"ಅಮ್ಮನ ದಿನ" ಕ್ಕೆ ಈ ಮೊಬೈಲ್ ಕೊಡಿಸಿ

Posted By: Varun

ನಾಳೆ (ಮೇ 13) ವಿಶ್ವದೆಲ್ಲೆಡೆ ತಾಯಿಯ ದಿನವನ್ನು ಆಚರಿಸಲಾಗುತ್ತದೆ. ತಾಯಿಗೆ ಸರಿಸಾಟಿಯಿಲ್ಲದ ದೇವರು ಈ ಭೂಮಿಯಲ್ಲಿ ಇಲ್ಲ. ಹಾಗಾಗಿಯೇ ನಾವು ಆಕೆಯನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ ಹಾಗು ಹೃದಯದಲ್ಲಿ ಆರಾಧಿಸುತ್ತೇವೆ. ನಾಳೆ ನೀವು ಆಕೆಗೊಂದು ಗಿಫ್ಟ್ ಕೊಟ್ಟು ವಿಶ್ ಮಾಡುವ ಆಸೆ ಇದ್ದರೆ ನಮ್ಮ ಕನ್ನಡ ಗಿಜ್ಬಾಟ್ ನಿಂದ ನಿಮಗೊಂದು ಸಲಹೆ.

ಬಹುತೇಕ ಮೊಬೈಲ್ ಕಂಪನಿಗಳು ಹೆಂಗಸರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಾಡಲುಗಳನ್ನು ಬಿಡುಗಡೆ ಮಾಡಿವೆ. ಆದರೆ ಕಳೆದ ವರ್ಷ ಮೈಕ್ರೋ ಮ್ಯಾಕ್ಸ್ ಬಿಡುಗಡೆ ಮಾಡಿದ ಬ್ಲಿಂಗ್ 2 ಎಂಬ ಫೋನ್ ಇವತ್ತಿಗೂ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದೆ. ನೋಡಲು ಆಕರ್ಷಕವಾಗಿದ್ದು ಕ್ರಿಸ್ಟಲ್ ಗಳನ್ನೂ ಹೊಂದಿದೆ. ಈ ಫೋನ್ ಅನ್ನು ನೀವು ನಿಮ್ಮ ತಾಯಿಗೆ ಕೊಡಿಸಬಹುದು.

ಈ ಮೊಬೈಲಿನ ಫೀಚ್ರುಗಳು ಈ ರೀತಿ ಇವೆ:

 • 3G ನೆಟ್ವರ್ಕ್

 • ದ್ವಿ ಸಿಮ್

 • ಆಂಡ್ರಾಯ್ಡ್ 2.2 ಆಪರೇಟಿಂಗ್ ಸಿಸ್ಟಮ್

 • 600 MHz ಪ್ರೋಸೆಸರ್

 • ಮ್ಯೂಸಿಕ್ ಪ್ಲೇಯರ್

 • 32 GB ಬಾಹ್ಯ ಮೆಮೊರಿ

 • ವಿಡಿಯೋ ಪ್ಲೇಯರ್ / ರೆಕಾರ್ಡಿಂಗ್

 • 3MP ಕ್ಯಾಮೆರಾ

 • 3.5 ಮಿಮೀ ಆಡಿಯೋ ಜ್ಯಾಕ್

 • ಬ್ಲೂಟೂತ್

 • GPS , GPRS, ಎಂಎಂಎಸ್, WAP

 • ಸ್ಟ್ಯಾಂಡರ್ಡ್ ಬ್ಯಾಟರಿ
 

ಈ ಮೊಬೈಲಿನ್ ಬೆಲೆ ಕೇವಲ 6 ಸಾವಿರ ರೂಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot