Home
ಮೊಬೈಲ್

ಬರ್ತಿದೆ ಮೊಟೋ ಇ5 ಪ್ಲೇ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್..!

By Gizbot Bureau

ಮೋಟೋ ಅಂದ್ರೆ ಹೆಚ್ಚು ಇಷ್ಟ ಪಡುವ ಮಂದಿಗೇನೂ ಕಡಿಮೆ ಇಲ್ಲ. ಬಹುಷ್ಯಃ ಅದಕ್ಕೆ ಕಾರಣಕ್ಕೆ ಮೋಟೋ ಫೋನ್ ಗಳು ಮಧ್ಯಮ ವರ್ಗದವರನ್ನು ತನ್ನ ಬೆಲೆಯಲ್ಲಿ ಸೆಳೆದುಕೊಳ್ಳಲು ಸಾಧ್ಯವಾಗಿರುವುದು ಮತ್ತು ಅದರ ವೈಶಿಷ್ಟ್ಯಗಳು ಬೇರೆ ಫೋನ್ ಗಳಿಗಿಂತ ಕಡಿಮೆ ಏನಿಲ್ಲ ಎಂದು ಅನ್ನಿಸಿಕೊಂಡಿರುವುದೇ ಆಗಿದೆ. ಈಗ ಮೋಟೋ ಸಂಸ್ಥೆಯಿಂದ ಮತ್ತೊಂದು ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಆ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮೋಟೋರೋಲಾ ಸಂಸ್ಥೆ ತನ್ನ ಮೋಟೋ ಇ5 ಸರಣಿಯನ್ನು ಕೆಲವು ತಿಂಗಳ ಹಿಂದೆ ಬಿಡುಗಡೆಗೊಳಿಸಿತ್ತು ಅದರಲ್ಲಿ ಮೋಟೋ ಇ5, ಇ5 ಪ್ಲಸ್ ಮತ್ತು ಮೊಟೋ ಇ5 ಪ್ಲೇ ಕೂಡ ಸೇರಿತ್ತು. ಮೋಟೋ ಇ5 ತನ್ನ ಕೈಗೆಟುಕುವ ಬೆಲೆಯ ಸಂಪ್ರದಾಯವನ್ನೇ ಇಟ್ಟುಕೊಂಡಿದೆ ಮತ್ತು ಅತೀ ಕಡಿಮೆ ಬೆಲೆಯಲ್ಲಿ ಹೆಚ್ಚು ಎಂಟ್ರಿ ಮಟ್ಟದ ಎಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಮೊಬೈಲ್ ಗಳಲ್ಲಿ ಒಂದೆನಿಸಿದೆ.

ಬರ್ತಿದೆ ಮೊಟೋ ಇ5 ಪ್ಲೇ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್..!

ಮೋಟೋ ಇ5 ಪ್ಲೇನ ಹೊಸ ಆಂಡ್ರಾಯ್ಡ್ ಓರಿಯೋ ಆವೃತ್ತಿಯನ್ನು ಮೋಟೋರೊಲಾ ಪ್ರಕಟಿಸಿದ್ದು, ಇದು ಅತೀ ಕಡಿಮೆ ಪ್ರೀ-ಇನ್ಸ್ಟಾಲ್ಡ್ ಆಪ್ಸ್ ಗಳನ್ನು ಹೊಂದಿರುತ್ತದೆ ಮತ್ತು ಕಡಿಮೆ ಮೆಮೊರಿ ಮತ್ತು ಸ್ಟೋರೇಜ್ ಪಡೆಯುವ ಆಪ್ ಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಮೋಟೋ ಇ5 ಪ್ಲೇ ಗೆ ಹೋಲಿಸಿದರೆ ಮೋಟೋ ಇ5 ಪ್ಲೇ ಆಂಡ್ರಾಯ್ಡ್ ಗೋ ದೊಡ್ಡ ಡಿಸ್ಪ್ಲೇ ಹೊಂದಿದೆ.

5.3 ಇಂಚ್‌ ವಿಷನ್ ಡಿಸ್‌ಪ್ಲೇ

5.3 ಇಂಚ್‌ ವಿಷನ್ ಡಿಸ್‌ಪ್ಲೇ

ಮೋಟೋ ಇ5 ಪ್ಲೇ ಆಂಡ್ರಾಯ್ಡ್ ಗೋ ಆವೃತ್ತಿಯು ಮೋಟೋ ಇ5 ಪ್ಲೇ ಗೆ ಗಿಂತ ವೈಶಿಷ್ಟ್ಯತೆಗಳಲ್ಲಿ ಸ್ವಲ್ಪ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಆದರೆ ಡಿಸ್ಪ್ಲೇ ವಿಚಾರದಲ್ಲಿ ದೊಡ್ಡ ಸ್ಕ್ರೀನ್ ನ್ನು ಇದು ಹೊಂದಿದ್ದು 5.3 ಇಂಚಿನ ಹೆಚ್ಚಿನ ವಿಷನ್ ಡಿಸ್ಪ್ಲೇಯನ್ನು 18:9 ಅನುಪಾತದಲ್ಲಿ ಹೊಂದಿದೆ. ಇದು ಉದ್ಯಮ ಪ್ರವೃತ್ತಿಯನ್ನು ಮುಂದುವರಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಭಾವ ಬೀರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರೆಸಲ್ಯೂಷನ್ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಅದು 480x854 ಇದೆ. ಮೊಟೋ ಇ5 ಗೆ ಹೋಲಿಸಿದರೆ ಅದರಲ್ಲಿ 720x1280 ಪಿಕ್ಸಲ್ ಡಿಸ್ಪ್ಲೇ ಸಾಮರ್ಥ್ಯವಿತ್ತು.

1GB RAM ಮತ್ತು 2,100 mAh ಬ್ಯಾಟರಿ

1GB RAM ಮತ್ತು 2,100 mAh ಬ್ಯಾಟರಿ

ಇದು ಆಂಡ್ರಾಯ್ಡ್ ಗೋ ಎಡಿಷನ್ ಫೋನ್ ಆಗಿರುವುದರಿಂದಾಗಿ ಮೋಟೋರೊಲಾ ಹಾರ್ಡ್ ವೇರ್ ನ್ನೂ ಕೂಡ ಸಣ್ಣಗೊಳಿಸಿದೆ. ಅಂದ್ರೆ ಮೋಟೋ ಇ5 ಪ್ಲೇ ನಲ್ಲಿನ 200ಜಿಬಿ ಮೆಮೊರಿ ಬದಲಾಗಿ ಇದರಲ್ಲಿ ಕೇವಲ 1ಜಿಬಿ ಮೆಮೊರಿ ಇದೆ. ಬ್ಯಾಟರಿ ಕೂಡ ಕೆಳಮಟ್ಟಕ್ಕೆ ಇಳಿದಿದ್ದು ಅದರ ಸಾಮರ್ಥ್ಯ ಮೋಟೋ ಇ5 ಗೆ ಹೋಲಿಸಿದರೆ 2,800 mAh ನಿಂದ 2,100mAh ಗೆ ಇಳಿದಿದೆ. ಉಳಿದೆಲ್ಲಾ ವಿಚಾರಗಳು ಹೆಚ್ಚು ಕಡಿಮೆ ಮೋಟೋ ಇ5 ಪ್ಲೇ ನಲ್ಲಿ ಇರುವಂತೆಯೇ ಇದೆ. ಸ್ನ್ಯಾಪ್ ಡ್ರ್ಯಾಗನ್ 425 ಸಾಕೆಟ್ ನ್ನೇ ಬಳಕೆ ಮಾಡಲಾಗಿದೆ ಮತ್ತು 16ಜಿಬಿ ಇಂಟರ್ ನಲ್ ಸ್ಟೋರೇಜ್ ಇದ್ದು ಅದನ್ನು ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದಾಗಿದೆ. ಕ್ಯಾಮರಾಗಳ ಬಗ್ಗೆ ಹೇಳುವುದಾದರೆ 8ಎಂಪಿ ಪ್ರೈಮರಿ ಕ್ಯಾಮರಾ ಮತ್ತು 5ಎಂಪಿ ಮುಂಭಾಗದ ಕ್ಯಾಮರಾವಿದ್ದು ಸೆಲ್ಫೀ ತೆಗೆದೊಕೊಳ್ಳಲು ಅನುವು ಮಾಡಿಕೊಡುತ್ತದೆ .

ಆಂಡ್ರಾಯ್ಡ್ ಓರಿಯೋ ಒಎಸ್ ಬೆಂಬಲ

ಆಂಡ್ರಾಯ್ಡ್ ಓರಿಯೋ ಒಎಸ್ ಬೆಂಬಲ

ಮೋಟೋ ಇ5 ಪ್ಲೇ ಆಂಡ್ರಾಯ್ಡ್ ಇ ಎಡಿಷನ್ ಫೋನ್ ಆಗಿದ್ದು ಗೂಗಲ್ ಕಸ್ಟಮೈಸ್ಡ್ ಸಾಫ್ಟ್ ವೇರ್ ನಿಂದ ರನ್ ಆಗುತ್ತಿರುವ ಕೆಲವೇ ಕೆಲವು ಮೊಬೈಲ್ ಗಳ ಪೈಕಿ ಇದೂ ಒಂದಾಗಿದೆ. ಈ ಸಾಫ್ಟವೇರ್ ಆಡ್ರಾಯ್ಡ್ ಓರಿಯೋ ಮೂಲವನ್ನು ಹೊಂದಿದ್ದು , ಆಪ್ ಗಳಾದ ಗೂಗಲ್ ಗೋ, ಯುಟ್ಯೂಬ್ಗೋ, ಜಿಮೇಲ್ ಗೋ ಮತ್ತು ಮ್ಯಾಪ್ಸ್ ಗೋ ಗಳ ಹೆಸರು ಗಳು ಅವುಗಳಲ್ಲಿ ಪ್ರಮುಕವಾದ ಹೆಸರುಗಳಾಗಿದೆ. ಇವುಗಳ ಗೋ-ಸ್ಪೆಸಿಫಿಕ್ ಆಪ್ ಗಳ ಬಂಚ್ ಆಗಿದ್ದು ಪ್ಲೇ ಸ್ಟೋರ್ ಮುಖಾಂತರ ಡೌನ್ ಲೋಡ್ ಮಾಡಬಹುದಾಗಿದೆ ಮತ್ತು ಇದು ಅತ್ಯಂತ ಕಡಿಮೆ ಮೆಮೊರಿ ಮತ್ತು ಸ್ಟೋರೇಜ್ ಗಳನ್ನು ಬಳಸಿಕೊಳ್ಳುತ್ತದೆ ಮತ್ತು 1ಜಿಬಿ ಮೆಮೊರಿ ಅಥವಾ ಅದಕ್ಕಿಂತ ಕಡಿಮೆಯಲ್ಲಿ ಬಹಳ ನಯವಾಗಿ ಚಲಿಸಲ್ಪಡುತ್ತದೆ.ನೋಕಿಯಾ 1, ಲಾವಾ z50, ಮತ್ತು ಭಾರತ್ ಗೋ ಗಳು ಈ ವರ್ಷ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಕೆಲವು ಫೋನ್ ಗಳ ಪಟ್ಟಿಯ ಹೆಸರುಗಳಾಗಿದೆ.

ಭಾರತದಲ್ಲಿ ಬಿಡುಗಡೆಗೆ ಅನಿಶ್ಚಿತತೆ

ಭಾರತದಲ್ಲಿ ಬಿಡುಗಡೆಗೆ ಅನಿಶ್ಚಿತತೆ

ಭಾರತದಲ್ಲಿ ಈ ಮೋಟೋ ಇ5 ಪ್ಲೇ ಆಂಡ್ರಾಯ್ಡ್ ಗೋ ಆವೃತ್ತಿಯು ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಮೋಟೋ ಇ5 ನಲ್ಲಿ ಆಂಡ್ರಾಯ್ಡ್ ಓರಿಯೋ ಗೋ ಆವೃತ್ತಿ ರನ್ ಆದರೂ ಕೂಡ ಸಕಾಲದಲ್ಲಿ ಆಂಡ್ರಾಯ್ಡ್ ನ ಭದ್ರತಾ ಅಪ್ ಡೇಟ್ ಗಳನ್ನು ತರಲಾಗುತ್ತದೆ. ಆದರೆ ಇತರೆ ಡಿವೈಸ್ ಗಳಲ್ಲಿ ಇದನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಮೋಟೋರೊಲಾ ಸಂಸ್ಥೆ ವಿಫಲವಾಗಿದೆ. ಯುರೋಪ್ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿ ಮೋಟೋ ಇ4 ಆಂಡ್ರಾಯ್ಡ್ ಗೋ ಎಡಿಷನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಮೋಟೋರೋಲಾ ಸಂಸ್ಥೆ ತಿಳಿಸಿದ್ದು ಇದರ ಬೆಲೆ 109 Euros ಆಗಿದೆ ಅಂದರೆ ಭಾರತೀಯ ಮಾರುಕಟ್ಟೆ ಬೆಲೆ ಅಂದಾಜು 8,700 ರುಪಾಯಿಗಳಾಗಿದೆ. ಆದರೆ ಮೋಟೋ ಇ5 ಮತ್ತು ಮೋಟೋ ಇ5 ಪ್ಲಸ್ ನ್ನು ಭಾರತದಲ್ಲಿ ಈಗಾಗಲೇ ಮೋಟೋರೋಲಾ ಸಂಸ್ಥೆ ಬಿಡುಗಡೆಗೊಳಿಸಿದ್ದು ಇದರ ಬೆಲೆ ಕ್ರಮವಾಗಿ 9,999 ಮತ್ತು 11,999 ಆಗಿದೆ.

Best Mobiles in India

English summary
Moto E5 Play Android Go Edition announced with 18:9 display, 1GB RAM. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+