ಒಂದು ಬಿಲಿಯನ್‌ಗೆ ಏರಿದ ಆಂಡ್ರಾಯ್ಡ್ ಫೋನ್‌ಗಳ ಮಾರಾಟ

Written By:

ಹೆಚ್ಚಿನ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳು ಗೂಗಲ್‌ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದು ಈ ವರ್ಷ ಇದರ ಸಂಖ್ಯೆ ಒಂದು ಬಿಲಿಯನ್ ಅನ್ನು ಮುಟ್ಟಲಿದೆ ಎಂದು ವರದಿಯೊಂದು ತಿಳಿಸಿದೆ.

ಸ್ಯಾಮ್‌ಸಂಗ್, ಎಚ್‌ಟಿಸಿ, ಸೋನಿ ಮತ್ತು ಇತರ ಹೆಚ್ಚಿನ ತಯಾರಿಕಾ ಕಂಪೆನಿಗಳು ಆಂಡ್ರಾಯ್ಡ್ ಅನ್ನು ತಮ್ಮ ಡಿವೈಸ್‌ಗಳಲ್ಲಿ ಸ್ಥಾಪನೆಗೊಳಿಸಿದ್ದು ಆಂಡ್ರಾಯ್ಡ್‌ಗಿರುವ ಬೇಡಿಕೆಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದೆ.

ಫೋನ್ ಕ್ಷೇತ್ರದಲ್ಲೇ ಕಮಾಲ್ ಮಾಡುತ್ತಿರುವ ಆಂಡ್ರಾಯ್ಡ್

ಆಪಲ್‌ನ ಐಓಎಸ್ ಮತ್ತು ಮೇಕ್ ಓಎಸ್‌ ಆಪರೇಟಿಂಗ್ ಸಿಸ್ಟಮ್‌ಗಳನ್ನು 344 ಮಿಲಿಯನ್ ಹೊಸ ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳು ಬಳಸಿದ್ದು 2013 ರ ವರದಿಯಂತೆ 28 ಶೇಕಡದಷ್ಟು ಡಿವೈಸ್‌ಗಳು ಈ ಆಪರೇಟಿಂಗ್ ಸಿಸ್ಟಮ್‌ ಅನ್ನು ತಮ್ಮ ಫೋನ್‌ನಲ್ಲಿ ಸ್ಥಾಪಿಸಿಕೊಂಡಿವೆ. ಆಪಲ್‌ನ ವಿಪರೀತ ಬೆಲೆಯು ಗ್ರಾಹಕರನ್ನು ಆಂಡ್ರಾಯ್ಡ್ ಉಳ್ಳ ಮಿತದರದ ಫೋನ್ ಅನ್ನು ಖರೀದಿಸುವಂತೆ ಪ್ರೇರೇಪಿಸುತ್ತಿದೆ ಇದರಿಂದಾಗಿ ಆಂಡ್ರಾಯ್ಡ್‌ನ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಗಾರ್ಟನರ್ ಅನಾಲಿಸ್ಟ್ ತಿಳಿಸಿದೆ.

ಮೈಕ್ರೋಸಾಫ್ಟ್‌ನ ಆಪರೇಟಿಂಗ್ ಸಿಸ್ಟಮ್ ಹೆಚ್ಚಾಗಿ ಪಿಸಿ ಮತ್ತು ನೋಟ್‌ಬುಕ್‌ಗಳಲ್ಲಿ ಕಾರ್ಯನಿರ್ವಹಿಸುವಂತಹದ್ದು, 2013 ರಲ್ಲಿ 360 ಮಿಲಿಯನ್‌ ಹೊಸ ಡಿವೈಸ್‌ಗಳಲ್ಲಿ ಚಾಲನೆಯಾಗುತ್ತಿದೆ.

ಪಿಸಿ ಮತ್ತು ನೋಟ್‌ಬುಕ್ ಪರಿಕಲ್ಪನೆಯು ಜನಪ್ರಿಯ ಟ್ಯಾಬ್ಲೆಟ್ ಕಂಪ್ಯೂಟರ್‌ಗಳ ಮಾರಾಟಕ್ಕೆ ಹಾದಿಯನ್ನು ಸುಗಮಗೊಳಿಸಿದ್ದು ಇದರ ಉತ್ಪಾದನೆಯು 47 ಶೇಕಡದಷ್ಟು ಹೆಚ್ಚಾಗಿದೆ ಎಂದು ಗಾರ್ಟನರ್ ಅಂದಾಜಿಸಿದೆ.

ಬಳಕೆದಾರರು ಸಾಂಪ್ರದಾಯಕ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿಗೆ ವಿದಾಯ ಹೇಳಿ ಟ್ಯಾಬ್ಲೆಟ್, ಹಗುರವಾಗಿರುವ ನೋಟ್‌ಬುಕ್‌ಗಳಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ. ಬಳಕೆದಾರರ ಬೇಡಿಕೆಗಳಿಗೆ ಅನುಗುಣವಾಗಿ ಈ ಅತ್ಯಾಧುನಿಕ ಟ್ಯಾಬ್ಲೆಟ್ ಉತ್ಪಾದನೆ ಕೂಡ ಹೆಚ್ಚುತ್ತಿದೆ.

ಮೊಬೈಲ್ ಫೋನ್‌ಗಳ ಮಾರಾಟವನ್ನು ಕೂಡ ಈ ಬಾರಿ ಹೆಚ್ಚಿಸುವ ಬಯಕೆ ಮೊಬೈಲ್ ಕಂಪೆನಿಗಳಿಗಿದ್ದು ಕಡಿಮೆ ಕ್ರಯದ ಫೋನ್‌ಗಳಿಂದ ಮಧ್ಯಮ ಶ್ರೇಣಿಯ ಫೋನ್ ಮಾರಾಟಕ್ಕೂ ಗಮನ ಹರಿಸಬೇಕಾದ್ದು ಅಗತ್ಯವಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot