ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮೊಟೋ E5 ಪ್ಲಸ್, ಮೊಟೋ E5 ಎಂಟ್ರಿ

By Avinash
|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆರಡು ಮೊಬೈಲ್‌ಗಳು ಎಂಟ್ರಿ ಕೊಟ್ಟಿವೆ. ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಲೆನೋವೋ ಬಿಡುಗಡೆ ಮಾಡಿದ್ದು, ಸ್ಯಾಮ್‌ಸಂಗ್‌, ವಿವೋ, ಒಪ್ಪೋದಂತಹ ಸ್ಮಾರ್ಟ್‌ಫೋನ್‌ ಕಂಪನಿಗಳ ಜತೆ ಸ್ಪರ್ಧೆ ಮಾಡುತ್ತಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮೊಟೋ E5 ಪ್ಲಸ್, ಮೊಟೋ E5 ಎಂಟ್ರಿ

ಮಂಗಳವಾರ ಮೊಟೋ E5 ಮತ್ತು ಮೊಟೋ E5 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಲಾಂಚ್‌ ಮಾಡಲಾಯಿತು. ಮೊಟೋ E5 ಪ್ಲಸ್‌ 18:9 ಡಿಸ್‌ಪ್ಲೇ ಹೊಂದಿದ್ದು, ದೀರ್ಘಕಾಲದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

6 ಇಂಚ್ ಹೆಚ್‌ಡಿಪ್ಲಸ್ ಡಿಸ್‌ಪ್ಲೇ

6 ಇಂಚ್ ಹೆಚ್‌ಡಿಪ್ಲಸ್ ಡಿಸ್‌ಪ್ಲೇ

ಮೊಟೋ E5 ಪ್ಲಸ್ ಸ್ಮಾರ್ಟ್‌ಫೋನ್ 6 ಇಂಚ್‌ ಹೆಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 720X1440 ಪಿಕ್ಸೆಲ್ ರೆಸಲೂಷನ್ ಹೊಂದಿದೆ. 18:9 ಆಸ್ಪೆಕ್ಟ್‌ ರೇಷಿಯೋ ಹೊಂದಿರುವ ಮೊಟೋ E5 ಪ್ಲಸ್ ತೆಳುವಾದ ಬೆಜಲ್ ಡಿಸ್‌ಪ್ಲೇ ಹೊಂದಿದೆ.

ಸ್ನಾಪ್‌ಡ್ರಾಗನ್‌ 430 ಪ್ರೊಸೆಸರ್

ಸ್ನಾಪ್‌ಡ್ರಾಗನ್‌ 430 ಪ್ರೊಸೆಸರ್

ಮೊಟೋ E5 ಪ್ಲಸ್ ಸ್ನಾಪ್‌ಡ್ರಾಗನ್ 430 ಪ್ರೊಸೆಸರ್ ಹೊಂದಿದ್ದು, ಆಡ್ರೇನೋ 505 GPU ಹೊಂದಿದೆ. ಆಂಡ್ರಾಯ್ಡ್‌ 8.0 ಒರಿಯೋ ಒಎಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, 1.4 GHz ವೇಗ ಹೊಂದಿದೆ.

ಮೆಮೊರಿ

ಮೆಮೊರಿ

ಮೊಟೋ E5 ಪ್ಲಸ್ 3GB RAM ಮತ್ತು 32GB ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಫೀಚರ್ ಇದೆ.

ಲಾಂಗ್ ಲೈಫ್ ಬ್ಯಾಟರಿ

ಲಾಂಗ್ ಲೈಫ್ ಬ್ಯಾಟರಿ

ಮೊಟೋ E5 ಪ್ಲಸ್ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ದೀರ್ಘಕಾಲಿಕ ಬ್ಯಾಟರಿ ಬಾಳಿಕೆ ಹೊಂದಿದೆ. ಕಂಪನಿಯ ಪ್ರಕಾರ 18 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್, 200 ಗಂಟೆಗಳವರೆಗೆ ಮ್ಯೂಸಿಕ್ ಪ್ಲೇಬ್ಯಾಕ್, 20 ಗಂಟೆಗೂ ಅಧಿಕ ವೈ-ಫೈ ಬ್ರೌಸಿಂಗ್ ಸಾಮರ್ಥ್ಯ ಹೊಂದಿದ್ದು, ವೇಗದ ಚಾರ್ಜಿಂಗ್‌ಗಾಗಿ ಟರ್ಬೋಚಾರ್ಜಿಂಗ್ ತಂತ್ರಜ್ಞಾನ ಬಳಸಲಾಗಿದೆ.

12 MP ಕ್ಯಾಮೆರಾ

12 MP ಕ್ಯಾಮೆರಾ

ಹೊಸ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 12MP ಕ್ಯಾಮೆರಾ ಹೊಂದಿದ್ದು, f/2.0 ಅಪಾರ್ಚರ್ ಹೊಂದಿದೆ. ಲೇಸರ್ AF ಮತ್ತು ಎಲ್‌ಇಡಿ ಫ್ಲಾಶ್ ಹೊಂದಿದೆ. ಸೆಲ್ಫಿ ಕ್ಯಾಮೆರಾ 8MP ಯಾಗಿದ್ದು, f/2.2 ಅಪಾರ್ಚರ್‌ ಹಾಗೂ ಸೆಲ್ಫಿ ಫ್ಲಾಶ್ ಹೊಂದಿದೆ.

ಸೆನ್ಸಾರ್‌

ಸೆನ್ಸಾರ್‌

ಮೊಟೋ E5ಪ್ಲಸ್‌ನಲ್ಲಿ ಪ್ರಾಕ್ಷಿಮಿಟಿ, ಅಕ್ಸೆಲೆರೊಮೀಟರ್, ಆಂಬಿಯಂಟ್ ಲೈಟ್, ಸೆನ್ಸಾರ್ ಹಬ್ ಮತ್ತು ಗ್ರಿಸ್ಕೋಸ್ಕೋಪ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಫಿಂಗರ್ ಪ್ರಿಂಟ್ ಅನ್‌ಲಾಕ್ ಹಾಗೂ ಫೇಸ್‌ ಅನ್‌ಲಾಕ್‌ ಫೀಚರ್‌ ನೀಡಲಾಗಿದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ

ಮೊಟೋ E5 ಪ್ಲಸ್‌ ವೈ-ಫೈ 802.11 a/b/g/n, 2.4GHz + 5GHz, ವೈ-ಫೈ ಹಾಟ್‌ಸ್ಪಾಟ್‌, ಬ್ಲೂಟೂತ್‌ 4.2, ಜಿಪಿಎಸ್, ಎ-ಜಿಪಿಎಸ್, ಗ್ಲೋನ್ಯಾಸ್‌ ಮತ್ತು ಯುಎಸ್‌ಬಿ 2.0 ಹೊಂದಿದೆ.

ಕೈಗೆಟುಕುವ ಬೆಲೆ

ಕೈಗೆಟುಕುವ ಬೆಲೆ

ಮೊಟೋ E5 ಪ್ಲಸ್ ಸ್ಮಾರ್ಟ್‌ಫೋನ್ ಅಮೇಜಾನ್ ಎಕ್ಸ್‌ಕ್ಲೂಸಿವ್‌ನಲ್ಲಿ ಲಭ್ಯವಿದ್ದು, 11,999 ರೂ. ಬೆಲೆ ಹೊಂದಿದೆ. ಮೊಟೋ E5 ಮೊಟೋ ಹಬ್‌ನಲ್ಲಿ ಮಾತ್ರ ಲಭ್ಯವಿದ್ದು, ಬೆಲೆ 9,999 ರೂ. ಹೊಂದಿದೆ.

ಮೊಟೋ E5

ಮೊಟೋ E5

ಮೊಟೋ E5 5.7ಇಂಚ್‌ ಹೆಚ್‌ಡಿ ಪ್ಲಸ್ ಮ್ಯಾಕ್ಸ್‌ ವಿಶನ್ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ. 4000 mAh ಬ್ಯಾಟರಿ ಹೊಂದಿರುವ ಮೊಟೋ E5 ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 425 ಕ್ವಾಡ್‌ಕೋರ್ ಪ್ರೊಸೆಸರ್‌ನೊಂದಿಗೆ 1.4GHz ವೇಗ ಹೊಂದಿದೆ. 2GB RAM ಮತ್ತು 16GB ಮೆಮೊರಿ ಹೊಂದಿದ್ದು, ಕ್ಯಾಮೆರಾ ವಿಷಯಕ್ಕೆ ಬಂದರೆ ಹಿಂಬದಿಯಲ್ಲಿ 13MP ಮತ್ತು 5MP ಸೆಲ್ಫಿ ಕ್ಯಾಮೆರಾ ಹೊಂದಿದೆ.

Best Mobiles in India

English summary
Moto E5, Moto E5 Plus launched in India: Price, specifications. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X