Home
ಮೊಬೈಲ್

ಶಿಯೋಮಿಗೆ ಸೆಡ್ಡು: ಸೈಲೆಂಟಾಗಿ ಸ್ಟೈಲಿಶ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಮೊಟೊ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಹೊಸದಾಗಿ ಮೊಟೊ G6 ಸ್ಮಾರ್ಟ್‌ಫೋನ್ ಸರಣಿಯನ್ನ ಪರಿಚಯಿಸಲು ಕ್ಷಣಗಣನೆ ಆರಂಭದ ಸಂದರ್ಭದಲ್ಲಿ ಮತ್ತೊಂದು ಹೊಸ ಸರಣಿಯ ಬಜೆಟ್ ಫೋನ್‌ವೊಂದು ಸದ್ದು ಮಾಡುತ್ತಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಮೊಟೊ 1S ಸ್ಮಾರ್ಟ್‌ಫೋನ್ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ಶಿಯೋಮಿಗೆ ಸೆಡ್ಡು: ಸೈಲೆಂಟಾಗಿ ಸ್ಟೈಲಿಶ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಮೊಟೊ..!

ಚೀನಾದಲ್ಲಿ ಮೊಟೊರೊಲಾ ಮೊಟೊ 1S ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಸಹ ಈ ಸ್ಮಾರ್ಟ್‌ ಫೋನ್ ಅನ್ನು ಲಾಂಚ್ ಮಾಡಲು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ. ರೂ.12000ದ ಅಸುಪಾಸಿನಲ್ಲಿ ದೊರೆಯುವ ಈ ಸ್ಮಾರ್ಟ್‌ಫೋನ್ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಮೊಟೊ 1S ಸ್ಮಾರ್ಟ್‌ಫೋನ್:

ಮೊಟೊ 1S ಸ್ಮಾರ್ಟ್‌ಫೋನ್:

ಮಾರುಕಟ್ಟೆಯಲ್ಲಿ ಸದ್ಯ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಮೊಟೊ 1S ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 5.7 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, FHD+ ಗುಣಮಟ್ಟದ ಡಿಸ್‌ಪ್ಲೇ ಇದಾಗಿದೆ. ಅಲ್ಲದೇ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ಮೊಟೊ 1S ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಆಕ್ಟಾ ಕೋರ್ ಚಿಪ್‌ಸೆಟ್ ಆಗಿದ್ದು, 4GB RAM ಜೊತೆಗೆ 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 128GB ವರೆಗೂ ಮೆಮೊರಿ ಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಮೊಟೊ 1S ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 12MP + 5MP ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.

ಬ್ಯಾಟರಿ:

ಬ್ಯಾಟರಿ:

3000mAh ಬ್ಯಾಟರಿಯನ್ನು ಮೊಟೊ 1S ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದರೊಂದಿಗೆ ಟರ್ಬೋ ಚಾರ್ಜರ್ ಅನ್ನು ನೀಡಲಾಗಿದ್ದು, ವಾಟರ್‌ ಪ್ರೂಪ್ ಆಗಿದೆ. ಅಲ್ಲದೇ ಫೋನ್ ನೋಡಲು ಉತ್ತಮವಾಗಿದೆ.

Best Mobiles in India

English summary
Moto 1S is now official: Offers dual camera and premium design. to know more visit kannada.gibot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+