Home
ಮೊಬೈಲ್

ಕೇವಲ 9,999 ರೂ.! Moto G45 5G ಭಾರತದಲ್ಲಿ ಬಿಡುಗಡೆ; ಅಚ್ಚರಿ ಫೀಚರ್ಸ್

ಬಂದೇ ಬಿಡ್ತು ಹೊಸ ಮೊಟೊ ಫೋನ್. ಅದು ಕೂಡ ಕೇವಲ 9,999 ರೂ.ಗೆ! ಹೌದು, ಮೊಟೊರೊಲಾ (Motorola) ಇಂದು 'G' ಸರಣಿಯ ಮತ್ತೊಂದು ಹೊಸ ಫೋನನ್ನು ಬಿಡುಗಡೆ ಮಾಡಿದೆ. ಅದುವೇ ಮೊಟೊ G45 5G (Moto G45 5G) ಸ್ಮಾರ್ಟ್‌ಫೋನ್. ನೀವು ಬಜೆಟ್ ಬೆಲೆಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ನಿಮಗಿದು ಉತ್ತಮ ಆಯ್ಕೆಯಾಗಿದೆ. ಕಂಪನಿಯು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಈ ಫೋನನ್ನು ಪರಿಚಯಿಸಿದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ಫೀಚರ್ಸ್‌ ತಿಳಿಯೋಣ ಬನ್ನಿ.

ಪ್ರಸಿದ್ಧ ಟೆಕ್ ಬ್ರ್ಯಾಂಡ್ ಮೊಟೊರೊಲಾ (Motorola) ಭಾರತೀಯ ಮಾರುಕಟ್ಟೆಗೆ ಹೊಸ ಮೊಟೊ G45 5G ಅನ್ನು ಪರಿಚಯಿಸಿದೆ. ನಿರೀಕ್ಷೆಯಂತೆಯೇ, ಇದು 120Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ HD+ LCD ಡಿಸ್ಲ್ಪೇಯನ್ನು ಹೊಂದಿದೆ, Snapdragon 6s Gen 3 SoC ಪ್ರೊಸೆಸರ್‌ನೊಂದಿಗೆ, 8GB RAM ಮತ್ತು 8GB ವರೆಗಿನ ವರ್ಚುವಲ್ RAM ಅನ್ನು ಒಳಗೊಂಡಿದೆ. ಪಂಚ್ ಹೋಲ್ ಒಳಗೆ 16MP ಫ್ರಂಟ್ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಕೇವಲ 9,999 ರೂ.! Moto G45 5G ಭಾರತದಲ್ಲಿ ಬಿಡುಗಡೆ; ಅಚ್ಚರಿ ಫೀಚರ್ಸ್

ಈ ಫೋನ್ ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್ ಅನ್ನು ರನ್ ಮಾಡುತ್ತದೆ. ಕಂಪನಿಯು ಆಂಡ್ರಾಯ್ಡ್ 15 ಓಎಸ್ ಅಪ್‌ಡೇಟ್ ಮತ್ತು ಫೋನ್‌ಗೆ 3 ವರ್ಷಗಳ ಭದ್ರತಾ ನವೀಕರಣಗಳನ್ನು ಖಚಿತಪಡಿಸಿದೆ. ಇದು 2MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 5000mAh ಬ್ಯಾಟರಿಯನ್ನು 18W ವೇಗದ ಚಾರ್ಜಿಂಗ್‌ ಸಹ ಹೊಂದಿದೆ. ಮತ್ತು ಬಾಕ್ಸ್‌ನಲ್ಲಿ 20W ಚಾರ್ಜ್‌ನೊಂದಿಗೆ ಬರುತ್ತದೆ.

ಮೊಟೊ G45 5G ಬೆಲೆ ಮತ್ತು ಲಭ್ಯತೆ

ಮೊಟೊ G45 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 4GB ಮತ್ತು 128GB ಸ್ಟೋರೇಜ್‌ ಬೆಲೆ 10,999 ರೂ. ಇದೆ. 8GB ಮತ್ತು 128GB ಸ್ಟೋರೇಜ್‌ ರೂಪಾಂತರವು 12,999 ರೂ.ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ನೀವು ವಿವಾ ಮೆಜೆಂಟಾ, ಬ್ರಿಲಿಯಂಟ್ ಬ್ಲೂ ಮತ್ತು ಬ್ರಿಲಿಯಂಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

ಈ ಫೋನಿನ ಮಾರಾಟವು Flipkart, Motorola.in ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಆಗಸ್ಟ್ 28 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಲಿದೆ. ಕಂಪನಿಯು ಕೆಲವು ಬ್ಯಾಂಕ್ ರಿಯಾಯಿತಿಗಳನ್ನು ಘೋಷಿಸಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,000 ರೂ.ಗಳ ತ್ವರಿತ ರಿಯಾಯಿತಿ ಇದೆ. ಡಿಸ್ಕೌಂಟ್‌ನೊಂದಿಗೆ ಈ ಫೋನನ್ನು ಕ್ರಮವಾಗಿ 9,999 ರೂ. ಮತ್ತು 11,999 ರೂ.ಗೆ ಖರೀದಿಸಬಹುದು.

ಮೊಟೊ G45 5G ವೈಶಿಷ್ಟ್ಯಗಳು

ಡಿಸ್ಲ್ಪೇ: ಮೊಟೊ G45 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು 1600 x 720 ಪಿಕ್ಸೆಲ್‌ ರೆಸಲ್ಯೂಶನ್‌, 500nits ಗರಿಷ್ಠ ಬ್ರೈಟ್‌ನೆಸ್‌, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್: ಮೊಟೊ G45 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Qualcomm Snapdragon 6s Gen 3 ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB, 8GB LPDDR4X RAM, 128GB UFS 2.2 ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಒಳಗೊಂಡಿದೆ.

ಕೇವಲ 9,999 ರೂ.! Moto G45 5G ಭಾರತದಲ್ಲಿ ಬಿಡುಗಡೆ; ಅಚ್ಚರಿ ಫೀಚರ್ಸ್

ಕ್ಯಾಮೆರಾ: ಹೊಸ ಮೊಟೋ ಫೋನ್ 50 ಮೆಗಾಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಮೊಟೊ G45 5G ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಕೂಡ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇಮೇಜ್ ಸ್ವಯಂ ವರ್ಧನೆ, ಮ್ಯಾಕ್ರೋ ವಿಷನ್ ಕ್ಯಾಮೆರಾ, ಆಟೋ ನೈಟ್ ವಿಷನ್ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.

ಬ್ಯಾಟರಿ: ಮೊಟೊ G45 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ ಬರತ್ತದೆ. ಇದು ಟರ್ಬೋಪವರ್ ವೇಗದ ಚಾರ್ಜಿಂಗ್ ತಂತ್ರವನ್ನು ಸಹ ಒಳಗೊಂಡಿದೆ ಎಂದು ಮೊಟೊರೊಲಾ ಹೇಳಿದೆ. ಈ ಫೋನ್ 162.7 x 74.64 x 8.03mm ದಪ್ಪ ಮತ್ತು 18 ಗ್ರಾಂ ತೂಕ ಹೊಂದಿದೆ.

ಇತರೆ ಫೀಚರ್ಸ್: ಮೊಟೊ G45 5G ಮೊಬೈಲ್ ನೀರು ಮತ್ತು ಧೂಳು ನಿರೋಧಕ IP52 ರೇಟಿಂಗ್ ಪಡೆದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳು, ದಪ್ಪ ಗೆಸ್ಚರ್ ವೈಶಿಷ್ಟ್ಯಗಳು, 13 5G ಬ್ಯಾಂಡ್‌ಗಳು, ಡ್ಯುಯಲ್ ಸಿಮ್ 5G, ಬ್ಲೂಟೂತ್ 5.2, ವೈ-ಫೈ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Moto G45 5G launched in India, price starts at Rs 10,999; Check Price, Specs and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+