ಮೊಟೊ E5 ಪ್ಲಸ್ Vs ರೆಡ್ ಮಿ ನೋಟ್ 5 Vs ಒಪ್ಪೋ ರಿಯಲ್ ಮಿ 1: ಯಾವುದು ಬೆಸ್ಟ್...!

By GizBot Bureau
|

ಭಾರತೀಯ ಮಾರುಕಟ್ಟೆಗೆ ಸಾಕಷ್ಟು ಹೊಸ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿರುವ ಮೊಟೊ E5 ಮತ್ತು ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳ ಕುರಿತು ಮಾಹಿತಿಯೂ ಮುಂದಿದೆ.

ಮೊಟೊ E5 ಪ್ಲಸ್ Vs ರೆಡ್ ಮಿ ನೋಟ್ 5 Vs ಒಪ್ಪೋ ರಿಯಲ್ ಮಿ 1: ಯಾವುದು ಬೆಸ್ಟ್...!

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಪ್ಪೋ ರಿಯಲ್ ಮಿ 1 ಮತ್ತು ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ನೊಂದಿಗೆ ಹೋಲಿಕೆಯನ್ನು ಮಾಡಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಫೋನ್ ಗಳೊಂದಿಗೆ ಹೋಲಿಕೆಯೂ ಇದಾಗಿದೆ.

ಡಿಸೈನ್:

ಡಿಸೈನ್:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದಕ್ಕೇ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಒದಗಿಸಲಾಗಿದೆ. ಅಲ್ಲದೇ ವಾಟರ್ ರೆಸಿಟೆಂಟ್ ಸಹ ಇದರಲ್ಲಿದೆ. ಇದಲ್ಲದೇ ರಿಯಲ್ ಮಿ ಸ್ಮಾರ್ಟ್ ಫೋನಿನಲ್ಲಿ ಗ್ಲಾಸ್ ಕೋಟಿಂಗ್ ನೀಡಲಾಗಿದ್ದು, ಹೆಚ್ಚು ಆಕರ್ಷಕವಾಗಿದೆ. ಇದಲ್ಲದೇ ನೋಟ್ 5 ಸ್ಮಾರ್ಟ್ ಫೋನಿನಲ್ಲಿ ಇದೇ ಮಾದರಿಯ ಡಿಸ್ ಪ್ಲೇ ಇದೆ. ಸ್ವಲ್ಪ ಡಿಸೆಂಟ್ ಆಗಿದೆ.

ಡಿಸ್ ಪ್ಲೇ:

ಡಿಸ್ ಪ್ಲೇ:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಮತ್ತು ರಿಯಲ್ ಮಿ 1 ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ IPS LCD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ರಿಯಲ್ ಮಿ ಯಲ್ಲಿ FHD+ ಗುಣಮಟ್ಟದ ಡಿಸ್ ಪ್ಲೇ ಇದ್ದರೇ, ಮೊಟೊದಲ್ಲಿ HD+ ಗುಣಮಟ್ಟದ ಡಿಸ್ ಪ್ಲೇಯನ್ನು ನೀಡಲಾಗಿದೆ. ಅಲ್ಲದೇ ಇದು 18:8 ಅನುಪಾತದಲ್ಲಿದೆ. ಇದೇ ಮಾದರಿಯಲ್ಲಿ ನೋಟ್ 5 ನಲ್ಲಿ 5.99 ಇಂಚಿನ ಡಿಸ್ ಪ್ಲೇ ಇದ್ದು, ರಿಯಲ್ ಮಿ ಗುಣಮಟ್ಟವನ್ನೇ ಹೊಂದಿದೆ.

ಪ್ರೋಸೆಸರ್:

ಪ್ರೋಸೆಸರ್:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 425 ಪ್ರೋಸೆಸರ್ ಹೊಂದಿದೆ. ರಿಯಲ್ ಮಿ ನಲ್ಲಿ ಮಿಡಿಯಾ ಟೆಕ್ ಹೆಲಿಯೋ P60 ಪ್ರೋಸೆಸರ್ ನಲ್ಲಿ ಕಾರ್ಯನಿರ್ಹಿಸಲಿದೆ. ನೋಟ್ 5 ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಅನ್ನು ಹೊಂದಿದೆ. ಇದರಿಂದ ವೇಗವಾಗಿ ಕಾರ್ಯನಿರ್ವಹಿಸಲಿದೆ.

ಮೊಟೊ ಫೋನ್ 3GB/32GB ಆವೃತ್ತಿಯಲ್ಲಿ ದೊರೆಯಲಿದೆ, ರಿಯಲ್ ಮಿ 3GB/32 GB, 4GB/64GB ಮತ್ತು 4GB/128GB ಆವೃತ್ತಿಗಳಲ್ಲಿ ಲಭ್ಯವಿದೆ. ನೋಟ್ 5 3GB/32 GB ಮತ್ತು 4GB/64GBಯಲ್ಲಿ ಮಾರಾಟವಾಗಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 12MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಕಾಣಬಹುದು. ರಿಯಲ್ ಮಿ ಸ್ಮಾರ್ಟ್ ಫೋನಿನಲ್ಲಿ 13 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದು. ನೋಟ್ 5 ಸ್ಮಾರ್ಟ್ ಫೋನಿನಲ್ಲಿ 12 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ 

ಬ್ಯಾಟರಿ 

ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 5000mAh ಬ್ಯಾಟರಿಯನ್ನು ಕಾಣಬಹುದು. ರಿಯಲ್ ಮಿ ಸ್ಮಾರ್ಟ್ ಫೋನಿನಲ್ಲಿ 3410mAh ಕಾಣಬಹುದು. ನೋಟ್ 5 ಸ್ಮಾರ್ಟ್ ಫೋನಿನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಸಾಫ್ಟ್ ವೇರ್:

ಸಾಫ್ಟ್ ವೇರ್:

ಮೊಟೊ E5 ಪ್ಲಸ್, ರಿಯಲ್ ಮಿ ಮತ್ತು ನೋಟ್ 5 ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ಸಿಮ್, ಫಿಂಗರ್ ಪ್ರಿಂಟ್ ಸ್ಕ್ಯಾನರ್, 4G VoLTE, ಬ್ಲೂಟೂತ್, ವೈಪೈ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಕಾಣಬಹುದಾಗಿದೆ. ರಿಯಲ್ ಮಿ ನಲ್ಲಿ ಫೆಸ್ ಲಾಕ್ ಇದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇಲ್ಲ. ಮೊಟೊ E5 ಪ್ಲಸ್ ಮತ್ತು ನೋಟ್ 5 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ಮೊಟೊ E5 ಪ್ಲಸ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ, ರಿಯಲ್ ಮಿ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಓರಿಯೋ ಮತ್ತು ಕಲರ್OS 50 ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ನೋಟ್ 5 ಸ್ಮಾರ್ಟ್ ಫೋನಿನಲ್ಲಿ ಆಂಡ್ರಾಯ್ಡ್ ನ್ಯಾಗಾದೊಂದಿಗೆ MIUI 9ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Moto E5 Plus vs Realme 1 vs Xiaomi Redmi Note 5: Which is a better budget smartphone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X