ಕೇವಲ 7,499 ರೂ.ಗೆ 7,000mAh ಬ್ಯಾಟರಿಯ Moto G06 Power ಬಿಡುಗಡೆ!
ಜನಪ್ರಿಯ ಮೊಬೈಲ್ ಬ್ರ್ಯಾಂಟ್ ಮೊಟೊರೊಲಾ (Motorola) ತನ್ನ ಹೊಸ ಮತ್ತು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ Moto G06 Power ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 7,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಮತ್ತು ಕೇವಲ 7,499 ರೂ. ಕೈಗೆಟುಕುವ ಬೆಲೆಯೊಂದಿಗೆ ಈ ಫೋನ್ ದೇಶದ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾದರೆ, ಈ ಹೊಸ Moto G06 Power ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ಈ ಬೆಲೆಗೆ ಫೋನ್ ನೀಡುವ ಮೌಲ್ಯವೇನು ಎಂಬುದನ್ನು ನೋಡೋಣ ಬನ್ನಿ.
Moto G06 Power: ಪ್ರಮುಖ ವೈಶಿಷ್ಟ್ಯಗಳು
ಹೊಸ Moto G06 Power ಫೋನಿನ ದೊಡ್ಡ ಶಕ್ತಿ ಅದರ 7,000mAh ಬ್ಯಾಟರಿ. ಮೋಟೋರೊಲಾ ಪ್ರಕಾರ, ಇದು ಒಂದೇ ಚಾರ್ಜ್‌ನಲ್ಲಿ 65 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ದೈನಂದಿನ ಬಳಕೆಯಲ್ಲಿ ಪದೇ ಪದೇ ಚಾರ್ಜ್ ಮಾಡುವ ಚಿಂತೆ ಇಲ್ಲ. ಇದು 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, ಜೊತೆಗೆ ಬಾಕ್ಸ್‌ನಲ್ಲಿ 20W ಚಾರ್ಜರ್ ಲಭ್ಯವಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ MediaTek Helio G81 Extreme SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ದೈನಂದಿನ ಕಾರ್ಯಗಳು ಮತ್ತು ಲೈಟ್ ಗೇಮಿಂಗ್‌ಗೆ ಸಾಕಷ್ಟು ಉತ್ತಮವಾಗಿದೆ. ಭಾರತದಲ್ಲಿ ಇದರ ಆರಂಭಿಕ ಮಾದರಿಯು 4GB RAM ಮತ್ತು 64GB ಸಂಗ್ರಹಣೆಯೊಂದಿಗೆ ಲಭ್ಯವಿದೆ. ಹೆಚ್ಚುವರಿ ಸಂಗ್ರಹಣೆ ಅಗತ್ಯವಿದ್ದರೆ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಲು ಅವಕಾಶವಿದೆ.

Moto G06 Power 6.88-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರಾಲ್ ಮಾಡುವಾಗ ಮತ್ತು ಅನಿಮೇಷನ್‌ಗಳಲ್ಲಿ ಸುಗಮ ಅನುಭವವನ್ನು ನೀಡುತ್ತದೆ. ಇನ್ನು ಈ ಡಿಸ್ಪ್ಲೇಗೆ ರಕ್ಷಣೆ ನೀಡಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಬಳಸಲಾಗಿದೆ.
ಫೋಟೋಗ್ರಫಿ ವಿಭಾಗದಲ್ಲಿ, ಇದು ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಂವೇದಕವನ್ನು ಹೊಂದಿದೆ, ಇದು ಉತ್ತಮ ಬೆಳಕಿನ ಪರಿಸ್ಥಿತಿಗಳಲ್ಲಿ ಆಕರ್ಷಕ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮರಾ ಇದೆ.
Moto G06 Power ಆಂಡ್ರಾಯ್ಡ್ 15 ನಲ್ಲಿ Hello UI ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹೊಂದಿದೆ. ಇದಲ್ಲದೆ, ಈ ಫೋನ್ Google ನ ಜೆಮಿನಿ AI ಸಹಾಯಕಕ್ಕೆ ಸಹ ಬೆಂಬಲವನ್ನು ನೀಡುತ್ತದೆ.
7,499 ರೂ.ಗೆ ಇದು ಉತ್ತಮ ಆಯ್ಕೆಯೇ?
ಭಾರತದಲ್ಲಿ Moto G06 Power ನ ಮೂಲ ಮಾದರಿಯ ಬೆಲೆ ಕೇವಲ ರೂ. 7,499 ಆಗಿದೆ. ಈ ಬೆಲೆಗೆ, ದೈತ್ಯ 7,000mAh ಬ್ಯಾಟರಿ, 120Hz ಡಿಸ್‌ಪ್ಲೇ, 50MP ಕ್ಯಾಮೆರಾ ಮತ್ತು IP64 ರೇಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುವುದು ನಿಜಕ್ಕೂ ಒಂದು ಅದ್ಭುತ ಮೌಲ್ಯದ ವ್ಯವಹಾರ ಎನ್ನಬಹುದು.
ನೀವು ಹೆಚ್ಚಾಗಿ ಪ್ರಯಾಣಿಸುವವರಾಗಿದ್ದರೆ ಅಥವಾ ಹೆಚ್ಚು ಗಂಟೆಗಳ ಕಾಲ ಫೋನ್ ಬಳಸುವವರಾಗಿದ್ದರೆ ಮತ್ತು ನಿಮ್ಮ ಬಜೆಟ್ 8,000 ರೂಪಾಯಿಗಳಿಗಿಂತ ಕಡಿಮೆ ಇದ್ದರೆ, ದೀರ್ಘಾವಧಿಯ ಬ್ಯಾಟರಿ ಹೊಂದಿರುವ Moto G06 Power ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ ಆದರೆ, ನೀವು 5G ಫೋನ್ ಅನ್ನು ಎದುರುನೋಡುತ್ತಿದ್ದರೆ, ನಿಮ್ಮ ಆಯ್ಕೆಯನ್ನು ಬದಲಾಯಿಸಬಹುದು. ಏಕೆಂದರೆ, ಈ ಫೋನ್ 4G LTE ಬೆಂಬಲವನ್ನು ಮಾತ್ರ ಹೊಂದಿದೆ.
ಇನ್ನು ಈ Moto G06 Powe ಫೋನ್ Flipkart, Motorola India ವೆಬ್‌ಸೈಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಈ ಬಜೆಟ್ ಬೆಲೆಯ ಫೋನ್ ಕುರಿತು ನಿಮ್ಮ ಅನಿಸಿಕೆ ಏನು? ದೈತ್ಯ ಬ್ಯಾಟರಿ ನಿಮಗೆ ಎಷ್ಟು ಮುಖ್ಯ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.


Click it and Unblock the Notifications








