Subscribe to Gizbot

ಮೊಟೊ ಜಿ4 ಸೀರೀಸ್ ಫೋನ್‌ ಖರೀದಿಗೆ ಅಮೆಜಾನ್ ಇಂಡಿಯಾದಲ್ಲಿ ಆಕರ್ಷಕ ಡಿಸ್ಕೌಂಟ್‌ಗಳು

Written By:

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮದಲ್ಲಿ ಸ್ಮಾರ್ಟ್‌ಫೋನ್, ಗ್ಯಾಜೆಟ್, ಹೋಮ್‌ ಆಕ್ಸೆಸರೀಸ್ ಖರೀದಿಸುವವರಿಗೆ ಡಿಸ್ಕೌಂಟ್‌ ಮೇಲೆ ಡಿಸ್ಕೌಂಟ್ ಆಫರ್ ಕೊಡುಗೆಗಳು ಲಭ್ಯ. ಅಂತೆಯೇ ಈ ಕ್ರಿಸ್‌ಮಸ್ ಕಾರ್ನರ್‌ನಲ್ಲಿ ಅಮೆಜಾನ್ ಇಂಡಿಯಾ ರೂ.2,000 ವರೆಗೆ ಫ್ಲ್ಯಾಟ್ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ ಮೊಟೊ ಜಿ4, ಮೊಟೊ ಜಿ4 ಪ್ಲಸ್, ಮೊಟೊ ಜಿ4 ಪ್ಲೇ ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಎಕ್ಸ್‌ಚೇಂಜ್‌ ಆಫರ್ ಡಿಸ್ಕೌಂಟ್ ನೀಡುತ್ತಿದೆ.

ಅಮೆಜಾನ್‌ ಇಂಡಿಯಾದ ಈ ವಿಶೇಷ ಡಿಸ್ಕೌಂಟ್‌ಗಳು ಇಂದಿನಿಂದ (ಡಿಸೆಂಬರ್ 20) ಆರಂಭವಾಗುತ್ತಿದ್ದು, 2017 ರ ಜನವರಿ ಮಧ್ಯ ಭಾಗದವರೆಗೆ ಲಭ್ಯ. ಖರೀದಿದಾರರು ಶೇಕಡ.10 ಕ್ಯಾಶ್‌ಬ್ಯಾಕ್‌ ಅನ್ನು ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಸ್ಟಾಂಡರ್ಡ್ ಚಾರ್ಟರ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಪಡೆಯಬಹುದು.

ಮೊಟೊ ಜಿ4 ಸೀರೀಸ್ ಫೋನ್‌ ಖರೀದಿಗೆ ಅಮೆಜಾನ್ ಇಂಡಿಯಾದಲ್ಲಿ ಆಕರ್ಷಕ ಡಿಸ್ಕೌಂಟ್‌ಗಳು

ಎಲೆಕ್ಟ್ರಾನಿಕ್ ಪೇಮೆಂಟ್ ಕ್ರೆಡಿಟ್/ಡೆಬಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್ ಪೇಮೆಂಟ್ ಆಪ್ಶನ್‌ ಬಳಸಿದಲ್ಲಿ ಅಮೆಜಾನ್‌ ಇಂಡಿಯಾ ರೂ.1,000 ಕ್ಯಾಶ್‌ಬ್ಯಾಕ್ ಅನ್ನು ಗಿಫ್ಟ್ ಕಾರ್ಡ್‌ ಆಗಿ ನೀಡುತ್ತಿದೆ.

ಹೊಸ ಮೊಟೊ ಜಿ4 ಸೀರೀಸ್ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಹಳೆಯ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ನೊಂದಿಗೆ ರೂ.10,035 ವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಪಡೆಯಬಹುದು. ಸ್ಮಾರ್ಟ್‌ಫೋನ್‌ ಖರೀದಿಗೆ ಇಎಂಐ ಆಪ್ಶನ್‌ ಇದ್ದು, ಐಸಿಐಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸಿಟಿಬ್ಯಾಂಕ್, ಕೊಟಕ್ ಮಹಿಂದ್ರಾ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಆಕ್ಸಿಕ್ ಬ್ಯಾಂಕ್ ಮತ್ತು ಸ್ಟಾಂಡರ್ಡ್ ಚಾರ್ಟರ್ಡ್ ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗೆ ಬಳಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊರೊಲಾ ಮೊಟೊ ಜಿ4 ಪ್ಲೇ ಅಮೆಜಾನ್ ಇಂಡಿಯಾ ಆಫರ್

ಮೊಟೊರೊಲಾ ಮೊಟೊ ಜಿ4 ಪ್ಲೇ ಅಮೆಜಾನ್ ಇಂಡಿಯಾ ಆಫರ್

ಮೊಟೊ ಜಿ4 ಪ್ಲೇ ಬೆಲೆ ರೂ.8,999 ಆಗಿದ್ದು, ಅಮೆಜಾನ್ ಇಂಡಿಯಾ ರೂ.500 ಡಿಸ್ಕೌಂಟ್ ನೀಡುತ್ತಿದೆ. ಮೊಟೊ ಜಿ4 ಪ್ಲೇ ಅನ್ನು ರೂ.8,499 ಕ್ಕೆ ಖರೀದಿಸಬಹುದು. ಈ ಡಿಸ್ಕೌಂಟ್ ಡಿಸೆಂಬರ್ 20, 21 ರಂದು ಲಭ್ಯ. ಡಿಸೆಂಬರ್ 22 ರಿಂದ ಅಮೆಜಾನ್‌ ಪೇ ವ್ಯಾಲೆಟ್'ನಲ್ಲಿ ರೂ.1,000 ಕ್ಯಾಶ್‌ಬ್ಯಾಕ್‌ ಅನ್ನು ಖರೀದಿದಾರರಿಗೆ ನೀಡಲಿದೆ.

ಹೊಸ ಮೊಟೊ ಜಿ4 ಪ್ಲೇ ಸ್ಮಾರ್ಟ್‌ಫೋನ್‌ ಖರೀದಿಗೆ, ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಬಳಸಬಹುದು ಮತ್ತು ರೂ.6,600 ವರೆಗೆ ಎಕ್ಸ್‌ಚೇಂಜ್ ಆಫರ್ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲಾ ಮೊಟೊ ಜಿ4 ಅಮೆಜಾನ್ ಇಂಡಿಯಾ ಆಫರ್

ಮೊಟೊರೊಲಾ ಮೊಟೊ ಜಿ4 ಅಮೆಜಾನ್ ಇಂಡಿಯಾ ಆಫರ್

ಮೊಟೊ ಜಿ4 ಬೆಲೆ ರೂ.12,499 ಆಗಿದ್ದು, ರೂ.2,000 ಡಿಸ್ಕೌಂಟ್ ಪಡೆದು ರೂ. 10,499 ಕ್ಕೆ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದು. ಮೊಟೊ ಜಿ4(32GB) ಬೆಲೆ ರೂ.13,999 ಆಗಿದ್ದು, ಇದನ್ನು ರೂ.2,000 ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು.

ಮೊಟೊ ಜಿ4 ಖರೀದಿಗೆ ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್‌ನಲ್ಲಿ ರೂ.8,550 ವರೆಗೆ ಡಿಸ್ಕೌಂಟ್ ಪಡೆಯಬಹುದು. ಅಲ್ಲದೇ ಸ್ಟಾಂಡರ್ಡ್ ಚಾರ್ಟರ್ಡ್ ಕ್ರೆಡಿಟ್ ಬಳಕೆಯಿಂದ ಶೇ.10 ರಷ್ಟು ಡಿಸ್ಕೌಂಟ್ ಪಡೆಯಬಹುದು.

ಮೊಟೊರೊಲಾ ಮೊಟೊ ಜಿ4 ಪ್ಲಸ್ ಅಮೆಜಾನ್ ಇಂಡಿಯಾ ಆಫರ್

ಮೊಟೊರೊಲಾ ಮೊಟೊ ಜಿ4 ಪ್ಲಸ್ ಅಮೆಜಾನ್ ಇಂಡಿಯಾ ಆಫರ್

ಮೊಟೊರೊಲಾ ಮೊಟೊ ಜಿ4 ಪ್ಲಸ್ ಬೆಲೆ ರೂ.13,499 ಆಗಿದ್ದು, ರೂ.1,000 ಫ್ಲ್ಯಾಟ್ ಡಿಸ್ಕೌಂಟ್ ನಂತರ ರೂ.12,499 ಕ್ಕೆ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಮೊಟೊ ಜಿ4 ಪ್ಲಸ್(32GB) ವಿಭಿನ್ನತೆಯ ಬೆಲೆ ರೂ.14,999 ಇದ್ದು, ಇದನ್ನು ರೂ.1,000 ಡಿಸ್ಕೌಂಟ್ ಪಡೆದು ಬೆಲೆ ರೂ.13,999 ಕ್ಕೆ ಖರೀದಿಸಬಹುದು.

ಹೆಚ್ಚುವರಿಯಾಗಿ ರೂ.10,035 ವರೆಗೆ ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್‌ ಆಫರ್ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Moto G4, Moto G4 Plus, Moto G4 Play get up to Rs 2,000 off on Amazon India, cashback, exchange offers and more. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot