Home
ಮೊಬೈಲ್

ಎದುರಾಳಿಗಳಿಗೆ ನಡುಕ..! ಬಂತು ಹೊಸ Moto ಫೋನ್; 50MP ಕ್ಯಾಮೆರಾ.. 32MP ಸೆಲ್ಫಿ ಕ್ಯಾಮೆರಾ.. ಬಜೆಟ್ ಬೆಲೆ

ಮೊಟೊ ಸದ್ದಿಲ್ಲದೆ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಇದನ್ನು ಬಜೆಟ್ ವಿಭಾಗದ ಗ್ರಾಹಕರನ್ನು ಗಮದಲ್ಲಿಟ್ಟುಕೊಂಡು ಪರಿಚಯಿಸಲಾಗಿದೆ. ಹೌದು, ಕಂಪನಿಯು ಇಂದು ಮೊಟೊ G ಸ್ಟೈಲಸ್ (Moto G Stylus 2025) ಫೋನನ್ನು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಮೊಬೈಲ್ ಇದು ಉತ್ತಮ ಸ್ಟೈಲಸ್ ಅನುಭವವನ್ನು ಒದಗಿಸುತ್ತದೆ. ಇದರ ಡಿಸ್ಪ್ಲೇ, ಕ್ಯಾಮೆರಾ ಮತ್ತು ಚಾರ್ಜಿಂಗ್‌ನಲ್ಲಿಯೂ ಹಲವು ಪ್ರಮುಖ ಅಪ್ಡೇಟ್ ಮಾಡಲಾಗಿದೆ. ಬನ್ನಿ, ಈ ಹೊಸ ಫೊನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.

ಮೊಟೊ G ಸ್ಟೈಲಸ್ (2025) ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP ಸೋನಿ ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.7 ಇಂಚಿನ 1.5K ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 5000mAh ದೊಡ್ಡ ಬ್ಯಾಟರಿ, 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂಡಿದೆ ಬಿಡುಗಡೆಯಾಗಿದೆ.

ಎದುರಾಳಿಗಳಿಗೆ ನಡುಕ..! ಬಂತು ಹೊಸ Moto ಫೋನ್; 50MP + 32MP ಕ್ಯಾಮೆರಾ.. ಬೆಲೆ?

ಮೊಟೊ G ಸ್ಟೈಲಸ್ (2025) ಫೋನ್‌ ಈಗ ಮೊದಲಿಗಿಂತ ಹೆಚ್ಚು ಸ್ಪಂದಿಸುತ್ತದೆ. ಇದು ಸ್ಕೆಚ್ ಟು ಇಮೇಜ್ ಮತ್ತು ಗೂಗಲ್‌ನ ಸರ್ಕಲ್ ಟು ಸರ್ಚ್‌ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಡಿಸ್ಪ್ಲೇಯನ್ನು ಚಿತ್ರಿಸಲು, ಹೈಲೈಟ್ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಈ ಫೋನ್ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ, IP68 ರೇಟಿಂಗ್ ಹೊಂದಿದೆ. ಇದಲ್ಲದೆ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಡಾಲ್ಬಿ ಅಟ್ಮೋಸ್ ಸ್ಟೀರಿಯೊ ಸ್ಪೀಕರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸಹ ಅಳವಡಿಸಲಾಗಿದೆ.

ಮೊಟೊ G ಸ್ಟೈಲಸ್ (2025) ವೈಶೀಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊ G ಸ್ಟೈಲಸ್ (2025) ಮೊಬೈಲ್ 6.7 ಇಂಚಿನ pOLED ಡಿಸ್ಪ್ಲೇಯನ್ನು ಹೊಂದಿದೆ. ಇದು 2712 x 1220 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮೊಟೊ G ಸ್ಟೈಲಸ್ (2025) ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಹಲೋ ಯುಎಕ್ಸ್ ಇಂಟರ್ಫೇಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೆ ಮೋಟೋ ಸೆಕ್ಯೂರ್, ಥಿಂಕ್‌ಶೀಲ್ಡ್‌ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈ ಮೊಬೈಲ್ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ಮೊಟೊ G ಸ್ಟೈಲಸ್ (2025) ಫೋನ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಬರುತ್ತದೆ. ಜೊತೆಗೆ ದ್ವಿತೀಯ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು ತೃತೀಯ ಕ್ಯಾಮೆರಾ ಮ್ಯಾಕ್ರೋ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮೊಟೊ G ಸ್ಟೈಲಸ್ (2025) ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ದೀರ್ಘ ಬ್ಯಾಕಪ್ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆಯಬಹುದು.

ಮೊಟೊ G ಸ್ಟೈಲಸ್ (2025) ಬೆಲೆ ಮತ್ತು ಲಭ್ಯತೆ

ಮೊಟೊ G ಸ್ಟೈಲಸ್ (2025) ಫೋನ್ ಜಿಬ್ರಾಲ್ಟರ್ ಸೀ ಮತ್ತು ಸರ್ಫ್ ದಿ ವೆಬ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ ಬೆಲೆ 34,430 ರೂ. ಆಗಿದೆ. ಈ ಮೊಬೈಲ್ ಏಪ್ರಿಲ್ 17 ರಂದು ಅಮೆಜಾನ್, ಬೆಸ್ಟ್ ಬೈ ಮತ್ತು ಮೊಟೊರೊಲಾ ಅಧಿಕೃತ ವೆಬ್‌ಸೈಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಪ್ರಸ್ತುತ, ಈ ಮೊಬೈಲ್ ಜಾಗತಿಕ ಮಾರುಕಟ್ಟೆಯಲ್ಲಿ (ಉತ್ತರ ಅಮೆರಿಕಾದಲ್ಲಿ) ಮಾತ್ರ ಖರೀದಿಗೆ ಲಭ್ಯವಿದೆ. ಕೆನಡಾದಲ್ಲಿ ಮೇ 13 ರಿಂದ ಈ ಫೋನ್ ಮಾರಾಟವಾಗಲಿದೆ.

Best Mobiles in India

English summary
moto g stylus (2025) with Qualcomm Snapdragon 6 Gen 3 launched globally: price-specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+