Moto G04s ಮೊಬೈಲ್ ಸೇಲ್ ಆರಂಭ: ಬೆಲೆ, ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ಪ್ರತಿಷ್ಠಿತ ಮೊಬೈಲ್ (smartphone) ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ Motorola ಕಂಪನಿಯು, ತನ್ನ ಬಹುನಿರೀಕ್ಷಿತ Moto G04s ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇಂದು (ಮೇ 30) ಲಾಂಚ್ ಮಾಡಿದೆ. ಕಳೆದ ಏಪ್ರಿಲ್ (2024) ತಿಂಗಳಿನಲ್ಲಿ Moto G04s ಸ್ಮಾರ್ಟ್‌ಫೋನ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಇದು ಮೊಟೊರೊಲಾದ (Motorola) ವಿನೂತನ ಮೊಬೈಲ್ ಆಗಿತ್ತು. ಇದೀಗ, ಭಾರತದಲ್ಲಿ ತನ್ನ ಸರಣಿಯ Motorola G04s ಸ್ಮಾರ್ಟ್‌ಫೋನ್ ಅನ್ನು ಬಿಡಗಡೆ ಮಾಡಿದೆ.
Motorola G04s ಸ್ಮಾರ್ಟ್‌ಫೋನ್ ಬಗ್ಗೆ ಮೊಬೈಲ್ ಪ್ರಿಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಎಲ್ಲಾ ಕುತೂಹಲಕ್ಕೆ Motorola ಕಂಪನಿಯು ತೆರೆ ಎಳೆದಿದೆ. ಇದೀಗ, ಲಾಂಚ್ ಆಗಿರುವ ಈ Moto G04s ಮೊಬೈಲ್ UNISOC ಚಿಪ್‌ಸೆಟ್, ದೊಡ್ಡ ಬ್ಯಾಟರಿ, ಅದ್ಭುತ ಡಿಸ್‌ಪ್ಲೇ ಹೊಂದಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ವಿವಿಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. Moto G04sನ ಬೆಲೆ ಲಭ್ಯತೆ ಮತ್ತು ಫೀಚರ್ಸ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Moto G04s ಬೆಲೆ, ಲಭ್ಯತೆ, ಕಲರ್‌ಗಳು
ಭಾರತದಲ್ಲಿ 4GB/64GB ಹೊಂದಿರುವ Moto G04s 6,999 ರೂ.ಗಳಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮೊಬೈಲ್ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಕಾನ್ಕಾರ್ಡ್ ಬ್ಲಾಕ್ (Concord Black), ಸೀ ಗ್ರೀನ್ (Sea Green), ಸ್ಯಾಟಿನ್ ಬ್ಲೂ (Satin Blue) ಮತ್ತು ಸನ್ರೈಸ್ ಆರೆಂಜ್ (Sunrise Orange) ಬಣ್ಣದಲ್ಲಿ ಖರೀದಿಸಬಹುದು. Moto G04s ಭಾರತದಲ್ಲಿ Flipkart, Motorola.inನಲ್ಲಿ ಜೂನ್ 5 ರಂದು ಮಧ್ಯಾಹ್ನ 12 ಗಂಟೆಗೆ (IST) ಖರೀದಿಗೆ ಲಭ್ಯವಿದೆ.
Moto G04s ಸ್ಮಾರ್ಟ್‌ಫೋನ್‌ನ ವಿಶೇಷತೆಗಳು
Moto G04s ಸ್ಮಾರ್ಟ್‌ಫೋನ್ UNISOC T606 ಪ್ರೊಸೆಸರ್ ಮತ್ತು Mali-G57 MP1 GPU ಹೊಂದಿದೆ. ಜೊತೆಗೆ, 8GB RAM ಮತ್ತು 128GB ವರೆಗಿನ UFS 2.2 ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಇದಲ್ಲದೆ, Motorolaದ RAM ಬೂಸ್ಟ್ ತಂತ್ರಜ್ಞಾನದ ಮೂಲಕ 8GB ವರೆಗೆ ಬಳಸಬಹುದಾದ ಸ್ಟೋರೇಜ್ ಅನ್ನು ವರ್ಚುವಲ್ RAM (8GB RAMವರೆಗೆ ವರ್ಚುಮ್ RAM ವಿಸ್ತರಣೆ) ಆಗಿ ಬಳಸಬಹುದು.
ಈ ಸ್ಮಾರ್ಟ್‌ಫೋನ್ USB ಟೈಪ್-ಸಿ ಪೋರ್ಟ್ ಮೂಲಕ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಆದಾಗ್ಯೂ, ಬಾಕ್ಸ್‌ನಲ್ಲಿ 10W ಅಡಾಪ್ಟರ್ ಅನ್ನು ಮಾತ್ರ ಸೇರಿಸಲಾಗಿದೆ. Motorola G04s ಅನ್ನು 6.6-ಇಂಚಿನ IPS LCD ಡಿಸ್ಲ್ಪೇ ಹೊಂದಿದೆ. ಜೊತೆಗೆ, HD+ ರೆಸಲ್ಯೂಶನ್, 90Hz ರಿಫ್ರೆಶ್ ದರ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ಮತ್ತು ಸೆಂಟರ್ ಅಲೈನ್ ಪಂಚ್ ಹೋಲ್ ಕಟೌಟ್ ಅನ್ನು ಹೊಂದಿದೆ.
50MP ಬ್ಯಾಕ್ ಮತ್ತು 5MP ಫ್ರಂಟ್ ಕ್ಯಾಮೆರಾ
Motorola G04s ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ (ಸೆಲ್ಫಿ ಶೂಟರ್ ಮತ್ತು ವಿಡಿಯೋ ಕಾಲ್‌ಗಾಗಿ) ಕ್ಯಾಮೆರಾ ಒಳಗೊಂಡಿದೆ. Moto G04s Android 14 ಅನ್ನು ಬಾಕ್ಸ್‌ನ ಹೊರಗೆ My UX ನೊಂದಿಗೆ ರನ್ ಮಾಡುತ್ತದೆ. ಇದು ಯಾವುದೇ OS ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಿಲ್ಲ. ಆದರೂ, Motorola ಎರಡು ವರ್ಷಗಳ ನಿಯಮಿತ ಭದ್ರತಾ ಪ್ಯಾಚ್‌ಗಳನ್ನು ಒದಗಿಸುತ್ತದೆ.
179 ಗ್ರಾಂ ತೂಕ ಮತ್ತು ಕೇವಲ 7.99MM ದಪ್ಪ
ಈ ಮೊಬೈಲ್ 179 ಗ್ರಾಂ ತೂಕ ಮತ್ತು ಕೇವಲ 7.99MM ದಪ್ಪ ಇದೆ. ಇದು ನೀರು-ನಿವಾರಕ ವಿನ್ಯಾಸ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಸಹ ಹೊಂದಿದೆ. Moto G04s ಮೊಬೈಲ್ 4G LTE, ಬ್ಲೂಟೂತ್ 5.0, GPS, ಡ್ಯುಯಲ್-ಬ್ಯಾಂಡ್ Wi-Fi, ಮೈಕ್ರೊ SD ಕಾರ್ಡ್ ಸ್ಲಾಟ್ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿವೆ. ಇದರ ಜೊತೆಗೆ, Moto G04sನಲ್ಲಿ ಬಿಲ್ಟ್-ಇನ್ ಸ್ಪೀಕರ್‌ಗಳು Dolby Atmos ಅನ್ನು ಬೆಂಬಲಿಸುತ್ತವೆ.
ಜೂನ್ 5ರಿಂದ ಮಾರಾಟ ಆರಂಭ
ಒಟ್ನಲ್ಲಿ, ಮೊಟೊರೊಲಾ ಕಂಪನಿ ಈ ಹಿಂದೆ ಪರಿಚಯಿಸಿದ್ದ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿದ್ದವು. ಹೀಗಾಗಿ, ತನ್ನ ಸರಣಿಯ Moto G04s ಮಾದರಿಯನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಅಲ್ಲಿನ ಸ್ಮಾರ್ಟ್‌ಫೋನ್ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಹೀಗಾಗಿ, ಭಾರತದಲ್ಲಿ Motorola G04s ಲಾಂಚ್ ಮಾಡಲಾಗಿದೆ. ಈ ಮೊಬೈಲ್‌ನ ಫೀಚರ್ಸ್‌ಗಳು ನಿಮಗೆ ಇಷ್ಟವಾದಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಜೂನ್ 5ದಿಂದ ಈ ಮೊಬೈಲ್ ಖರೀದಿಗೆ ಲಭ್ಯವಿರುತ್ತದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








