Home
ಮೊಬೈಲ್

ಕೇವಲ 10,000 ರೂ.! 5200mAh ಬ್ಯಾಟರಿ.. 50MP ಕ್ಯಾಮೆರಾ.. Moto G05 ಬಿಡುಗಡೆ ದಿನಾಂಕ ಘೋಷಣೆ

ಮೊಬೈಲ್ ಪ್ರಿಯರಿಗೆ ಮೊಟೊರೊಲಾ ಗುಡ್‌ ನ್ಯೂಸ್‌ ಕೊಟ್ಟಿದೆ. ಕಂಪನಿಯು ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಮೊಟೊ ಮೊಬೈಲ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆದ ಎಲ್ಲಾ ಫೋನ್‌ಗಳು ಕೆಲವೇ ದಿನಗಳಲ್ಲಿ ಭಾರತದಲ್ಲಿ ರಿಲೀಸ್ ಆಗುತ್ತವೆ. ಅದರಂತೆ, ಮೊಟೊರೊಲಾ ಇತ್ತೀಚೆಗೆ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಮೊಟೊ G05 (Moto G05) ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಇದು ಈಗ ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.

ಕಂಪನಿಯು ಮೊಟೊ G05 ಫೋನಿನ ಮೈಕ್ರೋ ಸೈಟ್ ಅನ್ನು ಲೈವ್ ಮಾಡಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹೆಲಿಯೊ G81 ಎಕ್ಸ್‌ಟ್ರೀಮ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೆಯೇ 4GB RAM + 64GB ಸ್ಟೋರೇಜ್, 5200mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಜ.7ಕ್ಕೆ Moto G05 ಲಾಂಚ್; 5200mAh ಬ್ಯಾಟರಿ, 50MP ಕ್ಯಾಮೆರಾ.. ಅಗ್ಗದ ಬೆಲೆ

ಮೊಟೊ G05 ಭಾರತ ಬಿಡುಗಡೆ ದಿನಾಂಕ

ಮೊಟೊ G05 ಸ್ಮಾರ್ಟ್‌ಫೋನ್‌ ಜನವರಿ 7 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಕಂಪನಿಯು ಈ ಮೊಬೈಲ್‌ನ ಮೈಕ್ರೋ ಸೈಟ್ ಅನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಮಾಡಿದೆ. ಇಲ್ಲಿ ಫೋನ್ ಲಾಂಚ್ ದಿನಾಂಕದ ಜೊತೆಗೆ ಅದರ ಫೋಟೋ, ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದೆ. ಈ ಫೋನಿನ ಬೆಲೆ 10 ಸಾವಿರ ರೂ.ಗಳ ಬಜೆಟ್‌ನಲ್ಲಿ ಇರುವ ಸಾಧ್ಯತೆಯಿದೆ. ಅಧಿಕೃತ ಬೆಲೆ ಮತ್ತು ಮಾರಾಟ ದಿನಾಂಕವು ಜನವರಿ 7 ರಂದು ಬಹಿರಂಗವಾಗಲಿದೆ.

ಮೊಟೊ G05 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊ G05 ಸ್ಮಾರ್ಟ್‌ಫೋನ್‌ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1612 x 720 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಮೊಟೊ G05 ಮೊಬೈಲ್ ಮೀಡಿಯಾ ಟೆಕ್‌ನ ಹೆಲಿಯೊ G81 ಎಕ್ಸ್‌ಟ್ರೀಮ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಇದು ಆರ್ಮ್ ಮಾಲಿ G52 MC2 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಹೊಸ ಆಂಡ್ರಾಯ್ಡ್‌ 15 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಫ್ಲಿಪ್‌ಕಾರ್ಟ್‌ನಲ್ಲಿನ ಮೈಕ್ರೋ ಸೈಟ್ ಪ್ರಕಾರ, ಮೊಟೊ G05 ಫೋನ್‌ 4GB RAM ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. RAM ಬೂಸ್ಟ್ ತಂತ್ರಜ್ಞಾನದ ಮೂಲಕ 12GB RAM ವರೆಗೆ ಹೆಚ್ಚಿಸಬಹುದು. ಇದು 8GB ವರ್ಚುವಲ್ RAM ಹೊಂದಿರುತ್ತದೆ. ಈ ಫೋನಿನಲ್ಲಿ 64GB ಸ್ಟೋರೇಜ್‌ ಆಯ್ಕೆ ಲಭ್ಯವಿರಲಿದೆ.

ಜ.7ಕ್ಕೆ Moto G05 ಲಾಂಚ್; 5200mAh ಬ್ಯಾಟರಿ, 50MP ಕ್ಯಾಮೆರಾ.. ಅಗ್ಗದ ಬೆಲೆ

ಕ್ಯಾಮೆರಾ ಸೆಟಪ್

ಬಿಡುಗಡೆಗೆ ಸಿದ್ಧವಾಗಿರುವ ಮೊಟೊ G05 ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮೊಟೊ G05 ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಪೂರ್ಣ ಚಾರ್ಜ್ ನಂತರ 2 ದಿನ ಬಾಳಿಕೆ ಬರುತ್ತದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಮೊಟೊ G05 ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್‌ ಪಡೆದಿದೆ. ಇದರೊಂದಿಗೆ ವಾಟರ್ ಟಚ್ ತಂತ್ರಜ್ಞಾನ ಸಹ ಹೊಂದಿದೆ. ಜೊತೆಗೆ ಡ್ಯುಯಲ್ ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳು ಲಭ್ಯವಿದೆ.

Best Mobiles in India

English summary
Moto G05 Launching in India on January 7: Check Price and Specifications More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+