ಇಂದು Moto G45 5G ಸೇಲ್: ಮೊದಲೇ ಬೆಲೆ ಕಡಿಮೆ.. ಜೊತೆಗೆ ಸಖತ್ ಆಫರ್!
ಮೊಟೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಇತ್ತೀಚೆಗೆ ಕಂಪನಿಯು, ಮೊಟೊ G45 5G (Moto G45 5G) ಫೋನನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ 'G' ಸರಣಿಯ ಮತ್ತೊಂದು ಹೊಸ ಫೋನ್ ಆಗಿದೆ. ಅಂದಹಾಗೆ, ಈ ಫೋನ್ ಇಂದು (ಆಗಸ್ಟ್ 28) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಕೇವಲ 10,999 ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಫೋನನ್ನು ಪರಿಚಯಿಸಿದೆ. ಡಿಸ್ಕೌಂಟ್‌ನೊಂದಿಗೆ 9,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹೌದು, ಮೊಟೊ G45 5G ಫೋನ್ ಮಾರಾಟಕ್ಕೆ ಸಿದ್ಧವಾಗಿದೆ. ಸ್ಮಾರ್ಟ್‌ಫೋನ್ ಪ್ರಿಯರು ಈ ಮೊಬೈಲ್ ಅನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಈ ಫೋನ್, ಕಡಿಮೆ ಬೆಲೆ ಹೊಂದಿದ್ದರೂ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಜೆಟ್ ಬೆಲೆಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲುಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದು 6.5 ಇಂಚಿನ HD+ LCD ಡಿಸ್ಲ್ಪೇಯನ್ನು ಹೊಂದಿದೆ. Snapdragon 6s Gen 3 SoC ಪ್ರೊಸೆಸರ್, 16MP ಫ್ರಂಟ್ ಕ್ಯಾಮೆರಾ ಹೊಂದಿದೆ.

ಈ ಫೋನ್ ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್ ಅನ್ನು ರನ್ ಮಾಡುತ್ತದೆ. ಕಂಪನಿಯು ಆಂಡ್ರಾಯ್ಡ್ 15 ಓಎಸ್ ಅಪ್‌ಡೇಟ್ ಮತ್ತು ಫೋನ್‌ಗೆ 3 ವರ್ಷಗಳ ಭದ್ರತಾ ನವೀಕರಣಗಳನ್ನು ಖಚಿತಪಡಿಸಿದೆ. ಇದು 2MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 5000mAh ಬ್ಯಾಟರಿಯನ್ನು 18W ವೇಗದ ಚಾರ್ಜಿಂಗ್ ಸಹ ಹೊಂದಿದೆ. ಮತ್ತು ಬಾಕ್ಸ್‌ನಲ್ಲಿ 20W ಚಾರ್ಜ್‌ನೊಂದಿಗೆ ಬರುತ್ತದೆ.
ಮೊಟೊ G45 5G ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಮೊಟೊ G45 5G ಮೊಬೈಲ್ ಅನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ನೀವು ವಿವಾ ಮೆಜೆಂಟಾ, ಬ್ರಿಲಿಯಂಟ್ ಬ್ಲೂ ಮತ್ತು ಬ್ರಿಲಿಯಂಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ 4GB ಮತ್ತು 128GB ಸ್ಟೋರೇಜ್ ಬೆಲೆ 10,999 ರೂ. ಇದೆ. 8GB ಮತ್ತು 128GB ಸ್ಟೋರೇಜ್ ರೂಪಾಂತರವು 12,999 ರೂ.ಗೆ ಲಭ್ಯವಿದೆ.
ಮೊಟೊ G45 5G ಫೋನಿನ ಡಿಸ್ಕೌಂಟ್ ಬೆಲೆ
- 4GB ಮತ್ತು 128GB ಸ್ಟೋರೇಜ್ ಬೆಲೆ = 9,999 ರೂ.
- 8GB ಮತ್ತು 128GB ಸ್ಟೋರೇಜ್ ಬೆಲೆ = 11,999 ರೂ.
ಕಂಪನಿಯು ಮೊಟೊ G45 5G ಖರೀದಿ ಮೇಲೆ ಕೆಲವು ಬ್ಯಾಂಕ್ ಆಫರ್‌ಗಳನ್ನು ಘೋಷಿಸಿದೆ. ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,000 ರೂ.ಗಳ ತ್ವರಿತ ಡಿಸ್ಕೌಂಟ್ ಲಭ್ಯವಿದೆ. ರಿಯಾಯಿತಿಯೊಂದಿಗೆ ಈ ಫೋನನ್ನು ಕ್ರಮವಾಗಿ 9,999 ರೂ. ಮತ್ತು 11,999 ರೂ.ಗೆ ಕೊಳ್ಳಬಹುದು. ಫ್ಲಿಪ್‌ಕಾರ್ಟ್, Motorola.in ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಇಂದು (ಆಗಸ್ಟ್ 28) ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರಲಿದೆ.

ಮೊಟೊ G45 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ಮೊಟೊ G45 5G ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ 500nits ಗರಿಷ್ಠ ಬ್ರೈಟ್‌ನೆಸ್, 1600 x 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ.
ಪ್ರೊಸೆಸರ್: ಹೊಸ ಮೊಟೊ G45 5G ಫೋನ್ ಆಕ್ಟಾ-ಕೋರ್ Qualcomm Snapdragon 6s Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕೆಲಸ ಮಾಡಲಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಒಳಗೊಂಡಿದೆ.
ಕ್ಯಾಮೆರಾ: ಇದು 50 ಮೆಗಾಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಮೊಟೊ G45 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ ಬರತ್ತದೆ. ಇದು ಟರ್ಬೋಪವರ್ ವೇಗದ ಚಾರ್ಜಿಂಗ್ ತಂತ್ರವನ್ನು ಸಹ ಒಳಗೊಂಡಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ 162.7 x 74.64 x 8.03mm ದಪ್ಪ ಮತ್ತು 18 ಗ್ರಾಂ ತೂಕ ಹೊಂದಿದೆ. ನೀರು ಮತ್ತು ಧೂಳು ನಿರೋಧಕ IP52 ರೇಟಿಂಗ್ ಪಡೆದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳು, ದಪ್ಪ ಗೆಸ್ಚರ್ ವೈಶಿಷ್ಟ್ಯಗಳು, 13 5G ಬ್ಯಾಂಡ್‌ಗಳು, ಡ್ಯುಯಲ್ ಸಿಮ್ 5G, ಬ್ಲೂಟೂತ್ 5.2, ವೈ-ಫೈ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications








