Subscribe to Gizbot

ನಿಮ್ಮ ವಿಂಡೋಸ್‌ ಫೋನ್‌ನಲ್ಲೂ ಲಭ್ಯವಾಗಲಿದೆ ವಾಟ್ಸಾಪ್

Written By:

ನಿಮ್ಮ ಸ್ಮಾರ್ಟ್‌ಫೋನ್ ಈಗಾಗಲೇ ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಮ್ ಅನ್ನು ಆಧಾರಿತವಾಗಿದೆಯೇ ಮತ್ತು ನಿಮ್ಮ ಮೆಚ್ಚಿನ ವಾಟ್ಸಾಪ್ ಮೆಸೆಂಜರ್ ಅನ್ನು ನೀವು ಈಗಾಗಲೇ ಮಿಸ್ ಮಾಡಕೊಂಡಿದ್ದೀರಾ? ಇನ್ನು ಇದರ ಬಗ್ಗೆ ನೀವು ಚಿಂತಿಸಬೇಕಿಲ್ಲ.

ಹೌದು ನಿಮ್ಮ ವಿಂಡೋಸ್ ಫೋನ್‌ಗಳಲ್ಲೂ ನೀವಿನ್ನೂ ವಾಟ್ಸಾಪ್ ಅನ್ನು ಬಳಸಬಹುದಾಗಿದ್ದು ಮೈಕ್ರೋಸಾಫ್ಟ್ ಮತ್ತು ವಾಟ್ಸಾಪ್ ಜೊತೆಯಾಗಿ ಒಗ್ಗೂಡಿ ಈ ಸಂತಸದ ಸುದ್ದಿಯನ್ನು ನಿಮಗೆ ತಲುಪಿಸುತ್ತಿದೆ. ಕೆಲವೊಂದು ಕಾರಣಗಳಿಗಾಗಿ ವಿಂಡೋಸ್ ಫೋನ್‌ನಿಂದ ಈ ಆಪ್ ಅನ್ನು ತೆಗೆದುಹಾಕಲಾಗಿತ್ತು ಆದರೆ ಈಗಾಗಲೇ ಬಂದಿರುವ ಸುದ್ದಿಯ ಪ್ರಕಾರ ವಾಟ್ಸಾಪ್ ನಿಮ್ಮ ಫೋನ್‌ನಲ್ಲಿ ಶೀಘ್ರವೇ ಸೇರಿಕೊಳ್ಳಲಿದೆ.

ನಿಮ್ಮ ವಿಂಡೋಸ್‌ ಫೋನ್‌ನಲ್ಲೂ ಲಭ್ಯವಾಗಲಿದೆ ವಾಟ್ಸಾಪ್

ವಾಟ್ಸಾಪ್ ಅನ್ನು ಬಳಸಿದಾಗ ಪೋನ್‌ನಲ್ಲಿ ಉಂಟಾಗುತ್ತಿದ್ದ ಬ್ಯಾಟರಿ ಸಮಸ್ಯೆ, ಕೆಲವೊಂದು ಬೇಡದ ಅಧಿಸೂಚನೆಗಳನ್ನು ವಾಟ್ಸಾಪ್ ಇತ್ತೀಚೆಗೆ ನಿವಾರಿಸಿದ್ದು ಕೊನೆಗೂ ಗ್ರಾಹಕರ ಬೇಡಿಕೆಗೆ ಬಗ್ಗಿದೆ. ಮೈಕ್ರೋಸಾಫ್ಟ್ 8.1 ಅನ್ನು ಸುಧಾರಣೆಗೆ ತಂದಲ್ಲಿಂದ ವಿಂಡೋಸ್ ಫೋನ್ ಬಳಕೆದಾರರು ಈ ಸಮಸ್ಯೆಗೆ ಒಳಗಾಗಿದ್ದರು.

ಕೆಲವು ವರದಿಯ ಪ್ರಕಾರ ವಿಂಡೋಸ್ ಫೋನ್ 8.1 ಪೂರ್ವ ಅಳವಡಿಸಿಕೊಂಡವರಿಗೆ ಮಾತ್ರ ವಾಟ್ಸಾಪ್ ಸಮಸ್ಯೆ ಕಾಡಿತ್ತು ಎಂದಾಗಿದೆ. ವಾಟ್ಸಾಪ್ ಅನ್ನು ಹೊಸದಾಗಿ ವಿಂಡೋಸ್ ಫೋನ್‌ನಲ್ಲಿ ಅಳವಡಿಸಲಾಗುತ್ತದೆಯೇ ಅಥವಾ ಮುಂಚಿನ ಆವೃತ್ತಿಯನ್ನೇ ಮುಂದುವರಿಸಲಾಗುವುದೇ ಎಂಬುದು ವಾಟ್ಸಾಪ್ ಡೆವಲಪರ್ ಬಿಟ್ಟಿರುವ ಅಂಶವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot