ಮೊಟೊ ಹಬ್ಬ: ಮೊಟೊ ಸ್ಮಾರ್ಟ್‌ಫೋನ್‌ಗಳ ಮೇಲೆ ಕಂಡರಿಯದ ಡಿಸ್ಕೌಂಟ್..!
ಮಾರುಕಟ್ಟೆಗೆ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಲಾಂಚ್ ಮಾಡಲಿದರುವ ಲಿನೊವೊ ಒಡೆತನದ ಮೊಟೊರೊಲಾ, ಭಾರತೀಯ ಬಳಕೆದಾರರಿಗೆ ಮೊಟೊ ಫೆಸ್ಟ್ ಆಯೋಜಿಸಿದ್ದು, ಈ ಮೂಲಕ ತನ್ನ ಮೊಟೊ E4 ಪ್ಲಸ್, ಮೊಟೊ X4, ಮೊಟೊ G5S ಪ್ಲಸ್ ಮತ್ತು ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಆಚರಣೆಯನ್ನು ಹುಟ್ಟುಹಾಕಿರುವ ಮೊಟೊ ಮಾರುಕಟ್ಟೆಗೆ ಮೊಟೊ G6 ಮತ್ತು ಮೊಟೊ E5 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ದೊರೆತ್ತಿದೆ. ಈ ಹಿನ್ನಲೆಯಲ್ಲಿ ಹಳೇಯ ಸ್ಮಾರ್ಟ್ ಫೋನ್‌ಗಳು ಬೇಡಿಕೆಯನ್ನು ಕಳೆದುಕೊಳ್ಳಬಾರದು ಎನ್ನವ ಕಾರಣಕ್ಕೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಘೋಷಿಸುವ ಮೂಲಕ ಮಾರಾಟ ಮಾಡಲು ಮುಂದಾಗಿದೆ.

ಮೊಟೊ E4 ಪ್ಲಸ್:
ರೂ. 9999ಕ್ಕೆ ಮಾರಾಟವಾಗುತ್ತಿದ್ದ ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ರೂ.9499ಕ್ಕೆ ಮಾರಾಟ ಮಾಡಲು ಮೊಟೊ ಮುಂದಾಗಿದ್ದು, ಮೊಟೊ ಹಬ್ ಮತ್ತು ಫ್ಲಿಪ್‌ಕಾರ್ಟಿನಲ್ಲಿ ಈ ಆಫರ್ ಲಭ್ಯವಿದೆ.

ಮೊಟೋ X4:
3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿರುವ ಮೊಟೊ X4 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ರೂ.3000 ಎಕ್ಸ್‌ಚೆಂಜ್ ಆಫರ್ ದೊರೆಯಲಿದ್ದು, ಇದೇ ಮಾದರಿಯಲ್ಲಿ ರೂ.20999ಕ್ಕೆ ಈ ಫೋನ್ ಮಾರಾಟವಾಗಲಿದೆ.

ಮೊಟೊ Z2 ಪ್ಲೇ:
ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.6000 ಕಡಿತವನ್ನು ಕಾಣಬಹುದಾಗಿದ್ದು, ರೂ.21,999ಕ್ಕೆ ಮಾರಾಟವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗುತ್ತಿದೆ.


ಮೊಟೊ G5S :
ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೊಟೊ G5S ಸ್ಮಾರ್ಟ್‌ಫೋನ್ ರೂ.4000 ಕಡಿತಗೊಂಡು ರೂ.12,999ಕ್ಕೆ ಮಾರಾಟವಾಗುತ್ತಿದ್ದು, ಮೊಟೊ ಹಬ್ ಮತ್ತು ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications