ಇಂದು ಬರ್ತಿದೆ Moto G45 5G ಫೋನ್! ಕಡಿಮೆ ಬೆಲೆ, ಹೇಗಿದೆ?
Moto G45 5G Launch: ಮೊಟೊ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಇಂದು (ಆಗಸ್ಟ್ 21) ಮೊಟೊರೊಲಾ (Motorola) ತನ್ನ ಭಾರತೀಯ ಗ್ರಾಹಕರಿಗಾಗಿ ಬಜೆಟ್ ವಿಭಾಗದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡುತ್ತಿದೆ. ಹೌದು, ಕಂಪನಿಯು ಇಂದು ಭಾರತದಲ್ಲಿ ಮೊಟೊ G45 5G (Moto G45 5G) ಫೋನನ್ನು ಪ್ರಾರಂಭಿಸುತ್ತಿದೆ. ಈ ಫೋನ್‌ನ ಲ್ಯಾಂಡಿಂಗ್ ಪೇಜ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಅಲ್ಟ್ರಾ ಪ್ರೀಮಿಯಂ (ಸ್ಲಿಮ್) ವಿನ್ಯಾಸದೊಂದಿಗೆ ಬರಲಿದೆ. ಮುಂಬರುವ ಹೊಸ ಫೋನಿನ ಫೀಚರ್ಸ್‌ಗಳನ್ನು ತಿಳಿಯೋಣ ಬನ್ನಿ.
ಮೊಟೊರೊಲಾ ಇತ್ತೀಚೆಗೆ Moto G85 5G ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ, ಮೊಟೊ G45 5G ಬಜೆಟ್ ಫೋನನ್ನು ಪರಿಚಯಿಸುತ್ತಿದೆ. 50MP ಕ್ವಾಡ್ ಪಿಕ್ಸೆಲ್ ಕ್ಯಾಮೆರಾದೊಂದಿಗೆ ಫೋನನ್ನು ಲಾಂಚ್ ಮಾಡಲಾಗುತ್ತಿದೆ. ಇದಲ್ಲದೇ ಮೊಟೊರೊಲಾದ ಹೊಸ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. 6.5 ಇಂಚಿನ 120Hz ಡಿಸ್ಪ್ಲೇ, Snapdragon 6s Gen3 ಪ್ರೊಸೆಸರ್, 128GB ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಮೊಟೊ G45 5G ಬಿಡುಗಡೆ ವಿವರಗಳು
ಮೊಟೊರೊಲಾ ಕಂಪನಿಯು ಮೊಟೊ G45 5G ಫೋನನ್ನು ಇಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮಧ್ಯಾಹ್ನ 12 ಗಂಟೆಗೆ ಕಂಪನಿಯು ಈ ಫೋನನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಿದೆ. ಬಳಿಕ ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ನೀವು ಈ ಫೋನನ್ನು ಖರೀದಿಸಬಹುದು.
ಮೊಟೊ G45 5G ನಿರೀಕ್ಷಿತ ಬೆಲೆ
ಮೊಟೊರೊಲಾ ಕಂಪನಿಯು ಹೊಸ ಮೊಟೊ G45 5G ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಸೋರಿಕೆಯ ಪ್ರಕಾರ ಈ ಫೋನನ್ನು 15 ಸಾವಿರ ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ.
ಮೊಟೊ G45 5G ವೈಶಿಷ್ಟ್ಯಗಳು
ಮೊಟೊರೊಲಾ ಈ ಫೋನನ್ನು 6.5 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಪರಿಚಯಿಸುತ್ತಿದೆ. ಇದರಲ್ಲಿ ನೀವು 120Hz ರಿಫ್ರೆಶ್ ದರವನ್ನು ಪಡೆಯಬಹುದು. ಇದು ಫ್ಲಾಟ್ ಸ್ಕ್ರೀನ್ ಜೊತೆಗೆ, ಸ್ಮಾರ್ಟ್‌ಫೋನ್ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. 1600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹಾಗೂ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಈ ಫೋನನ್ನು ತರಲಾಗುತ್ತಿದೆ.
ಈ ಹೊಸ ಮೊಟೊರೊಲಾ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s Gen 3 ಪ್ರೊಸೆಸರ್ ಅನ್ನು ಹೊಂದಿರಲಿದೆ. ಜೊತೆಗೆ, ಮೊಟೊ G45 ಅತ್ಯಂತ ವೇಗದ 5G ಕಾರ್ಯಕ್ಷಮತೆಯೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು 13 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಫ್ಲಿಪ್‌ಕಾರ್ಟ್ ಮೈಕ್ರೋಪೇಜ್ ಪ್ರಕಾರ, ಈ ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್ ಖಚಿತ
ಮೊಟೊ G45 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. 50MP ಕ್ವಾಡ್ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಕೆಂಡರಿ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಇರಲಿದೆ. ಇಮೇಜ್ ಸ್ವಯಂ ವರ್ಧನೆ, ಮ್ಯಾಕ್ರೋ ವಿಷನ್ ಕ್ಯಾಮೆರಾ, ಆಟೋ ನೈಟ್ ವಿಷನ್ ಮತ್ತು ಹಲವು ಕ್ಯಾಮೆರಾ ವೈಶಿಷ್ಟ್ಯಗಳು ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುತ್ತವೆ.
ಹೊಸ ಮೊಟೊ G45 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ಟರ್ಬೊ ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ ಎಂದು ಮೊಟೊರೊಲಾ ಕಂಪನಿ ಹೇಳಿದೆ. IP52 ನೀರು ನಿವಾರಕ ವಿನ್ಯಾಸದೊಂದಿಗೆ ಫೋನನ್ನು ಪರಿಚಯಿಸಲಾಗುತ್ತಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್‌ನಲ್ಲಿ ಡ್ಯುಯಲ್ ಡಾಲ್ಬಿ ಅಟ್ಮಾಸ್ ಸ್ಟಿರಿಯೊ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಹೈ-ಫೈ ಆಡಿಯೋ ಮತ್ತು ಸ್ಮಾರ್ಟ್ ಕನೆಕ್ಟ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್, ಫೇಸ್ ಅನ್‌ಲಾಕ್, ವಾಟರ್ ರೆಸಿಸ್ಟೆನ್ಸ್, ಬಾಕ್ಸ್‌ನಲ್ಲಿ ಟೆಂಪರ್ಡ್ ಗ್ಲಾಸ್ ಮತ್ತು ಬಿಲ್ಟ್-ಇನ್ ಸೆಕ್ಯುರಿಟಿ ಸ್ಕ್ಯಾನ್ ವೈಶಿಷ್ಟ್ಯವನ್ನು ಹೊಂದಿರುತ್ತದೆ.


Click it and Unblock the Notifications








