ಜಿಯೋ ಫೋನ್ ಬೇಕಾ..? ಈ ಆಪ್‌ ಹಾಕಿಕೊಳ್ಳಿ..!

|

ಜಿಯೋ ಫೋನ್ ದೇಶದ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿರುವುದಲ್ಲದೇ ಕಳೆದ ವರ್ಷ ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಫೋನ್ ಎನ್ನುವ ಖ್ಯಾತಿಗೂ ಪಾತ್ರವಾಗಿತ್ತು. ಸುಮಾರು 60ಕ್ಕೂ ಹೆಚ್ಚು ಫೋನ್‌ಗಳು ಮಾರಾಟವಾಗಿತ್ತು ಎನ್ನಲಾಗಿದೆ. ಈ ಫೋನ್ ಮಾರಾಟವನ್ನು ಇನ್ನಷ್ಟು ಹೆಚ್ಚು ಮಾಡುವ ಸಲುವಾಗಿ ಜಿಯೋ ಹೊಸದೊಂದು ಪ್ಲಾನ್ ವೊಂದನ್ನು ಮಾಡಿದೆ.

ಇಷ್ಟು ದಿನ ಜಿಯೋ ಮಾತ್ರವೇ ಜಿಯೋ ಫೋನ್ ಮಾರಾಟ ಮಾಡುತ್ತಿತ್ತು, ಆದರೆ ಇನ್ನು ಮುಂದೆ ಮೊಬಿಕ್ವೀಕ್ ಸಹ ಜಿಯೋ ಫೋನ್ ಮಾರಾಟ ಮಾಡಲಿದೆ. ಈ ಕುರಿತು ಜಿಯೋ ದೊಂದಿಗೆ ಮೊಬಿಕ್ಬೀಕ್ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಜಿಯೋ ಬಿಟ್ಟರೆ ಅಧಿಕೃತವಾಗಿ ಜಿಯೋ ಫೋನ್ ಮೊಬಿಕ್ವೀಕ್ ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಹೀಗಾಗಿ ಜಿಯೋ ಫೋನ್ ಬೇಕು ಎಂದರೆ ಈ ಆಪ್ ಹಾಕಿಕೊಳ್ಳಿ.

ಮೊಬಿಕ್ಚೀಕ್ ನಲ್ಲಿ ಜಿಯೋ ಫೋನ್:

ಮೊಬಿಕ್ಚೀಕ್ ನಲ್ಲಿ ಜಿಯೋ ಫೋನ್:

ಮೊಬಿಕ್ಚೀಕ್ ಬಳಕೆದಾರರು ಜಿಯೋ ಪೋನ್‌ ಅನ್ನು ಖರೀಸುವ ಸಲುವಾಗಿ ರೂ.1500 ಪಾವತಿ ಮಾಡಬೇಕಾಗಿದೆ. ಮಾಡಿದ ನಂತರದಲ್ಲಿ ಪೇಮೆಂಟ್ ಸ್ವೀಕರಿಸಿದ ಮೇಸೆಜ್ ಬರಲಿದ್ದು, ಅದರಲ್ಲಿ ಜಿಯೋ ಫೋನ್ ಕಲೆಕ್ಟ್ ಮಾಡಿಕೊಳ್ಳುವ ಅಡ್ರಸ್ ನೀಡಲಾಗುತ್ತದೆ, ಅಲ್ಲಿ ಹೋಗಿ ಪೋನ್ ಕಲೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಜಿಯೋ ಫೋನ್ ಪ್ಲಾನ್:

ಜಿಯೋ ಫೋನ್ ಪ್ಲಾನ್:

ಜಿಯೋ ಫೋನ್‌ಗಾಗಿಯೇ ನೀಡಿರುವ ರೂ.49ರ ಪ್ಲಾನ್‌ನಲ್ಲಿ ಬಳಕೆದಾರರಿಗೆ 1GB 4G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರು ಅನ್‌ಲಿಮೆಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಇದು ಜಿಯೋ ಫೋನ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಲಿದೆ.

ಬೇಡಿಕೆ:

ಬೇಡಿಕೆ:

ಗುಣಮಟ್ಟ ಹಾಗೂ ಉತ್ತಮ ಸೇವೆಯನ್ನು ನೀಡುತ್ತಿದ್ದ ಜಿಯೋ ಫೋನ್ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಉಳಿಸಿಕೊಂಡಿದೆ. ಈಗಾಗಲೇ ಎರಡನೇ ಹಂತದಲ್ಲಿ ಜಿಯೋ ಫೋನ್ ಬಿಡುಗಡೆಯಾಗಿದೆ.

Best Mobiles in India

English summary
Mobikwik Becomes 1st Mobile Wallet to Sell Jio Phones. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X