20 ದಶಕವನ್ನು ಯಶಸ್ವಿಯಾಗಿ ಪೂರೈಸಿದ ಮಿನಿಸ್ಟ್ರಿ ಆಫ್ ಸೌಂಡ್

Posted By:
20 ದಶಕವನ್ನು ಯಶಸ್ವಿಯಾಗಿ ಪೂರೈಸಿದ ಮಿನಿಸ್ಟ್ರಿ ಆಫ್ ಸೌಂಡ್

ದಶಕಗಳಿಂದ ಆಡಿಯೊ ಸಾಧನಗಳನ್ನು ತಯಾರಿಸಿ, ಆಡಿಯೊ ಮಾರುಕಟ್ಟೆಯಲ್ಲಿ ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ ಮಿನಿಸ್ಟ್ರಿ ಆಫ್ ಸೌಂಡ್ ಎಂಬ ಅನುಭವಿ ಕಂಪನಿ ಇದೀಗ ತನ್ನ 20 ವಾರ್ಷಿಕೋತ್ಸದಲ್ಲಿ ಅತ್ಯಂತ ಗುಣಮಟ್ಟದ ಹೆಡ್ ಫೋನ್ ಮಾಡಲ್ ಅನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಹೊಸ ಹೆಡ್ ಫೋನ್ ಆನ್ನು MOS ಹೆಡ್ ಫೋನ್ ಎಂದು ಹೆಸರಿಸಲಾಗಿದೆ. ಈ ಹೊಸ ಹೆಡ್ ಫೋನ್ 3 ರೀತಿಯಲ್ಲಿ ಅಂದರೆ ಓವರ್ ಇಯರ್, ಇನ್ ಇಯರ್ ಹೆಡ್ ಫೋನ್ ಮತ್ತು ಆನ್ ಟ್ರೆಂಡಿ ಕಲರ್ ಎಂಬ ಮಾಡಲ್ ಗಳನ್ನು ತರುತ್ತಿದೆ. ಈ 3 ಮಾಡಲ್ ಗಳಲ್ಲಿ ಬೆಳ್ಳಿಯ ಬಣ್ಣದ ಲೋಗೊವನ್ನು ಬಳಸಲಾಗಿದೆ.

ಈ ಹೊಸ MOS005 ಹೆಡ್ ಫೋನ್ ಗಳು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಹಗುರವಾದ ತೂಕ

* ಬಳಸಲು ಸುಲಭವಾಗಿದೆ

* 50ಮಿಮಿ ಇರುವುದರಿಂದ ಉತ್ತಮ ಆಡಿಯೊ ಗುಣಮಟ್ಟ

* 3.5ಮಿಮಿ ಸ್ಟ್ಯಾಂಡರ್ಡ್ ಜಾಕ್

* ತಯಾರಿಕೆಯಲ್ಲಿ ಅಲ್ಯುಮಿನಿಯಂ ಬಳಕೆ

* 32 Ohms ಇಂಪೆಡೆನ್ಸ್

* 1.5 ಮೀಟರ್ ಉದ್ದದ ಯಾವುದೆ ವಸ್ತುಗೆ ಸಿಕ್ಕಿ ಹಾಕಿ ಕೊಳ್ಳದಂತಹ ರಬ್ಬರ್ ಕೇಬಲ್

* 103 dB ಸೆನ್ಸಿಟಿವಿಟಿ

ಈ ಹೆಡ್ ಫೋನ್ ನಲ್ಲಿ ಈ ಕೆಳಗಿ ದೋಷವನ್ನು ಕೂಡ ಗುರುತಿಸಬಹುದು

* ತುಂಬಾ ಹೊತ್ತು ಬಳಸಿದರೆ ಇಯರ್ ಪ್ಯಾಡ್ ಸ್ವಲ್ಪ ಕಿರಿಕಿರಿ ಅನಿಸಬಹುದು

* ಇದರ ಬೇಸ್ ಚೆನ್ನಾಗಿದ್ದರೂ ಆಕರ್ಷಕ ಅನ್ನುವಷ್ಟು ಇಲ್ಲ

* ಪರಿಣಾಮಕಾರಿಯಾದ ಶಬ್ದದ ಕಂಪನಾಂಕವನ್ನು ಹೊಂದಿಲ್ಲ

ಇಷ್ಟೆಲ್ಲಾ ದೋಷವಿದ್ದರೂ ಇದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತಹ ಒಳ್ಳೆಯ ಗುಣಮಟ್ಟ ಮತ್ತು ನೋಡಲು ಸ್ಟೈಲಿಷ್ ಆಗಿದೆ.

ಈ ಹೆಡ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರು. 2000ಕ್ಕಿಂತ ಅಧಿಕ ದರದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot