಮ್ ಅನ್ನು ಕಂಪೆನಿ ಲಾಂಚ್ ಮಾಡಿದೆ.

ಲೂಮಿಯಾ 435 ಮತ್ತು ಲೂಮಿಯಾ 532 ಫೆಬ್ರವರಿಯಲ್ಲಿ ಲಾಂಚ್ ಆಗಲಿದ್ದು ಆಯ್ಕೆಮಾಡಿದ ಪ್ರದೇಶಗಳಾದ ಏಷ್ಯಾ ಫೆಸಿಫಿಕ್, ಯುರೋಪ್, ಭಾರತ, ಮಧ್ಯ ಪೂರ್ವ ಹಾಗೂ ಆಫ್ರಿಕಾದಲ್ಲಿ ಈ ಫೋನ್‌ಗಳು ಲಾಂಚ್ ಆಗಲಿವೆ.

ಮೈಕ್ರೋಸಾಫ್ಟ್‌ನಿಂದ ಬಂಪರ್ ಎರಡು ಫೋನ್‌ಗಳು

ಎರಡೂ ಲೂಮಿಯಾ ಫೋನ್‌ಗಳು ವಿಂಡೋಸ್ 8.1 ಆವೃತ್ತಿಯೊಂದಿಗೆ ಬಂದಿದ್ದು ವಿಂಡೋಸ್ ಫೋನ್ ಸ್ಟೋರ್ ಅನ್ನು ಬಳಸಿಕೊಂಡು ನೀವು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಲೂಮಿಯಾ 435 ಮತ್ತು ಲೂಮಿಯಾ 532, 4 ಇಂಚಿನ WVGA (480x800 ಪಿಕ್ಸೆಲ್‌ಗಳು) ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಇದರ ಡ್ಯುಯಲ್ ಸಿಮ್ ಆವೃತ್ತಿಗಳು, 1.2GH ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್‌ನೊಂದಿಗೆ ಬಂದಿದೆ.

ಲೂಮಿಯಾ 532 ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ ಬಂದಿದ್ದು 1.2GHz ಇದರಲ್ಲಿದೆ. ಇನ್ನು ಫೋನ್‌ನಲ್ಲಿ 1 ಜಿಬಿ RAM ಇದ್ದು, 8 ಜಿಬಿ ಬಿಲ್ಟ್ ಇನ್ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಎಸ್‌ಡಿ ಕಾರ್ಡ್ ಬಳಸಿ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ. ಬ್ಯಾಟರಿ 1560mAh ಇದರಲ್ಲಿದೆ.

English summary
Microsoft is taking the fight to Android and has launched all new affordable 400-series smartphone, the Lumia 435 and Lumia 435 Dual SIM.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot