ಮೊಟೊ c ಪ್ಲಸ್ ಬಜೆಟ್ ಸ್ಮಾರ್ಟ್ ಫೋನ್...!!!
ಫ್ಲಿಪ್ ಕಾರ್ಟ್ನಿನಲ್ಲಿ ಮಾರಾಟವಾಗುತ್ತಿದ್ದು, ಇದರ ಬೆಲೆ ರೂ.6,999 ಆಗಲಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಇದು ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನುವ ಮಾತು ಕೇಳಿಬಂದಿದೆ.
ಮೊಟಾರೊಲಾ ಭಾರತೀಯ ಮಾರುಕಟ್ಟೆಯಲ್ಲಿ ಮೊಟೊ c ಪ್ಲಸ್ ಸ್ಮಾರ್ಟ್ ಫೋನ್ ಬಿಡುಗಡೆ ಗೊಳಿಸಿದೆ. ಫ್ಲಿಪ್ ಕಾರ್ಟ್ನಿನಲ್ಲಿ ಈ ಫೋನ್ ಮಾರಾಟವಾಗುತ್ತಿದ್ದು, ಇದರ ಬೆಲೆ ರೂ.6,999 ಆಗಲಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಇದು ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನುವ ಮಾತು ಕೇಳಿಬಂದಿದೆ.

ಈ ಫೋನಿನಲ್ಲಿ ಮೊಟೊ ಡ್ಯುಯಲ್ LED ಫ್ಲಾಷ್ ನೀಡಿದ್ದು, ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ಹಿನ್ನಲೆಯಲ್ಲಿ ಮೊಟೊ c ಸ್ಮಾರ್ಟ್ ಫೋನ್ ಹೇಗಿದೆ ಎಂಬುದರ ಸಂಫೂರ್ಣ ಮಾಹಿತಿ ಇಲ್ಲಿದೆ.

ಡಿಸೈನ್ ಮತ್ತು ಡಿಸ್ ಪ್ಲೇ:
ಸರಳ ವಿನ್ಯಾಸವನ್ನುವನ್ನು ಮೊಟೊ c ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಬ್ಲಾಕ್, ವೈಟ್ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ. ಇದರಲ್ಲಿ 5.0 ಇಂಚಿನ HD ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು. ಈ ಫೋನ್ 162 ಗ್ರಾಮ್ ತೂಕವಾಗಿದ್ದು, ಕೈನಲ್ಲಿ ಹಿಡಿದುಕೊಳ್ಳಲು ಉತ್ತಮ ಅನುಭವನ್ನು ನೀಡುತ್ತದೆ.

ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್:
ಮೊಟೊ c ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 1.3 GHz ಮಿಡಿಯಾ ಟೆಲ್ ಡ್ಯುಯಲ್ ಕೊರ್ ಚಿಪ್ ಸೆಟ್ ಮತ್ತು 2 GB RAM ಇದೆ. ಅಲ್ಲದೆ 16 GB ಇಂಟರ್ನಲ್ ಮೆಮೊರಿ ಮತ್ತು 128 GB ವರೆಗೂ ಮೆಮೊರಿಯನ್ನ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದು ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಇದೇ ಈ ಫೋನಿನ ಹೈಲೆಟ್ ಗಳಲ್ಲಿ ಒಂದು ಎನ್ನಲಾಗಿದೆ.

ಕ್ಯಾಮೆರಾದೊಂದಿಗೆ LED ಫ್ಲಾಷ್:
ಮೊಟೊ c ಪ್ಲಸ್ ನ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ಇದೆ. ಇದರೊಂದಿಗೆ ಮುಂಭಾಗದಲ್ಲಿ 2MP ಕ್ಯಾಮೆರಾ ಇದ್ದು, ಅಲ್ಲಿಯೂ LED ಫ್ಲಾಷ್ ಕಾಣಬಹುದಾಗಿದೆ. ಇದು ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ. ಅಲ್ಲದೇ ಉತ್ತಮ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

ಕೊನೆಯದಾಗಿ:
ಮೊಟಾರೊಲಾ ಬ್ರಾಂಡ್ ಬಿಡುಗಡೆ ಮಾಡಿರುವ ಮೊಟೊ c ಪ್ಲಸ್ ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಎಂದು ಹೇಳಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಫೋನ್ ಗಳಿಗೆ ಇದು ಸ್ಪರ್ಧೆ ನೀಡುವುದು ಕಂಡಿತ


Click it and Unblock the Notifications








