ವಿಂಡೋಸ್ 7.8 ನ ಬೆಂಬಲಕ್ಕೆ ಬೈಬೈ ಹೇಳಲಿದೆ ಮೈಕ್ರೋಸಾಫ್ಟ್

By Shwetha
|

ನೀವು ಪ್ರಸ್ತುತ ವಿಂಡೋಸ್ ಫೋನ್ 7.8 ಬಳಕೆದಾರರಾಗಿದ್ದು ಮತ್ತು ಅದರಲ್ಲೇ ನೀವು ಹೆಚ್ಚು ಖುಷಿಪಟ್ಟವರಾಗಿದ್ದರೆ ಈ ಮಾತು ನಿಜಕ್ಕೂ ನಿಮಗೆ ದಿಗ್ಭ್ರಮೆಯನ್ನು ಉಂಟು ಮಾಡಬಹುದು.

ಸಪ್ಟೆಂಬರ್ 9 ರ ನಂತರ ಮೈಕ್ರೋಸಾಫ್ಟ್ 7.8 ಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತಿದೆ. ಇದನ್ನು ಇನ್ನಷ್ಟು ಆವಿಷ್ಕಾರಗಳಿಗೆ ಒಯ್ಯುವ ಮಹತ್ವಾಕಾಂಕ್ಷೆ ಕಂಪೆನಿಗಿದ್ದು ಆ ನಿಟ್ಟಿನಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ. ಇದು ತನ್ನ ಹದುನೆಂಟು ತಿಂಗಳಗಳ "ಮೈನ್‌ಸ್ಟ್ರೀಮ್ ಬೆಂಬಲವನ್ನು" ನಿಲ್ಲಿಸಿ ಹೊಸದರತ್ತ ಮುಖ ಮಾಡಲಿದೆ.

ವಿಂಡೋಸ್ 7.8 ನ ಬೆಂಬಲಕ್ಕೆ ಬೈಬೈ ಹೇಳಲಿದೆ ಮೈಕ್ರೋಸಾಫ್ಟ್

ನಿಮ್ಮ ಫೋನ್‌ನ ಆಪರೇಟಿಂಗ್ ವ್ಯವಸ್ಥೆಗೆ ಅನುಗುಣವಾಗಿ ಮೈಕ್ರೋಸಾಫ್ಟ್ ನವೀಕರಣಗಳನ್ನು ಮಾಡಲಿದ್ದು ಭದ್ರತಾ ಅಂಶಗಳೂ ಇದರಲ್ಲಿ ಸೇರಿಕೊಂಡಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಮೊಬೈಲ್ ಆಪರೇಟರ್‌ಗಳ ಕೈಯಲ್ಲಿ ನವೀಕರಣಗಳ ವಿತರಣೆ ಇದ್ದು ದೇಶ, ಪ್ರದೇಶ ಹಾಗೂ ಹಾರ್ಡ್‌ವೇರ್ ಸಾಮರ್ಥ್ಯಕ್ಕೆ ಅನುಗುಣವಾಗಿ ನವೀಕರಣ ಲಭ್ಯತೆ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.

ಹಳೆಯ ಓಎಸ್‌ನಲ್ಲೇ ಆ ಫೋನ್‌ಗಳು ಕಾರ್ಯನಿರ್ವಹಿಸಲಿದ್ದು ಕಾರ್ಯಾಚರಣೆಗೆ ಇದು ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ಮೈಕ್ರೋಸಾಫ್ಟ್‌ನಿಂದ ಕೂಡ ಹಳೆಯ ಡಿವೈಸ್‌ಗಳಿಗೆ ನವೀಕರಣಗಳು ದೊರೆಯಲಿದ್ದು ಗ್ರಾಹಕರು ಅದನ್ನು ಕಂಪೆನಿಯಿಂದಲೇ ಪಡೆದುಕೊಳ್ಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X