ನ.24 ರಂದು ಭಾರತಕ್ಕೆ Moto G57 Power: 7,000mAh ಬ್ಯಾಟರಿ, ಕಡಿಮೆ ಬೆಲೆ!
Motorola ಕಂಪೆನಿಯು ಭಾರತದಲ್ಲಿ ಶೀಘ್ರವೇ ಮತ್ತೊಂದು ಪವರ್‌ಫುಲ್ ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ನ್ನು ಪರಿಚಯಿಸಲು ಸನ್ನದ್ದವಾಗಿದೆ.! ಇತ್ತೀಚೆಗಷ್ಟೇ ಜಾಗತಿಕವಾಗಿ (ನವೆಂಬರ್ 5 ರಂದು) ಬಿಡುಗಡೆಯಾಗಿದ್ದ Motorola ಕಂಪೆನಿಯ ಮಧ್ಯಮ ಬೆಲೆಯ Moto G57 Power ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಪರಿಚಯವಾಗುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಜೊತೆಗೆ, ಈ Moto G57 Power ಸ್ಮಾರ್ಟ್‌ಫೋನ್‌ನ ಪ್ರಮುಖ ವಿಶೇಷಣಗಳನ್ನೂ ಬಹಿರಂಗಪಡಿಸಲಾಗಿದ್ದು, ಅವು ಜಾಗತಿಕ ಮಾದರಿಯಂತೆಯೇ ಇರುವಂತೆ ಕಾಣುತ್ತಿದೆ. ಹಾಗಾದರೆ, ಭಾರತದಲ್ಲಿ Moto G57 Power ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಯಾವಾಗ?, ಫೀಚರ್ಸ್ ಯಾವುವು? ಮತ್ತು ನಿರೀಕ್ಷಿತ ಬೆಲೆ ಎಷ್ಟು? ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Moto G57 Power: ಭಾರತದಲ್ಲಿ ಬಿಡುಗಡೆ ದಿನಾಂಕ ಮತ್ತು ಪ್ರಮುಖ ವಿವರಗಳು
Motorola ದೃಢಪಡಿಸಿರುವಂತೆ, ಇದೇ ನವೆಂಬರ್ 24 ರಂದು ಭಾರತದಲ್ಲಿ Moto G57 Power ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಇದರ ಜೊತೆಗೆ ಭಾರತೀಯ ರೂಪಾಂತರವು 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಜೋಡಿಸಲಾದ Snapdragon 6s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ.
ಇನ್ನು ಪೋಸ್ಟ್‌ನಲ್ಲಿ ಕಾಣಸುವಂತೆ, ಈ ಫೋನ್ 50 ಮೆಗಾಪಿಕ್ಸೆಲ್ Sony LYT-600 ಮುಖ್ಯ ಕ್ಯಾಮೆರಾ, ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಹೆಚ್ಚುವರಿ ಲೈಟ್ ಸೆನ್ಸ ಹೊಂದಿರುವುದನ್ನು ಟೀಸ್ ಮಾಡಲಾಗಿದೆ. ಮುಂಬರುವ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಲಭ್ಯವಿರುತ್ತದೆ. ಇವಿಷ್ಟು ಈಗ ಅಧಿಕೃತ ಮಾಹಿತಿಗಳಾಗಿವೆ. ಆದರೆ, ಇದರ ಜಾಗತಿಕ ಮಾದರಿಯು ನಮ್ಮ ಮುಂದಿದೆ.

Moto G57 Power: ಜಾಗತಿಕ ಮಾದರಿ ಮತ್ತು ಬೆಲೆ
ಮೋಟೋರೋಲಾ ನವೆಂಬರ್ 5 ರಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಈ Moto G57 ಪವರ್ ಅನ್ನು EUR 279 (ಸರಿಸುಮಾರು ರೂ. 28,000) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಈ ಫೋನ್ ಪ್ರಸ್ತುತ EU ನಲ್ಲಿ Pantone Corsair, Pantone Fluidity ಮತ್ತು Pantone Pink Lemonade ಬಣ್ಣಗಳಲ್ಲಿ ಲಭ್ಯವಾಗಿತ್ತು. ಇದೀಗ ಭಾರತೀಯ ರೂಪಾಂತದ Moto G57 Powe ಫೋನ್ ಹೊಂದಿರುವ ಫೀಚರ್ಸ್ ಕುರಿತು ಕಂಪನಿಯು ಬಹಿರಂಗಪಡಿಸಿದ ವಿಶೇಷಣಗಳು ಅದರ ಜಾಗತಿಕ ಪ್ರತಿರೂಪಕ್ಕೆ ಹೋಲುತ್ತವೆ.
ಜಾಗತಿಕ ಮಾದರಿಯ Moto G57 Power ಫೋನ್ 6.72-ಇಂಚಿನ ಪೂರ್ಣ-HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 391 ppi ಪಿಕ್ಸೆಲ್ ಸಾಂದ್ರತೆ, 1,050 nits ವರೆಗೆ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ ಬಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ Snapdragon 6s Gen 4 SoC ನಿಂದ ಚಾಲಿತವಾಗಿದೆ ಮತ್ತು 8GB ವರೆಗೆ RAM ಮತ್ತು 256GB ವರೆಗಿನ ಮೆಮೊರಿ ಹೊಂದಿದೆ. ಜೊತೆಗ 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಸೋನಿ LYT-600 ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ನಿರ್ದಿಷ್ಟಪಡಿಸದ 3-ಇನ್-1 ಲೈಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. Moto G57 ಪವರ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಡ್ರಾಪ್ ಪ್ರೊಟೆಕ್ಷನ್‌ಗಾಗಿ MIL-STD-810H6 ಪ್ರಮಾಣೀಕರಣದೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮತ್ತೊಂದು ಅಪ್‌ಡೇಟ್ ವಿಷಯವೆಂದರೆ, ಈ Moto G57 Power ಫೋನ್ ಭಾರತದಲ್ಲಿ ಕನಿಷ್ಠ ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟವಾಗಲಿದೆ ಎಂದು ಕಂಪನಿಯು ತಿಳಿಸಿದೆ. ನನ್ನ ಅಭಿಪ್ರಾಯದಂತೆ, ಈ ಫೋನ್ ಭಾರತದಲ್ಲಿ 25 ಸಾವಿರಕ್ಕಿಂತ ಕಡಿಮೆ ಬೆಲೆ ಹೊಂದಿರುವ ನಿರೀಕ್ಷೆ ಇದೆ.


Click it and Unblock the Notifications








