8.1 ಆವೃತ್ತಿ ಫೋನ್‌ನಲ್ಲಿ ತಂದಿರುವ ವಿಶೇಷತೆ ಏನು?

By Shwetha
|

ಫಿನ್ನಿಶ್ ಸ್ಮಾರ್ಟ್‌ಫೋನ್ ತಯಾರಕ ನೋಕಿಯಾವನ್ನು ಈಗಾಗಲೇ ತನ್ನ ವಶಕ್ಕೆ ತೆಗೆದುಕೊಂಡಿರುವ ಮೈಕ್ರೋಸಾಫ್ಟ್ ರಾಜೀವ್ ಸೂರಿಯನ್ನು ತನ್ನ ಹೊಸ ಸಿಇಒ ಆಗಿ ಘೋಷಿಸಿದೆ. ಬೆಂಗಳೂರಿನಲ್ಲಿ ನಡೆದ ಈ ಈವೆಂಟ್‌ನಲ್ಲಿ ಕಂಪೆನಿ ತನ್ನ 8.1 ಓಎಸ್ ಆವೃತ್ತಿಯನ್ನು ಕೂಡ ಘೋಷಿಸಿದೆ. ಲ್ಯೂಮಿಯಾದ ಎಲ್ಲಾ ಡಿವೈಸ್‌ಗಳು ಈ ಆವೃತ್ತಿಯನ್ನು ಕೂಡಲೇ ಪಡೆದುಕೊಳ್ಳಲಿವೆ.

ಏಪ್ರಿಲ್ 14 ರಂದು ನಡೆದ ಪ್ರೀವ್ಯೂನಲ್ಲಿ ಈ ನವೀಕರಣ ಪ್ರಾರಂಭಿಕವಾಗಿ ನಡೆದಿದ್ದು ವಿಂಡೋಸ್ 8.1 ಲಾಂಚಿಂಗ್ ಆಗುವ ಮುನ್ನವೇ ಬಹಳಷ್ಟು ಬಾರಿ ಸೋರಿಕೆಯಾಗಿದೆ. ನೋಕಿಯಾದ ಹೆಚ್ಚಿನ ಅಭಿಮಾನಿಗಳು ಈ ವೈಶಿಷ್ಟ್ಯವನ್ನು ಕುರಿತು ಹೆಚ್ಚು ತಿಳಿದಿದ್ದಾರೆ ಮತ್ತು ಓಎಸ್ ಕುರಿತು ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಜಗತ್ತಿನ ಎಲ್ಲಾ ವಿಂಡೋಸ್ ಫೋನ್ ಬಳಕೆದಾರರಿಗೆ ವಿಂಡೋಸ್ ಫೋನ್ 8.1 ಅತ್ಯಂತ ನಿರೀಕ್ಷೆವುಳ್ಳದ್ದಾಗಿದೆ ಇದೇ ಓಎಸ್ ಅನ್ನು ವೈಶಿಷ್ಟ್ಯಗೊಳಿಸುತ್ತಿರುವ ಆವೃತ್ತಿಗಳೆಂದರೆ ಲ್ಯೂಮಿಯಾ 930 ಹಾಗೂ ಲ್ಯೂಮಿಯಾ 630 ಯಲ್ಲಿದೆ. ಪತ್ರಿಕಾ ಬಿಡುಗಡೆಯ ಪ್ರಕಾರ, ವಿಂಡೋಸ್ 8.1 ಡಿವೈಸ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ತರಲಿದೆ.

#1

#1

ಸ್ಟಾರ್ಟ್ ಸ್ಕ್ರೀನ್ ಲೇಔಟ್‌ನೊಂದಿಗೆ ಬಂದಿದ್ದು ಇದರ ಬ್ಯಾಕ್‌ಗ್ರೌಂಡ್‌ನಲ್ಲಿ ಫೋಟೋವನ್ನು ಸೆಟ್‌ ಮಾಡುವ ಮೂಲಕ ಹೊಸ ಡಿವೈಸ್‌ಗಳಿಗೆ ನಿಮ್ಮ ಸ್ಮಾರ್ಟ್‌ ಸ್ಕ್ರೀನ್ ಅನ್ನು ಕಾನ್ಫಿಗರ್ ಮಾಡಬಹುದಾಗಿದೆ.

#2

#2

ಹೊಸ ಆಕ್ಷನ್ ಸೆಂಟರ್ ಹೊಸ ಪ್ಲಾಟ್‌ಫಾರ್ಮ್ ನವೀಕರಣಗಳೊಂದಿಗೆ ಬಂದಿದ್ದು ನಿಮ್ಮೆಲ್ಲಾ ಅಧಿಸೂಚನೆಗಳು ಫೋನ್‌ನಲ್ಲಿ ಬರಲಿವೆ.

#3

#3

ಹೊಸ ಕ್ಯಾಲೆಂಡರ್ ಹೊಸ ವಿನ್ಯಾಸದೊಂದಿಗೆ ಬಂದಿದ್ದು ಸುಧಾರಿತ ನ್ಯಾವಿಗೇಶನ್ ದಿನಗಳು/ವಾರಗಳು/ತಿಂಗಳುಗಳು ಹೀಗೆ ಬಂದಿದ್ದು ಇದು ವಾರದ ಸಂಪೂರ್ಣ ಚಿತ್ರಣವನ್ನು ನಿಮಗೆ ನೀಡಲಿದೆ. ಇದರಲ್ಲಿ ತಿಂಗಳ ವೀಕ್ಷಣೆಯನ್ನು ನಿಮಗೆ ಚೆನ್ನಾಗಿ ಮಾಡಬಹುದಾಗಿದೆ.

#4

#4

ಗ್ರಾಹಕರನ್ನು ಎಲ್ಲದರ ನಡುವೆ ಇರಿಸುವ ಮೂಲಕ ನಿಮ್ಮ ಫೋನ್‌ನಿಂದ ಸಾಧ್ಯವಾದಷ್ಟು ಪ್ರಯೋಜನಗಳನ್ನು ಪಡೆಯುವಂತೆ ಈ ವಿಂಡೋಸ್ ಮಾಡಿದೆ. ನಿಮ್ಮೆಲ್ಲಾ ಡೇಟಾ, ಸಂಗ್ರಹಣೆ ಮತ್ತು ಬ್ಯಾಟರಿ ಬಳಕೆ ಹೀಗೆ ಎಲ್ಲದರಲ್ಲೂ ಏ ಒನ್ ಎಂದೇ ಹೇಳಬಹುದು.

#5

#5

ಇಂಟರ್ನೆಟ್ ಎಕ್ಸ್‌ಪ್ಲೋರ್‌ನಂತಹ ಅಪ್ಲಿಕೇಶನ್‌ಗಳು ವಿಷಯವನ್ನು ಸಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ 11 ಅನ್ನು ಸರಳವಾಗಿ ಇದರಲ್ಲಿ ನಿರ್ಮಿಸಲಾಗಿದೆ. ಇದು ಉತ್ತಮ ಟ್ಯಾಬ್ ಬ್ರೌಸಿಂಗ್ ಅನುಭವವನ್ನು ನೀಡಲಿದ್ದು ನೀವು ಎಲ್ಲಿದ್ದರೂ ಇದರಿಂದ ವಿಷಯಗಳನ್ನು ಬ್ರೌಸ್ ಮಾಡಬಹುದಾಗಿದೆ.

<center><iframe width="100%" height="510" src="//www.youtube.com/embed/V-j47v9SBqU" frameborder="0" allowfullscreen></iframe></center>

Best Mobiles in India

English summary
This article tells about that Microsoft windows 8.1 review.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X