ಆ.28ಕ್ಕೆ Moto G45 5G ಸೇಲ್: 9,999 ರೂ.ಗೆ ಸಿಗುತ್ತೆ.. ಹೇಗಿದೆ?
ಮೊಟೊರೊಲಾ (Motorola) ಕಂಪನಿಯು ತನ್ನ 'G' ಸರಣಿಯಲ್ಲಿ ಮೊಟೊ G45 5G (Moto G45 5G) ಫೋನನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 10,999 ರೂ. ಇದೆ. ಕಂಪನಿಯು ಡಿಸ್ಕೌಂಟ್‌ನೊಂದಿಗೆ 9,999 ರೂ.ಗೆ ಮಾರಾಟ ಮಾಡುತ್ತಿದೆ. ಕಡಿಮೆ ಬೆಲೆ ಹೊಂದಿದ್ದರೂ, ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಈ ಮೊಬೈಲ್ ಅನ್ನು ಪರಿಚಯಿಸಲಾಗಿದೆ. ಅಂದಹಾಗೆ, ಈ ಫೋನ್ ಆಗಸ್ಟ್ 28 ರಂದು ಮಾರಾಟವಾಗಲಿದೆ. ಬನ್ನಿ, ಈ ಹೊಸ ಫೋನ್ ಯಾವೆಲ್ಲಾ ಆಫರ್‌ಗಳನ್ನು ಹೊಂದಿದೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಮೊಟೊರೊಲಾ ಹಲವು ವಿಶೇಷತೆಗಳೊಂದಿಗೆ ಮೊಟೊ G45 5G ಫೋನನ್ನು ಭಾರತೀಯ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಈ ಫೋನ್ 6.5 ಇಂಚಿನ HD+ LCD ಡಿಸ್ಲ್ಪೇಯನ್ನು ಹೊಂದಿದೆ. Snapdragon 6s Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 8GB ವರೆಗಿನ ವರ್ಚುವಲ್ RAM ಹೊಂದಿದೆ. 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ರಿಲೀಸ್ ಆಗಿದೆ.

ಮೊಟೊ G45 5G ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಮೊಟೊ G45 5G ಫೋನನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. 4GB ಮತ್ತು 128GB ಸ್ಟೋರೇಜ್ ರೂಪಾಂತರವನ್ನು 10,999 ರೂ.ಗೆ ಮಾರಾಟ ಮಾಡಲಿದೆ. 8GB ಮತ್ತು 128GB ಸ್ಟೋರೇಜ್ ಮಾದರಿಯು 12,999 ರೂ.ಗೆ ಲಭ್ಯವಿದೆ. ಈ ಫೋನನ್ನು ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ವಿವಾ ಮೆಜೆಂಟಾ, ಬ್ರಿಲಿಯಂಟ್ ಬ್ಲೂ ಮತ್ತು ಬ್ರಿಲಿಯಂಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಕಂಪನಿಯು ಆಕ್ಸಿಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,000 ರೂ.ಗಳ ತ್ವರಿತ ಡಿಸ್ಕೌಂಟ್ ಘೋಷಿಸಿದೆ. ರಿಯಾಯಿತಿಯೊಂದಿಗೆ ಈ ಫೋನನ್ನ 9,999 ರೂ. ಮತ್ತು 11,999 ರೂ.ಗೆ ಖರೀದಿಸಬಹುದು. ಈ ಫೋನಿನ ಮಾರಾಟವು ಫ್ಲಿಪ್‌ಕಾರ್ಟ್, ಮೊಟೊರೊಲಾ ವೆಬ್‌ಸೈಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಆಗಸ್ಟ್ 28 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರಲಿದೆ.
ಮೊಟೊ G45 5G ಫೋನಿನ ವೈಶಿಷ್ಟ್ಯಗಳು
ಮೊಟೊ G45 5G ಫೋನ್ 6.5 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1,600 x 720 ಪಿಕ್ಸೆಲ್ ರೆಸಲ್ಯೂಶನ್, 500nits ಗರಿಷ್ಠ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. ಈ ಹೊಸ ಫೋನ್ ಆಕ್ಟಾ-ಕೋರ್ Qualcomm Snapdragon 6s Gen 3 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಮೊಟೊ G45 5G ಮೊಬೈಲ್ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಕ್ಯಾಮೆರಾ ಕೂಡ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇಮೇಜ್ ಸ್ವಯಂ ವರ್ಧನೆ, ಮ್ಯಾಕ್ರೋ ವಿಷನ್ ಕ್ಯಾಮೆರಾ, ಆಟೋ ನೈಟ್ ವಿಷನ್ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.
5000mAh ಬ್ಯಾಟರಿ, IP52 ರೇಟಿಂಗ್
ಮೊಟೊ G45 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ ಬರತ್ತದೆ. ಇದು ಟರ್ಬೋಪವರ್ ವೇಗದ ಚಾರ್ಜಿಂಗ್ ತಂತ್ರವನ್ನು ಸಹ ಒಳಗೊಂಡಿದೆ. ಈ ಫೋನ್ 162.7 x 74.64 x 8.03mm ದಪ್ಪ ಮತ್ತು 18 ಗ್ರಾಂ ತೂಕ ಹೊಂದಿದೆ. ಮೊಟೊ G45 5G ಮೊಬೈಲ್ ನೀರು ಮತ್ತು ಧೂಳು ನಿರೋಧಕ IP52 ರೇಟಿಂಗ್ ಪಡೆದಿದೆ.
ಇತರೆ ಫೀಚರ್ಸ್‌ಗಳಲ್ಲಿ ಈ ಫೋನ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಜೊತೆಗೆ, ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳು, ದಪ್ಪ ಗೆಸ್ಚರ್ ವೈಶಿಷ್ಟ್ಯಗಳು, 13 5G ಬ್ಯಾಂಡ್‌ಗಳು, ಡ್ಯುಯಲ್ ಸಿಮ್ 5G, ಬ್ಲೂಟೂತ್ 5.2, ವೈ-ಫೈ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications








