Home
ಮೊಬೈಲ್

ಭಾರತದಲ್ಲಿ ಕಡಿಮೆ ಬೆಲೆಯ ಹೊಸ Moto 5G ಫೋನ್ ಲಾಂಚ್: 7,000mAh ಬ್ಯಾಟರಿ!

ಭಾರತದಲ್ಲಿ ಮೋಟೊರೊಲಾ ಕಂಪೆನಿಯು ತನ್ನ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ Moto G57 Power 5G ಅನ್ನು ಇಂದು (24,ಸೋಮವಾರ) ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. ಕಳೆದ ಹಲವಾರು ದಿನಗಳಿಂದ ವದಂತಿಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ಈ ಫೋನ್, 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿ ಮತ್ತು Snapdragon 6s Gen 4 ಚಿಪ್‌ಸೆಟ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು ಕೇವಲ ₹12,999 ರೂ.ಗೆ ಬಂದಿದೆ. ಹಾಗಾದರೆ, ಈ ಹೊಸ Moto G57 Power 5G ಫೋನ್ ಹೇಗಿದೆ?, ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Moto G57 Power 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Moto G57 Power 5G ಫೋನ್ 6.72 ಇಂಚಿನ Full-HD+ LCD ಡಿಸ್‌ಪ್ಲೇ ಹೊತ್ತು ಬಂದಿದೆ. ಇದು 120Hz ರಿಫ್ರೆಶ್ ರೇಟ್, 120Hz ಟಚ್ ಸ್ಯಾಂಪ್ಲಿಂಗ್, ಹಾಗೂ 1,050 ನಿಟ್ಸ್ ಪೀಕ್ ಬ್ರೈಟ್ನೆಸ್ ಅನ್ನು ಬೆಂಬಲಿಸುತ್ತದೆ. Corning Gorilla Glass 7i ರಕ್ಷಣೆಯನ್ನು ಹೊಂದಿರುವ ಈ ಡಿಸ್‌ಪ್ಲೇಯು Smart Water Touch 2.0 ತಂತ್ರಜ್ಞಾನವನ್ನೂ ಒಳಗೊಂಡಿದೆ. ಕಾರ್ಯಕ್ಷಮತೆಗಾಗಿ, 4nm ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾಗಿರುವ Snapdragon 6s Gen 4 ಪ್ರೊಸೆಸರ್ ಇದ್ದು, ಇದನ್ನು 8GB LPDDR4X RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿದೆ.

ಭಾರತದಲ್ಲಿ ಕಡಿಮೆ ಬೆಲೆಯ ಹೊಸ Moto 5G ಫೋನ್ ಲಾಂಚ್: 7,000mAh ಬ್ಯಾಟರಿ!

ಕ್ಯಾಮೆರಾ ವಿಭಾಗದಲ್ಲಿ, Moto G57 Power 5G ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದು 50MP Sony LYT-600 ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್, ಮತ್ತು ಹೆಚ್ಚುವರಿ ಲೈಟ್ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ 8MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 2K 60fps ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ಇದಲ್ಲದೆ, ಈ ಫೋನ್ ಬಳಕೆದಾರರಿಗಾಗಿ Shot Optimisation, Magic Eraser, Photo Unblur ಮತ್ತು Portrait Light ಸೇರಿದಂತೆ ಹಲವಾರು ಎಐ ಆಧಾರಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ತರಲಾಗಿದೆ.

ಈ Moto G57 Power 5G ಫೋನ್‌ನ ಪ್ರಮುಖ ಆಕರ್ಷಣೆ ಅದರ 7,000mAh ದೊಡ್ಡ ಬ್ಯಾಟರಿ. ಜೊತೆಗೆ ಇದು 33W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, 5G, Bluetooth 5.1, ಡ್ಯುಯಲ್ ಬ್ಯಾಂಡ್ ವೈ-ಫೈ, USB ಟೈಪ್-ಸಿ ಪೋರ್ಟ್, GPS, A-GPS, GLONASS, ಗೆಲಿಲಿಯೋ, QZSS, ಮತ್ತು BeiDou ಗಳನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ Side-mounted Fingerprint Scanner ಹೊಂದಿದೆ. ಆನ್‌ಬೋರ್ಡ್ ಸಂವೇದಕಗಳ ಪಟ್ಟಿಯಲ್ಲಿ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ದಿಕ್ಸೂಚಿ ಇವೆ.

Moto G57 Power 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ 8GB + 128GB ಸ್ಟೋರೇಜ್ ಮಾದರಿಯ Moto G57 Power 5G ಬೆಲೆಯನ್ನು 14,999 ರೂ.ಗೆ ನಿಗದಿಪಡಿಸಲಾಗಿದೆ. ಆದರೆ, ಪರಿಚಯಾತ್ಮಕ ಕೊಡುಗೆಯ ಭಾಗವಾಗಿ, ಈ ಫೋನ್ 12,999 ರ ರಿಯಾಯಿತಿ ಬೆಲೆಯಲ್ಲಿ ಲಭ್ಯವಿರುತ್ತದೆ, ಮತ್ತು ಇದರಲ್ಲಿ ಬ್ಯಾಂಕ್ ಕೊಡುಗೆ ಮತ್ತು ವಿಶೇಷ ಬಿಡುಗಡೆ ರಿಯಾಯಿತಿ ಸೇರಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಫೋನ್ ಇದೇ ಡಿಸೆಂಬರ್ 3 ರಿಂದ ಪ್ಯಾಂಟೋನ್ ರೆಗಟ್ಟಾ, ಪ್ಯಾಂಟೋನ್ ಫ್ಲೂಯಿಡಿಟಿ ಮತ್ತು ಪ್ಯಾಂಟೋನ್ ಕೋರ್ಸೇರ್ ಬಣ್ಣಗಳಲ್ಲಿ ಮತ್ತು ಫ್ಲಿಪ್‌ಕಾರ್ಟ್, ಮೊಟೊರೊಲಾ ಇಂಡಿಯಾ ಆನ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಬರುತ್ತಿದೆ.

ಈ ಹೊಸ Moto G57 Power 5G ಬಜೆಟ್ ಸೆಗ್ಮೆಂಟ್‌ನಲ್ಲಿ ಹೆಚ್ಚಿನ ಬ್ಯಾಟರಿ ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ ಸ್ಪರ್ಧಾತ್ಮಕ ಆಯ್ಕೆಯಾಗಿ ಪರಿಣಮಿಸಬಹುದು. ದೊಡ್ಡ ಬ್ಯಾಟರಿ ಅಗತ್ಯ ಮತ್ತು ಉತ್ತಮ ಕ್ಯಾಮೆರಾ ಫೀಚರ್‌ಗಳನ್ನು ಬಯಸುವ ಗ್ರಾಹಕರಿಗೆ ಇದು ಆಕರ್ಷಕ ಆಯ್ಕೆಯಾಗಿ ಕಾಗುತ್ತಿದೆ.

Best Mobiles in India

English summary
Motorola today (Monday, 24) launched its new budget smartphone, the Moto G57 Power 5G, in India. The device comes equipped with a massive 7,000mAh battery, 33W fast charging, and a Snapdragon 6s Gen 4 chipset, all for just ₹12,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+