ಮೊಬೈಲ್ ಹೆಚ್ಚು ಬಿಸಿಯಾಗುತ್ತಿದೆಯೇ..? ಇಲ್ಲಿದೆ ಪರಿಹಾರ..!
ಅಧಿಕ ಸ್ಮಾರ್ಟ್‌ಫೋನ್ ಬಳಕೆದಾರರ ಸಾಮಾನ್ಯ ಸಮಸ್ಯೆ ಅಂದರೆ, ಮೊಬೈಲ್ ಹೆಚ್ಚು ಬಿಸಿಯಾಗುವುದು ಮತ್ತು ಬ್ಯಾಟರಿ ಬೇಗ ಖಾಲಿಯಾಗುವುದು. ಈ ಸಮಸ್ಯೆಯಿಂದ ಬಹಳಷ್ಟು ಮೊಬೈಲ್ ಬಳಕೆದಾರರು ಪರದಾಡಿರುವುದಂತು ನಿಜ. ಯಾವುದೇ ಸ್ಮಾರ್ಟ್‌ಫೋನ್ ಆಗಿರಲಿ ಒಂದು ಹಂತದವರೆಗೂ ಸಾಮಾನ್ಯವಾಗಿ ಬಿಸಿಯಾಗೇ ಆಗುತ್ತದೆ. ಇದು ಗಂಭೀರ ಸಮಸ್ಯೆ ಏನು ಅಲ್ಲ. ಆದರೆ, ಮೊಬೈಲ್ ಫೋನ್ ಹೆಚ್ಚು ಬಿಸಿಯಾಗುವುದು ಮತ್ತು ಬ್ಯಾಟರಿ ವೇಗವಾಗಿ ಖಾಲಿಯಾಗುವುದು ಗಂಭೀರ ಸಮಸ್ಯೆಯಾಗಿದ್ದು, ಫೋನ್ ಸಂಪೂರ್ಣ ಹಾಳಾಗುವ ಮುನ್ನ ಗಮನಿಸಬೇಕಾದ ಅಗತ್ಯವಿರುತ್ತದೆ.

ಫೋನ್ ಏಕೆ ಬಿಸಿಯಾಗುತ್ತದೆ?
ಫೋನ್‌ನ ಪಿಸಿಬಿಯಲ್ಲಿ ಹಾಫ್-ಶಾರ್ಟಿಂಗ್ ಇರುತ್ತದೆ. ಹಾಫ್-ಶಾರ್ಟಿಂಗ್ ಎಂದರೆ ಫೋನ್ ಬೆಂಬಲಿಸುವ ಚಿಕ್ಕ ಚಿಕ್ಕ ಎಲೆಕ್ಟ್ರಾನಿಕ್ ಘಟಕಗಳು, ಸಾಮಾನ್ಯವಾಗಿ ಬ್ಯಾಟರಿ ಕನೆಕ್ಟರ್ ಬಳಿ ಈ ಘಟಕಗಳು ಇರುತ್ತವೆ. ಈ ಸಣ್ಣ ಎಲೆಕ್ಟ್ರಾನಿಕ್ ಘಟಕಗಳು ಸಾಮಾನ್ಯವಾಗಿ ಎಸ್‌ಎಮ್‌ಡಿ ಕೆಪಾಸಿಟರ್ ಆಗಿರಬಹುದು. ಅಥವಾ ಎಸ್‌ಎಂಡಿ ಡಯೋಡ್ ಹಾಗೂ ಎಸ್‌ಎಂಡಿ ರೆಸಿಸ್ಟರ್ ಕೂಡ ಆಗಿರಬಹುದು. ಇವುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಮೊಬೈಲ್ ಫೋನ್ ಹೆಚ್ಚು ಬಿಸಿಯಾಗಲು ಶುರು ಮಾಡುತ್ತದೆ.

ಈ ಸಮಸ್ಯೆ ಬಗೆಹರಿಸಲು ನೀವು ದೋಷಯುಕ್ತ ಘಟಕವನ್ನು ತೆಗೆದುಹಾಕಬೇಕು. ಕೆಪಾಸಿಟರ್ ಆಗಿದ್ದರೆ ಬದಲಾಯಿಸುವುದು ಕಡ್ಡಾಯವಲ್ಲ. ಆದರೆ, ಅದು ರೆಸಿಸ್ಟರ್ ಅಥವಾ ಡಯೋಡ್ ಆಗಿದ್ದರೆ, ಹೊಸದನ್ನು ಹಾಕಲೇಬೇಕಾಗಿರುತ್ತದೆ.

ಫುಲ್ ಶಾರ್ಟಿಂಗ್
ಓವರ್‌ಹೀಟ್ ಆಗಿ ಫೋನ್ ಆನ್ ಆಗದಿದ್ದರೆ, ಮೊಬೈಲ್‌ನ ಪಿಸಿಬಿಯಲ್ಲಿ ಫುಲ್ ಶಾರ್ಟಿಂಗ್ ಇರುತ್ತದೆ. ಪೂರ್ಣ ಶಾರ್ಟಿಂಗ್ ಎಂದರೆ ಕೆಲವು ಪ್ರಮುಖ ಐಸಿಗಳು ದೋಷಪೂರಿತವಾಗಿರುತ್ತವೆ. ಅವುಗಳನ್ನು ರಿಪೇರಿ ಮಾಡಬೇಕು ಅಥವಾ ಬದಲಿಸುವ ಅಗತ್ಯವಿರುತ್ತದೆ.

ಚಾರ್ಚಿಂಗ್ ಸಮಯದಲ್ಲಿ ಫೋನ್ ಬಿಸಿ
ಚಾರ್ಜಿಂಗ್ ಸಂದರ್ಭಗಳಲ್ಲಿ ಫೋನ್ ಬಿಸಿಯಾಗುತ್ತಿದ್ದರೆ ಬ್ಯಾಟರಿಯ ಸಾಮರ್ಥ್ಯ ಮುಗಿದಿರುತ್ತದೆ. ಅಥವಾ ಬ್ಯಾಟರಿ ಕನೆಕ್ಟರ್‌ನಲ್ಲಿ ದೋಷವಿರುತ್ತದೆ. ಅವುಗಳನ್ನು ಬದಲಾಯಿಸದರೆ ಫೋನ್ ಹೆಚ್ಚು ಬಿಸಿಯಾಗುವುದಿಲ್ಲ.

ಗೇಮ್ ಆಡುವಾಗ ಅಧಿಕ ಬಿಸಿ
ಸಾಮಾನ್ಯವಾಗಿ ನಿಮ್ಮ ಫೋನ್‌ನ ಹಾರ್ಡ್‌ವೇರ್ ಗೇಮ್ ಲೋಡ್‌ನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಫೋನ್‌ನ ಪ್ರೊಸೆಸರ್ ಮತ್ತು ಇತರ ಪ್ರಮುಖ ಐಸಿಗಳು ಗೇಮಿಂಗ್‌ಗೆ ಸೂಕ್ತವಾಗಿರುವುದಿಲ್ಲ. ಹಾಗಾಗಿ ಫೋನ್ ಹೆಚ್ಚು ಬಿಸಿಯಾಗುತ್ತಿರುತ್ತದೆ. ಉತ್ತಮ ಹಾರ್ಡ್‌ವೇರ್ ಕಾನ್ಫಿಗರೇಶನ್ ಸ್ಮಾರ್ಟ್‌ಫೋನ್ ಮತ್ತು ಇತ್ತೀಚಿನ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೆ ಗೇಮಿಂಗ್ ಸಂದರ್ಭದಲ್ಲಿ ಹೆಚ್ಚು ಬಿಸಿಯಾಗುವುದಿಲ್ಲ.


Click it and Unblock the Notifications








