1000 ರೂಪಾಯಿಗೆ ಟಾಪ್ 10 ಮೊಬೈಲ್

By Varun
|
1000 ರೂಪಾಯಿಗೆ ಟಾಪ್ 10 ಮೊಬೈಲ್


ಸಾವಿರರೂಪಾಯಿ ಬಜೆಟ್ ನಲ್ಲಿ ಮೊಬೈಲ್ ತೆಗೆದುಕೊಳ್ಳುವ ಆಲೋಚನೆ ಏನಾದರೂ ನಿಮ್ಮಲ್ಲಿ ಇದೆಯಾ? ಹಾಗಿದ್ದರೆ ನಮ್ಮ ಟಾಪ್ 10 ಮೊಬೈಲ್ ಪಟ್ಟಿ ಇಲ್ಲಿದೆ ನೋಡಿ.

1. ಮೈಕ್ರೋ ಮ್ಯಾಕ್ಸ್ x111- 70 ಗ್ರಾಂ ತೂಕವಿದ್ದು, 1.4 ಇಂಚ್ ಬಣ್ಣದ ಡಿಸ್ಪ್ಲೇ, 32 ಎಂ.ಬಿ ಮೆಮೊರಿ ಹಾಗು ಕಾರ್ಡ್ ಸ್ಲಾಟ್ ಹೊಂದಿದೆ. ಯೂ.ಎಸ್.ಬಿ, ರೇಡಿಯೋ ಕೂಡ ಹೊಂದಿದೆ.

2. ನೋಕಿಯಾ 1280- 82 ಗ್ರಾಂ ತೂಕವಿದ್ದು,1 .36 ಇಂಚ್ ಡಿಸ್ಪ್ಲೇ, 8 ಗಂಟೆ ಟಾಕ್ ಟೈಮ್ ಸಾಮರ್ಥ್ಯದ ಬ್ಯಾಟರಿ, ಎಫ್. ಎಂ.ರೇಡಿಯೋ, ಮೆಮೊರಿ ಕಾರ್ಡ್ ಹಾಗು 3 .5 ಎಂ.ಎಂ ಹೆಡ್ ಫೋನ್ ಜಾಕ್ ಹೊಂದಿದೆ.

3. ಎಲ್. ಜಿ .180- 65 ಗ್ರಾಂ ತೂಕದ ಈ ಫೋನ್, 1.5 ಇಂಚ್ ಟಿ.ಎಫ್.ಟಿ ಸ್ಕ್ರೀನ್,ಎಫ್. ಎಂ.ರೇಡಿಯೋ ಜೊತೆ ಬರುತ್ತದೆ. ಇದರ ಬ್ಯಾಟರಿ 17 ಗಂಟೆ ಟಾಕ್ ಟೈಮ್ ಸಾಮರ್ಥ್ಯದ ಬ್ಯಾಟರಿ ಪವರ್ ನೊಂದಿಗೆ ಬರಲಿದೆ.

4.ಮೋಟೊರೋಲ wx 260- 1.8 ಇಂಚ್ ಡಿಸ್ಪ್ಲೇ , 2 ಜಿ.ಬಿ ಕಾರ್ಡ್ ಸ್ಲಾಟ್, ಜಿ. ಪಿ.ಆರ್.ಎಸ್, ಯೂ.ಎಸ್.ಬಿ, ಎಂ. ಪಿ. 3, ಎಫ್. ಎಂ.ರೇಡಿಯೋ ಜೊತೆಗೆ 480 ನಿಮಿಷದ ಟಾಕ್ ಟೈಮ್ ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು ಇದರ ವಿಶೇಷ.

5.ಅಲ್ಕಾಟೆಲ್ o t -230d - ದ್ವಿ-ಸಿಮ್ (ಜಿ.ಎಸ್.ಎಂ+ ಜಿ.ಎಸ್.ಎಂ), 1.5 ಇಂಚ್ ಬಣ್ಣದ ಟಿ.ಎಫ್.ಟಿ ಸ್ಕ್ರೀನ್, ಎಫ್. ಎಂ.ರೇಡಿಯೋ,ಯೂ.ಎಸ್.ಬಿ ಜೊತೆಗೆ 360 ನಿಮಿಷದ ಟಾಕ್ ಟೈಮ್ ಕೊಡುವ ಬ್ಯಾಟರಿ ಇದರಲ್ಲಿದೆ.

6.ಮೈಕ್ರೋ ಮ್ಯಾಕ್ಸ್ x100 - 61 ಗ್ರಾಂ ತೂಕದ ಈ ಫೋನ್, 1.4 ಇಂಚ್ ಬಣ್ಣದ ಟಿ.ಎಫ್.ಟಿ ಡಿಸ್ಪ್ಲೇ, ಎಫ್. ಎಂ.ರೇಡಿಯೋ, ಮೆಮೊರಿ ಕಾರ್ಡ್ ಸ್ಲಾಟ್ ಹೊಂದಿದೆ.

7.ಸಾಮ್ ಸಂಗ್ ಗುರು E1081- 1.4 ಇಂಚ್ ಬಣ್ಣದ ಡಿಸ್ಪ್ಲೇ, 64 ಗ್ರಾಂ ತೂಕದ ಈ ಫೋನ್, ಮೆಮೊರಿ ಕಾರ್ಡ್ ಸ್ಲಾಟ್, ಯೂ.ಎಸ್.ಬಿ ಜೊತೆಗೆ 450 ನಿಮಿಷದ ಟಾಕ್ ಟೈಮ್ ಕೊಡುವ ಬ್ಯಾಟರಿ ಇದರಲ್ಲಿದೆ.

8.ಅಲ್ಕಾಟೆಲ್ o t -517d- ದ್ವಿ-ಸಿಮ್ (ಜಿ.ಎಸ್.ಎಂ+ ಜಿ.ಎಸ್.ಎಂ) ಹೊಂದಿದ್ದು, 66 ಗ್ರಾಂ ತೂಕವಿದ್ದು ಜಿ. ಪಿ.ಅರ್.ಎಸ್, ಬ್ಲೂ-ಟೂತ್, 1.8 ಇಂಚ್ ಬಣ್ಣದ ಡಿಸ್ಪ್ಲೇ, ಯೂ.ಎಸ್.ಬಿ ಮತ್ತು ಕ್ಯಾಮೆರಾ ಕೂಡ ಹೊಂದಿದ್ದು 6 ಗಂಟೆ ಟಾಕ್ ಟೈಮ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

9.ಮೈಕ್ರೋ ಮ್ಯಾಕ್ಸ್ x215- ಇದು ಕೂಡ ದ್ವಿ-ಸಿಮ್ (ಜಿ.ಎಸ್.ಎಂ+ ಜಿ.ಎಸ್.ಎಂ) ಜೊತೆಗೆ ಬರಲಿದ್ದು, 1.5 ಇಂಚ್ ಬಣ್ಣದ ಟಿ.ಎಫ್.ಟಿ ಸ್ಕ್ರೀನ್, 2 ಜಿ.ಬಿ ಮೆಮೊರಿ ಕಾರ್ಡ್ ಸ್ಲಾಟ್, ಯೂ.ಎಸ್.ಬಿ, ಜಿ. ಪಿ.ಅರ್.ಎಸ್, ಎಫ್. ಎಂ.ರೇಡಿಯೋ, ಎಂ. ಪಿ-3 ಪ್ಲೇಯರ್, ಕ್ಯಾಮೆರಾ ಹಾಗು 4 ಗಂಟೆ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

10.ಎಲ್. ಜಿ A100- 1.5 ಇಂಚ್ ಟಿ.ಎಫ್.ಟಿ ಸ್ಕ್ರೀನ್, ಯೂ.ಎಸ್.ಬಿ, ಟಾರ್ಚ್ ಲೈಟ್ ಕೂಡ ಇದ್ದು , 68 ಗ್ರಾಂ ತೂಕದ ಈ ಫೋನ್, 17 ಗಂಟೆ ಟಾಕ್ ಟೈಮ್ ಒದಗಿಸುತ್ತದೆ.

ಯಾವ್ದಕ್ಕೂ ಒಂದು ಹೆಚ್ಚುವರಿ ಫೋನ್ ಮನೆಯಲ್ಲಿ ಇದ್ದರೆ ಒಳ್ಳೆಯದೇ ಅಲ್ಲವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X