ಮೊಬೈಲ್ ವಿಕೀರಣ ತಡೆಗೆ ಸೆಪ್ಟೆಂಬರ್ ವರೆಗೂ ಗಡುವು

Posted By: Staff
ಮೊಬೈಲ್ ವಿಕೀರಣ ತಡೆಗೆ ಸೆಪ್ಟೆಂಬರ್ ವರೆಗೂ ಗಡುವು

ಇನ್ನು ಮೇಲೆ ಮೊಬೈಲ್ ಉತ್ಪಾದಿಸುವ ಕಂಪನಿಗಳು SAR ( ಸ್ಪೆಸಿಫಿಕ್ ಅಬ್ಸಾರ್ಪ್ಶನ್ ರೇಟ್), ಎಂದರೆ ಪ್ರತೀ ಮೊಬೈಲ್ ಸೂಸುವ ವಿಕಿರಣದ ಪ್ರಮಾಣ ವಿರುವ ಟ್ಯಾಗ್ ಜೊತೆ ಮಾರಾಟ ಮಾಡಬೇಕು. ನಿಗದಿತ ಪ್ರಮಾಣಕ್ಕಿಂತ ಜಾಸ್ತಿ ಇದ್ದಲ್ಲಿ ಅವನ್ನ ಮಾರಾಟ ಮಾಡುವ ಹಾಗಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ಒಂದು ಮೂಲದ ಪ್ರಕಾರ ಸೆಪ್ಟೆಂಬರ್ ವೇಳೆಗೆ ಕಡ್ಡಾಯಗೊಳಿಸುವ ಯೋಚನೆ ಇದೆಯಂತೆ.

ಇದರ ಪ್ರಕಾರ ಯಾವುದೇ ಮೊಬೈಲ್ ಇಲ್ಲೇ ಉತ್ಪಾದಿಸಲಿ ಅಥವಾ ಆಮದು ಮಾಡಿಕೊಳ್ಳಲಿ ಅದು SARಗೆ ಒಳಪಡಬೇಕು. ಈಗಾಗಲೇ ಯೂರೋಪ್ ಹಾಗು ಅಮೇರಿಕಾ ದಲ್ಲಿ ಇದು ಜಾರಿಯಲ್ಲಿದ್ದು ಭಾರತದಂಥಾ ದೇಶಗಳಲ್ಲಿ ಈ ರೀತಿಯ ಕಾನೂನುಗಳು ಬಂದರೆ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

Please Wait while comments are loading...
Opinion Poll

Social Counting