Subscribe to Gizbot

ಮೋಟೋರೋಲಾ ಹೊಸ ಮೋಟೋ ಜಿ ವೀಡಿಯೊ ವಿಮರ್ಶೆ

Written By:

ಮೋಟೋರೋಲಾ ಹೊಸ ಮೋಟೋ ಜಿ ಮತ್ತು ಮೋಟೋ ಎಕ್ಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಡಿವೈಸ್‌ನ ಬೆಲೆ ರೂ 12,999 ಆಗಿದ್ದು ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ ಲಭ್ಯವಾಗುತ್ತಿದೆ. ಹೊಸದಾದ ನವೀನ ವೈಶಿಷ್ಟ್ಯತೆಗಳಿಂದ ಗಮನ ಸೆಳೆಯುವಂತಿರುವ ಮೋಟೋ ಜಿ ಹೆಚ್ಚಿನ ನವೀಕರಣಗಳು ಮತ್ತು ಕಪ್ಪು ಬಿಳಿ ಬಣ್ಣಗಳಲ್ಲಿ ಬಂದಿದೆ. ಇದು ಡ್ಯುಯಲ್ ಸಿಮ್ ಅನ್ನು ಹೊಂದಿದ್ದು ಇದರ ಆಂತರಿಕ ಸಂಗ್ರಹಣೆಯ 16 ಜಿಬಿಯಾಗಿದೆ. ಇದು ದೊಡ್ಡ ಸ್ಕ್ರೀನ್ ಅನ್ನು ಹೊಂದಿದ್ದು, ಹೆಚ್ಚಿನ ಎಮ್‌ಪಿ ಕ್ಯಾಮೆರಾ ಫ್ರಂಟ್‌ನ ಸ್ಟಿರೀಯೋ ಸ್ಪೀಕರ್ ಹಾಗೂ ಅತೀ ಹೆಚ್ಚು ಪ್ರಮುಖವಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಹೊಂದಿದೆ.

ಮೋಟೋರೋಲಾ ಮೋಟೋ ಜಿ ವಿಶೇಷತೆ
ಮೋಟೋರೋಲಾ ಮೋಟೋ ಜಿ ಡ್ಯುಯಲ್ ಸಿಮ್‌ನಲ್ಲಿದ್ದು 5 ಇಂಚಿನ ಡಿಸ್‌ಪ್ಲೇಯೊಂದಿಗೆ ಗೋರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ ಮನಸೆಳೆಯುವಂತಿದೆ ಇದು ಎಚ್‌ಡಿ ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳಾಗಿವೆ. ಇದು 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ ಅಡ್ರೆನೊ 305 GPU ನೊಂದಿಗೆ ಬಂದಿದೆ.

ಮೋಟೋರೋಲಾದ ಹೊಸ ಮೋಟೋ ಜಿ ವಿಶೇಷತೆ

1 ಜಿಬಿ RAM ಅನ್ನು ಬಹು ಹೆಚ್ಚಿನ ಕಾರ್ಯಗಳಿಗಾಗಿ ಇದರಲ್ಲಿ ಲಭ್ಯವಾಗಿಸಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ. ಫೋನ್‌ನ ರಿಯರ್ ಕ್ಯಾಮೆರಾ 8MP ಆಗಿದ್ದು ಮುಂಭಾಗ ಕ್ಯಾಮೆರಾ 2MP ಆಗಿದೆ. ಇನ್ನು ಸಂಪರ್ಕ ವಿಶೇಷತೆಗಳಾದ 3ಜಿ, ವೈಫೈ 802.11, ಬ್ಲ್ಯೂಟೂತ್ 4.0 LE, GPS ಮತ್ತು ಡ್ಯುಯಲ್ ಸಿಮ್‌ನೊಂದಿಗೆ ಬಂದಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು ಇನ್ನು ಬ್ಯಾಟರಿ 2070 mAh ಆಗಿದೆ. ವಿಶೇಷವಾಗಿ ಫ್ಲಿಪ್‌ಕಾರ್ಟ್‌ ಮೋಟೋರೋಲಾದೊಂದಿಗೆ ಆನ್‌ಲೈನ್ ರೀಟೈಲ್ ಪಾಲುದಾರರರಾಗಿದ್ದು ಮೋಟೋ ಜಿಗೂ ಇದು ವಿಶೇಷ ಕೊಡುಗೆಗಳನ್ನು ಪ್ರಸ್ತುತಪಡಿಸಿದೆ.

ಫೋನ್ ಜೊತೆಗೆ ಫ್ಲಿಪ್ ಕವರ್ ಮತ್ತು ಬ್ಯಾಕ್ ಕವರ್ ಅನ್ನು ನೀಡಲಾಗುತ್ತಿದ್ದು ಇದರ ಮಾರಾಟ ಸಪ್ಟೆಂಬರ್ 15 ರಿಂದ ಇ ಕಾಮರ್ಸ್ ಸೈಟ್ ಮೂಲಕ ನಡೆಯಲಿದೆ. ಇನ್ನು ಫ್ಲಿಪ್ ಕವರ್ ಚೆರ್ರಿ, ಲಿಂಬೆಯ ಬಣ್ಣ, ನೇರಳೆ, ಟರ್ಕೋಸ್, ಲಿಕ್ರೋಸ್ ಮತ್ತು ಚಾಕ್ ಬಣ್ಣಗಳಲ್ಲಿ ಲಭ್ಯವಾಗುತ್ತಿದೆ ಇದರ ಬೆಲೆ ರೂ 1,700 ಆಗಿದ್ದು, ಬ್ಯಾಕ್ ಕವರ್ ರೂ 800 ಕ್ಕೆ ಲಭ್ಯವಾಗುತ್ತಿದೆ.

<center><iframe width="100%" height="360" src="//www.youtube.com/embed/bMjt59XkYI0" frameborder="0" allowfullscreen></iframe></center>

English summary
This article tells about moto g gen 2 hands on and first look with video..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot