ಶಿಯೋಮಿ ಬಜೆಟ್ ಫೋನ್‌ಗಳ ಕಥೆ ಮುಗಿತು: ಬಂದಿದೆ 5000mAh ಬ್ಯಾಟರಿಯ ಮೊಟೊ E5 ಸ್ಮಾರ್ಟ್‌ಫೋನ್‌..!

|

ಭಾರತೀಯ ಮಾರುಕಟ್ಟೆಯಲ್ಲಿ ಲಿನೊವೊ ಒಡೆತನದ ಮೊಟೊ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿವೆ. ಈ ಹಿನ್ನಲೆಯಲ್ಲಿ ಶೀಘ್ರವೇ ಮಾರುಕಟ್ಟೆಗೆ ಮೊಟೊ G6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದ್ದು, ಈ ಸ್ಮಾರ್ಟ್‌ಫೋನ್‌ಗಳ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಈಗಾಗಲೇ ನೀಡಿದ್ದೇವೆ. ಇದೇ ಮಾದರಿಯಲ್ಲಿ ಮೊಟೊ E5 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಿದೆ.

ಬಂದಿದೆ 5000mAh ಬ್ಯಾಟರಿಯ ಮೊಟೊ E5 ಸ್ಮಾರ್ಟ್‌ಫೋನ್‌..!

ಮೊಟೊ E5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಮೊಟೊರೊಲ ಬ್ರೆಜಿಲ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಹಿನ್ನಲೆಯಲ್ಲಿ ಮೊಟೊ E5 ಸರಣಿಯ ಸ್ಮಾರ್ಟ್‌ಫೋನ್‌ಗಳ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತೆ ಇದೆ.

ಒಟ್ಟು ಮೂರು ಸ್ಮಾರ್ಟ್‌ಫೋನ್:

ಒಟ್ಟು ಮೂರು ಸ್ಮಾರ್ಟ್‌ಫೋನ್:

ಮೊಟೊ ಈ ವರ್ಷದಿಂದ ಹೊಸ ಸಂಪ್ರದಾಯವನ್ನು ಅನುಸರಿಸುತ್ತಿದ್ದು ಒಂದು ಸರಣಿಯಲ್ಲಿಯೇ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೊಟೊ E5 ಸರಣಿಯಲ್ಲಿಯೂ ಮೂರು ಸ್ಮಾರ್ಟ್‌ಫೋನ್‌ ಗಳು ಲಾಂಚ್ ಆಗುತ್ತಿದೆ. ಮೊಟೊ E5, ಮೊಟೊ E5 ಪ್ಲಸ್‌ ಮತ್ತು ಮೊಟೊ E5 ಪ್ಲೇ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ.

ಮೊಟೊ E5, ಮೊಟೊ E5 ಪ್ಲಸ್‌ ಮತ್ತು ಮೊಟೊ E5 ಪ್ಲೇ ಸ್ಮಾರ್ಟ್‌ಫೋನ್ ಬೆಲೆ:

ಮೊಟೊ E5, ಮೊಟೊ E5 ಪ್ಲಸ್‌ ಮತ್ತು ಮೊಟೊ E5 ಪ್ಲೇ ಸ್ಮಾರ್ಟ್‌ಫೋನ್ ಬೆಲೆ:

ಮೊಟೊ E5, ಮೊಟೊ E5 ಪ್ಲಸ್‌ ಮತ್ತು ಮೊಟೊ E5 ಪ್ಲೇ ಬೆಲೆಗಳು ಇಂತಿದ್ದು, ಮೊಟೊ E5 ಬೆಲೆ ಸುಮಾರು ರೂ.12,000 ಆಗಲಿದ್ದು, ಮೊಟೊ E5 ಪ್ಲಸ್‌ ಬೆಲೆ ಸ್ಮಾರ್ಟ್‌ಫೋನ್‌ ಬೆಲೆ ರೂ.13,700 ಮತ್ತು ಮೊಟೊ E5 ಪ್ಲೇ ಬೆಲೆಯನ್ನು ತಿಳಿಸಿಲ್ಲ. ಈ ಸ್ಮಾರ್ಟ್‌ಫೋನ್‌ ಯಾವಾಗ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬದರ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇ ಹೊಂದಿದೆ. 18.9 ಅನುಪಾದ ಡಿಸ್‌ಪ್ಲೇ ಇದಾಗಿದೆ.ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್, 1.4GHz ವೇಗದ ಕ್ವಾಡ್‌ಕೋರ್‌ ಸ್ನಾಪ್‌ಡ್ರಾಗನ್‌ 425 ಚಿಪ್‌ಸೆಟ್‌ನಲ್ಲಿ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 3GB RAM ಮತ್ತು 32 GB ಇಂಟರ್ನಲ್ ಮೆಮೊರಿ ಇದ್ದು, ಫೋನಿನ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ 5000mAh ಬ್ಯಾಟರಿಯನ್ನು ಕಾಣಬಹುದಾಗಿದೆ.

ಮೊಟೊ E5  ಪ್ಲೇ ಸ್ಮಾರ್ಟ್‌ಫೋನ್:

ಮೊಟೊ E5 ಪ್ಲೇ ಸ್ಮಾರ್ಟ್‌ಫೋನ್:

ಮೊಟೊ E5 ಪ್ಲೇ ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ HD ಗುಣಮಟ್ಟದ ಡಿಸ್‌ಪ್ಲೇ ಹೊಂದಿದೆ. ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್, 1.4GHz ವೇಗದ ಕ್ವಾಡ್‌ಕೋರ್‌ ಸ್ನಾಪ್‌ಡ್ರಾಗನ್‌ 425 ಚಿಪ್‌ಸೆಟ್‌ನಲ್ಲಿ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 2GB RAM ಮತ್ತು 16 GB ಇಂಟರ್ನಲ್ ಮೆಮೊರಿ ಇದ್ದು, ಫೋನಿನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ 4000 mAh ಬ್ಯಾಟರಿಯನ್ನು ಕಾಣಬಹುದಾಗಿದೆ.

Best Mobiles in India

English summary
Moto E5, Moto E5 Plus, Moto E5 Play Unveiled. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X