ಲಕ್ಷಾಂತರ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರಾಟ ಎನ್ನುತ್ತಿದೆ ನೋಕಿಯಾ ಮೊಬೈಲ್ ಸಪೋರ್ಟ್ ಆಪ್
ಈ ವರ್ಷವಷ್ಟೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಜಗತ್ತಿಗೆ ಕಾಲಿರಿಸಿದ HMD ಗ್ಲೋಬಲ್ ಲಕ್ಷಾಂತರ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಮಾರಾಟಮಾಡಿ ಯಶಸ್ವಿಯಾಗಿ ಮುನ್ನುಗ್ಗತ್ತಿದೆ.
ಈ ವರ್ಷವಷ್ಟೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ರಂಗಕ್ಕೆ ಕಾಲಿರಿಸಿದ HMD ಗ್ಲೋಬಲ್ ಈಗಾಗಲೇ ನೋಕಿಯಾ 6, ನೋಕಿಯಾ 8, ನೋಕಿಯಾ 5 ಮತ್ತು ನೋಕಿಯಾ 3 ಎಂಬ 4 ನೋಕಿಯಾ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದೆ. ಇಷ್ಟೇ ಅಲ್ಲದೆ ಈ ವರ್ಷಾಂತ್ಯದೊಳಗೆ ನೋಕಿಯಾ 2 ಮತ್ತು ನೋಕಿಯಾ 9 ಎಂಬ ಇನ್ನೆರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಹುನ್ನಾರದಲ್ಲಿದೆ HMD.

ಜನರು ಈಗಾಗಲೇ ನೋಕಿಯಾ ಫೋನ್ಗಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದ್ದು ಅದರ ಬ್ರ್ಯಾಂಡ್ ನ ಮೇಲಿರುವ ವಿಶ್ವಾಸ ಮತ್ತು ಕೈಗೆಟಕುವ ದರಗಳು ಜನರ ಮನಗೆದ್ದಿದೆ. ಆದರೆ ಅದರ ರೀಟೈಲ್ ಮಾರಾಟದ ಅಂಕಿ ಅಂಶಗಳನ್ನಾಧಾರಿಸಿ ಅದರ ಯಶಸ್ಸನ್ನು ನಿರ್ಧರಿಸಲು ಇನ್ನು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
HMD ಕಂಪೆನಿಯು ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಕಂಪೆನಿಗೆ ತಮ್ಮ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶಸ್ವೀ ಆಗಿದೆ ಎಂಬುದು ತಿಳಿದೇ ಇರುತ್ತದೆ.ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಸ್ಯಾಮ್ಸಂಗ್ ಅಥವಾ ಆಪಲ್ ನಂತೆ ಬಹು ಸಂಖ್ಯೆಯಲ್ಲಿ ಮಾರಾಟವಾಗಿರಲಿಕ್ಕಿಲ್ಲ. ಆದರೆ ಯಾವ ಕಂಪೆನಿ ತಾನೇ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇಂತಹ ದಿಗ್ಗಜರಿಗೆ ಪೈಪೋಟಿ ಕೊಡಬಯಸುವುದಿಲ್ಲ ಹೇಳಿ!
ಸೆಪ್ಟಂಬರ್ ನಲ್ಲಿ ಬಂದಂತಹ Nokiateca ವರದಿಯಲ್ಲಿ HMD ಯ ಚೀಫ್ ಮಾರ್ಕೆಟಿಂಗ್ ಆಫೀಸರ್, ಪೆಕ್ಕಾ ರಂಟಾಲ್ ಅವರು ಇದುವರೆಗೆ ಎಷ್ಟು ಸ್ಮಾರ್ಟ್ಫೋನ್ ಮಾರಾಟವಾಗಿದೆಯೆಂದು ಅಂದಾಜು ತಿಳಿಸಿದ್ದಾರೆ.ಈ ವರದಿಯಲ್ಲಿ ಅವರು 10 ಲಕ್ಷಕ್ಕೂ ಅಧಿಕ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಮತ್ತು ಕೋಟ್ಯಂತರ ನೋಕಿಯಾ ಫೀಚರ್ ಫೋನ್ಗಳು ಮಾರಾಟವಾಗಿರುವುದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.
ಈ ಸಂಖ್ಯೆಯನ್ನು NokiaPowerUser ನ ವರದಿ ಕೂಡ ಖಾತ್ರಿ ಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ನೋಕಿಯಾ ಮೋಬೈಲ್ ಸಪೋರ್ಟ್ ಆಪ್ 1 ಮಿಲಿಯನ್ ನಿಂದ 5 ಮಿಲಿಯನ್ ಗಳಷ್ಟು ಬಾರಿ ಡೌನ್ಲೋಡ್ ಆಗಿದೆ ಎಂದು ತಿಳಿಸಿದೆ. ನೋಕಿಯಾ ಮೊಬೈಲ್ ಸಪೋರ್ಟ್ ಆಪ್ ಇಷ್ಟು ಭಾರಿ ಸಂಖ್ಯೆಯಲ್ಲಿ ಡೌನ್ಲೋಡ್ ಆಗಿರುವುದು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿರುವುದನ್ನು ಸೂಚಿಸುತ್ತದೆ.
ನೋಕಿಯಾ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಓರಿಯೋ ಅಪ್ಡೇಟ್ ಪಡೆಯಲಿರುವ ಮೊದಲ ಸ್ಮಾರ್ಟ್ಫೋನ್ ಆಗಲಿದ್ದು , ಭಾರಿ ಸಂಖ್ಯೆಯ ಮಾರಾಟ ಅಚ್ಚರಿಪಡುವಂಥದ್ದಲ್ಲ.HMD ಸಂಸ್ಥೆಯು ಅದರ ಫ್ಲ್ಯಾಗ್ಶಿಪ್ ಮೊಬೈಲ್ ಆದ ನೋಕಿಯಾ 8 ಸ್ಮಾರ್ಟ್ಫೋನ್ ಗೆ ಅಕ್ಟೋಬರ್ ತಿಂಗಳಾಂತ್ಯದೊಳಗೆ ಓರಿಯೋ ಅಪ್ಡೇಟ್ ತರಲಿದೆ. ಇನ್ನುಳಿದ ನೋಕಿಯಾ ಸ್ಮಾರ್ಟ್ಫೋನ್ಗಳಿಗೂ ಈ ವರ್ಷಾಂತ್ಯದೊಳಗೆ ಓರಿಯೋ ಅಪ್ಡೇಟ್ ಬರಲಿದೆ.


Click it and Unblock the Notifications








