ಮೇ 13 ಕ್ಕೆ ಚಮತ್ಕಾರವನ್ನೇ ಮಾಡಲಿರುವ ಮೋಟೋರೋಲಾ

Written By:

ಸೀಮಿತ ಅವಧಿಯಲ್ಲೇ ಬಹು ಖ್ಯಾತಿಯನ್ನು ಮೋಟೋರೊಲಾ ಮೊಬೈಲ್ ಫೋನ್‌ಗಳು ಹೊಸ ಚಮತ್ಕಾರವನ್ನೇ ಮಾಡಹೊರಟಿವೆ. ಹೌದು ಗೂಗಲ್‌ನಿಂದ ಲಿನೋವೋ ಈ ಕಂಪೆನಿಯನ್ನು ಖರೀದಿಸಿದ ಕ್ಷಣದಿಂದ ಇದರ ಭವಿಷ್ಯವೇ ಬದಲಾಗಿ ಹೋಯಿತು. ಹೊಸ ಹೊಸ ಪ್ರಯೋಗಗಳಿಗೆ ಈ ಫೋನ್ ಸಜ್ಜಾಯಿತು.

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಪ್ರಚಾರವನ್ನು ಪಡೆಯುತ್ತಿರುವ ಲಾವಾ, ಕಾರ್ಬನ್, ಮೈಕ್ರೋಮ್ಯಾಕ್ಸ್‌ನಂತೆ ಇದು ಕೂಡ ಮಾರುಕಟ್ಟೆಯಲ್ಲಿ ಸ್ಥಾನವನ್ನು ಭದ್ರಪಡಸುತ್ತಿದೆ. ತನ್ನ ಹೊಸ ಪ್ರಯೋಗಗಳ ಫಲವಾಗಿ ಕಂಪೆನಿ ಹೊಸ ಹ್ಯಾಂಡ್‌ಸೆಟ್ ಅನ್ನು ಮಾರುಕಟ್ಟೆಗೆ ತರುವ ತಯಾರಿಯನ್ನು ಭರ್ಜರಿಯಾಗಿಯೇ ನಡೆಸುತ್ತಿದೆ.

ಮೇ 13 ಕ್ಕೆ ಚಮತ್ಕಾರವನ್ನೇ ಮಾಡಲಿರುವ ಮೋಟೋರೋಲಾ

ಅತ್ಯುತ್ತಮ ತಂತ್ರಜ್ಞಾನ ಮತ್ತು ಕೈಗೆಟಕುವ ಬೆಲೆಯಲ್ಲಿ ಈ ಫೋನ್ ಗ್ರಾಹಕರ ಕೈ ಸೇರಲಿದೆ ಎಂದು ಕಂಪೆನಿ ತಿಳಿಸಿದೆ. ಜಗತ್ತಿನ ಮಾಹಿತಿ ಜಾಲಕ್ಕೆ ಜನಸಾಮಾನ್ಯರನ್ನು ಸಂಪರ್ಕ ಪಡಿಸಿ ಅವರ ಮತ್ತು ಜಗದ ನಡುವಿನ ಸಂಬಂಧವನ್ನು ಗಟ್ಟಿಯಾಗಿಸುವುದೇ ಈ ಫೋನ್‌ನ ಉದ್ದೇಶವಾಗಿದೆ ಎಂಬ ಅಂಶ ತಿಳಿದು ಬಂದಿದ್ದು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವ ಶಕ್ತಿ ಈ ಪೋನ್‌ಗಿದೆ ಎಂಬುದು ಮೊಟೋರೋಲಾ ಅಭಿಮಾನಿಗಳ ಆಕಾಂಕ್ಷೆಯಾಗಿದೆ.

ತನ್ನದೇ ಆವೃತ್ತಿಯಾಗಿರುವ ಮೋಟೋ ಜಿ ಮೇಲೆ ಪ್ರಯೋಗಗಳನ್ನು ನಡೆಸಿ ನಂತರ ಅದನ್ನು ಮೋಟೋ ಇ ಎಂದು ಬದಲಾಯಿಸಿರುವ ಕಂಪೆನಿ ತಾಂತ್ರಿಕ ವ್ಯವಸ್ಥೆಯುಳ್ಳ ಬಳಕೆದಾರರಿಗೆ ಸುಲಭವಾಗಿ ದೊರೆಯಲಿರುವ ಈ ಫೋನ್ ಅನ್ನು ನೀಡಲಿದೆ.

ಮೊಟೋ ಇ ಕೂಡ 4.3 ಇಂಚಿನ 720 ಪಿ ಡಿಸ್‌ಪ್ಲೇಯನ್ನು ಹೊಂದಿದ್ದು 1.2GHz ಡ್ಯುಯೆಲ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಕ್ಯಾಮೆರಾ ಸಾಮರ್ಥ್ಯ 5MP ಆಗಿದ್ದು 1 ಜಿಬಿ ರ್‌ಯಾಮ್ ಇದರಲ್ಲಿದೆ. 4 ಜಿಬಿ ಆಂತರಿಕ ಮೆಮೊರಿ ಹಾಗೂ 1900mAh ಬ್ಯಾಟರಿಯನ್ನು ಮೊಬೈಲ್‌ಗೆ ಅಳವಡಿಸಲಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ಪರ್ಫೆಕ್ಟ್ ಅಳವಡಿಕೆಯಾಗಿದೆ.

ಈ ಫೋನ್‌ನ ಮೂಲಕ ಅನುಕ್ರಮವಾದ ಸರಾಸರಿ ಮೌಲ್ಯವನ್ನು ಫೋನ್ ಮಾರುಕಟ್ಟೆಯಲ್ಲಿ ಸ್ಥಾಪಿಸ ಹೊರಟಿದ್ದು ಇತರ ಆಂಡ್ರಾಯ್ಡ್ ಫೋನ್‌ಗಳಿಗೆ ಪೈಪೋಟಿ ನೀಡುವ ಭರ್ಜರಿ ಸನ್ನಾಹದಲ್ಲಿದೆ. ಅಂತೂ ಇಂತು ಈ ಫೋನ್ ಅದ್ಭುತವನ್ನು ಸಾಧಿಸುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot