ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶ್ ಇನ್ನು ವಿಂಡೋಸ್ 8.1 ಗೂ ಲಭ್ಯ

Posted By:

ವಿಂಡೋಸ್ 8.1 ಚಾಲನೆಯಿರುವ ಹ್ಯಾಂಡ್‌ಸೆಟ್ ಅನ್ನು ನೀವು ಈಗಾಗಲೇ ಹೊಂದಿದ್ದೀರೆಂದರೆ, ನೀವು ರಿಮೋಟ್ ಡೆಸ್ಕ್‌ಟಾಪ್ ಪ್ರೀವ್ಯೂ ಅಪ್ಲಿಕೇಶನ್‌ಗೆ ಅಪರಿಚಿತರಾಗಿರಲು ಸಾಧ್ಯವೇ ಇಲ್ಲ.

ಇದು ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡ ಈ ಆಪ್ ಕುರಿತ ಸಾಕಷ್ಟು ದೊಡ್ಡ ಸುದ್ದಿಯೊಂದು ಮೊಬೈಲ್ ಜಗತ್ತಿನಲ್ಲಿ ಪ್ರತಿಧ್ವನಿಸುತ್ತಿದೆ. ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಈಗ ವಿಂಡೋಸ್ 8.1 ನಲ್ಲೂ ಈ ಆಪ್ ಅನ್ನು ಸುಧಾರಿತ ಫೀಚರ್‌ಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಸೇರಿಸಿದೆ. ರಿಮೋಟ್ ಡೆಸ್ಕ್‌ಟಾಪ್ ಪ್ರೀವ್ಯೂ ಅಪ್ಲಿಕೇಶನ್‌ ಒಂದು ಅತಿಮುಖ್ಯವಾದ ವೈಶಿಷ್ಟ್ಯವಾಗಿದ್ದು, ಈ ಆಪ್‌ನಲ್ಲಿದ್ದ ಕೆಲವೊಂದು ಅಂಶಗಳು ಮರೆಯಾಗಿದ್ದವು.

ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶ್ ಇನ್ನು ವಿಂಡೋಸ್ 8.1 ಗೂ ಲಭ್ಯ

ಈಗ ಹೊಸ ನವೀಕರಣವು ಬಿಟ್ಟು ಹೋದ ಅಂಶಗಳನ್ನು ಪುನಃ ಸೇರಿಸುವ ಪಣ ತೊಟ್ಟು ಅದರಲ್ಲಿ ಯಶಸ್ವಿಯಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಗ್ರಾಹಕರ ದೂರುಗಳ ಪಟ್ಟಿಯನ್ನು ಸ್ವೀಕರಿಸಿದ್ದ ಮೈಕ್ರೋಸಾಫ್ಟ್ ಹೊಸ ಸುಧಾರಿತ ನವೀಕರಣವುಳ್ಳ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ನಂಬಿಕೆಯನ್ನು ಇನ್ನಷ್ಟು ಎತ್ತರಕ್ಕೇರಿಸುವ ಪಣ ತೊಟ್ಟಿದೆ.

ವಿಂಡೋಸ್ 8.1 ನಲ್ಲಿ ಟ್ರಾನ್ಸಪರೆಂಟ್ ಲೈವ್ ಟೈಲ್ ಬೆಂಬಲವನ್ನು ಅಪ್ಲಿಕೇಶನ್ ಒದಗಿಸಲಿದೆ ಎಂದು ಮೈಕ್ರೋಸಾಫ್ಟ್ ಘೋಷಿಸಿದೆ. ಇದಲ್ಲದೆ ಇದು ಸಾಕಷ್ಟು ಕೋರಿಕೆಯ ಫೀಚರ್ ಆಗಿದೆ. ವರ್ಡ್ ಫ್ಲೋ ಮತ್ತು ಪ್ರಿಡಿಕ್ಟೀವ್ ಟೆಕ್ಸ್ಟ್ ಅನ್ನು ರಿಮೋಟ್ ಸೆಶನ್‌ನಲ್ಲಿ ವೇಗವಾಗಿ ಟೈಪ್ ಮಾಡಬಹುದಾಗಿದೆ.

ಮೌಸ್ ಪಾಯಿಂಟರ್ ಮೋಡ್‌ನಲ್ಲಿ ಪರದೆಯ ಮೂಲೆಗೆ ಬೆರಳುಗಳನ್ನು ಚಲಿಸುತ್ತಾ ಐಟಂ ಅನ್ನು ಡ್ರಾಗ್ ಮಾಡುವಾಗ ಸ್ಕ್ರೀನ್ ಅನ್ನು ಪ್ಯಾನ್ ಮಾಡುವುದು ಅಥವಾ ಸ್ಪರ್ಶ ಮೋಡ್‌ನಲ್ಲಿ ಪ್ಯಾನ್‌ ನೋಬ್‌ನೊಂದಿಗೆ ಎರಡನೇ ಬೆರಳನ್ನು ಅಂತರ್ಮುಖಗೊಳಿಸುವ ಸಾಮರ್ಥ್ಯವನ್ನು ಮೈಕ್ರೋಸಾಫ್ಟ್ ಹೊಸದಾಗಿ ಸೇರಿಸಿದೆ.

ವಿಂಡೋಸ್ ಫೋನ್ ಸ್ಟೋರ್‌ ಮೂಲಕ ಉಚಿತವಾಗಿ ವಿಂಡೋಸ್ ಫೋನ್‌ಗಾಗಿ ಮೈಕ್ರೋಸಾಫ್ಟ್ ರಿಮೋಟ್ ಡೆಸ್ಕ್‌ಟಾಪ್ ಪ್ರೀವ್ಯೂವನ್ನು ಬಳಕೆದಾರರು ಇದೀಗ ಡೌನ್‌ಲೋಡ್ ಮಾಡಬಹುದು.. ಈ ಅಪ್ಲಿಕೇಶನ್ ವಿಂಡೋಸ್ ಫೋನ್ 8.1 ಚಾಲಿತ ಸಾಧನಗಳೊಂದಿಗೆ ಮಾತ್ರ ಸಂಯೋಜಿಸಲ್ಪಟ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot