Subscribe to Gizbot

ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರುವಂತೆ ಮಾಡುವುದು ಹೇಗೆ

Posted By: Varun
ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರುವಂತೆ ಮಾಡುವುದು ಹೇಗೆ

ನಮಗೆಲ್ಲರಿಗೂ ಫೋನ್ ಗಳ ಬ್ಯಾಟರಿ ಚಾರ್ಜ್ ಮಾಡುವುದು ಗೊತ್ತು. ಆದರೆ ಸಮರ್ಪಕವಾಗಿ ಚಾರ್ಜ್ ಮಾಡುವುದು ಗೊತ್ತಿಲ್ಲ. ಅದರಲ್ಲೂ ಸ್ಮಾರ್ಟ್ ಫೋನ್ ಗಳ ಬ್ಯಾಟರಿಗಳು ಬೇಗ ಡಿಸ್ಚಾರ್ಜ್ ಆಗುವುದರಿಂದ ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗಿ ಬರುತ್ತದೆ.

ನಿಮ್ಮ ಬ್ಯಾಟರಿಯನ್ನು ಒಮ್ಮೆ ಮಾಪನಾಂಕ ಮಾಡಿಕೊಂಡರೆ, ಬ್ಯಾಟರಿಯ ಬಾಳಿಕೆ ಹೆಚ್ಚಾಗುವಂತೆ ಮಾಡಬಹುದು. ಇಲ್ಲಿದೆ ನೋಡಿ ನೀವು ಗಮನಿಸಬೇಕಾದ ಅಂಶಗಳು:

  • ಮೊದಲಿಗೆ ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್ಚಾರ್ಜ್ ಮಾಡಿ.

  • ಬ್ಯಾಟರಿ ಸಂಪೂರ್ಣ ಖಾಲಿಯಾದ ನಂತರ 100 % ಚಾರ್ಜ್ ಮಾಡಿ.

  • ನಿಮ್ಮ ಮೊಬೈಲ್ ನಲ್ಲಿ ಬ್ಯಾಟರಿ ಫುಲ್ ಎಂದು ತೋರಿಸಿದೊಡನೆ ಚಾರ್ಜ್ ಮಾಡುವುದನ್ನು ನಿಲ್ಲಿಸಿ.

  • ನಂತರ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ಹೊರತೆಗೆದು ಮತ್ತೊಮ್ಮೆ ಹಾಕಿ ಸ್ವಿಚ್ ಆನ್ ಮಾಡಿ.

  • ಈ ರೀತಿ 2-3 ದಿನ ಮಾಡಿದರೆ ನಿಮ್ಮ ಬ್ಯಾಟರಿ ಸಮರ್ಪಕವಾಗಿ ಚಾರ್ಜ್ ಡಿಸ್ಚಾರ್ಜ್ ಆಗುತ್ತದೆ. ಆಮೇಲೆ ನೀವು ಮಾಮೂಲಿನಂತೆ ಹೇಗೆ ಚಾರ್ಜ್ ಮಾಡುತ್ತೀರೋ ಹಾಗೆ ಮಾಡಿ.
ಈ ರೀತಿ ಮಾಡುವುದರಿಂದ ನಿಮ್ಮ ಬ್ಯಾಟರಿಯ ಸಂಪೂರ್ಣ ಕಾರ್ಯಕ್ಷಮತೆಯಿಂದ ಕೆಲಸ ಮಾಡುತ್ತದೆ.

ಈ ಮೇಲಿನ ಅಂಶಗಳ ಜೊತೆ ನೀವು ಮತ್ತೆರಡು ಮುಖ್ಯ ಅಂಶಗಳನ್ನು ಪಾಲಿಸಬೇಕು. ಅದೇನೆಂದರೆ, ನಿಮ್ಮ ಫೋನ್ ನಲ್ಲಿ ಬ್ಲೂ-ಟೂತ್ , ಜಿಪಿಎಸ್ ಮತ್ತು ವೈಫೈ ಉಪಯೋಗಿಸದೆ ಇರುವ ಸಮಯದಲ್ಲಿ ಅವುಗಳನ್ನು ಚಲಾವಣೆಯಲ್ಲಿ ಇಡಬೇಡಿ ಹಾಗು ರಾತ್ರಿ ಚಾರ್ಜ್ ಗೆ ಹಾಕಿ ಮಲಗಬೇಡಿ. ಅವಶ್ಯಕ್ಕಿಂತಾ ಚಾರ್ಜ್ ಮಾಡಿದರೂ ಬ್ಯಾಟರಿಗೆ ಹಾನಿಯಾಗುವುದು.

ಇನ್ನುಮೇಲೆ ಬ್ಯಾಟರಿ ಚಾರ್ಜ್ ಮಾಡುವಾಗ ಈ ಅಂಶಗಳನ್ನು ಜ್ಞಾಪಕದಲ್ಲಿ ಇಟ್ಟು ಕೊಳ್ಳುತ್ತೀರಾತಾನೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot