ಮೋಟೋ G5S ಪ್ಲಸ್ VS ರೆಡ್‌ಮಿ ನೋಟ್ 4!!.ಎರಡರಲ್ಲಿ ಯಾವುದು ಬೆಸ್ಟ್? ಏಕೆ?
ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸವಾಲೊಡ್ಡುವ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಮೊಬೈಲ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.!!
ಲೆನೊವೊ ಒಡೆತನದ ಮೋಟೋ G5S ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಮದು ಜಿದ್ದಾಜಿದ್ದಿನ ವಾತಾವರಣ ಕಾಣಿಸಿಕೊಳ್ಳುತ್ತಿದೆ.!! ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸವಾಲೊಡ್ಡುವ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಮೊಬೈಲ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.!!
ಈಗಾಗಲೇ ಹೆಚ್ಚು ಭಾರತೀಯರ ಮನಸೆಳೆದಿರುವ ಶಿಯೋಮಿ ರೆಡ್‌ಮಿ ನೋಟ್ 4ಗೆ ಮೋಟೋ G5S ಪ್ಲಸ್ ನೇರಾನೇರ ಸೆಡ್ಡು ಹೊಡೆಯುತ್ತಿದೆ. ಡ್ಯುಯಲ್ ಕ್ಯಾಮರಾ ಸೆಟಪ್ ಹೊಂದಿರುವ ಭಾರತದ ಮೊದಲ ಮೋಟೋ ಫೋನ್ ಇದಾಗಿದ್ದು, ಇನ್ನು ಹಲವು ಫೀಚರ್ಸ್‌ಗಳು ಮೋಟೋ G5S ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ಗಮನಸೆಳೆದಿವೆ.!!
ಹಾಗಾದರೆ, ಮೋಟೋ G5S ಪ್ಲಸ್ ಮತ್ತು ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ ಫೋನ್? ಯಾವುದರಲ್ಲಿ ಹೆಚ್ಚು ಫೀಚರ್ಸ್ ಅಡಕವಾಗಿದೆ? ಮೋಟೋ G5S ಪ್ಲಸ್ ಖರೀದಿಸಲು ಯೋಗ್ಯವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಯಾವುದರಲ್ಲಿ ಡಿಸ್‌ಪ್ಲೇ ಉತ್ತಮ?
ಮೋಟೋ G5S ಪ್ಲಸ್ 5.5 ಇಂಚುಗಳ HD (1080x1920 ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದ್ದರೆ, ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ಪಿಕ್ಸೆಲ್‌ಗಳ ಲೆಕ್ಕಾಚಾರದಲ್ಲಿ ರೆಡ್‌ಮಿ 4 ಹೆಚ್ಚಿನ ವೈಶಿಷ್ಟ್ಯ ಹೊಂದಿದೆ ಎನ್ನಬಹುದು.!!

ಯಾವ ಪ್ರೊಸೆಸರ್ ಬೆಸ್ಟ್
ಮೋಟೋ G5S ಪ್ಲಸ್ ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಹೊಂದಿದ್ದರೆ, ರೆಡ್‌ಮಿ ನೋಟ್ 4 ಪೋನ್ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಹೊಂದಿದೆ.!! ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ನಿಂದಾಗಿ ಮೋಟೋ G5S ಪ್ಲಸ್ ಅತ್ಯುತ್ತಮ ಪ್ರೊಸೆಸರ್ ಹೊಂದಿದೆ ಎನ್ನಬಹುದು.!!

ಮೋಟೋ vS ಶಿಯೋಮಿ ಕ್ಯಾಮೆರಾ
ಮೋಟೋ G5S ಪ್ಲಸ್ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಹಿಂದುಗಡೆ ಎರಡು 13MP ಕ್ಯಾಮೆರಾ ಹೊಂದಿದೆ. ಜೊತೆಗೆ 8MP ಫ್ರಂಟ್ ಫೇಸಿಂಗ್ ಕ್ಯಾಮೆರಾ ಜೊತೆ ಎಲ್‌ಇಡಿ ಫ್ಲ್ಯಾಶ್ ಲಭ್ಯವಿದೆ. ನೋಟ್ 4 13MPಯ ಒಂದು ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿದೆ.!! ಹಾಗಾಗಿ, ಕ್ಯಾಮೆರಾದಲ್ಲಿ ಮೋಟೋನೆ ಬೆಸ್ಟ್!!

ಮೋಟೋ vS ಶಿಯೋಮಿ ಬ್ಯಾಟರಿ
ಮೋಟೋ G5S ಪ್ಲಸ್ 3000mAh ಬ್ಯಾಟರಿ ಶಕ್ತಿ ಹೊಂದಿದ್ದರೆ ರೆಡ್‌ಮಿ ನೋಟ್ 4 4100mAH ಶಕ್ತಿಶಾಲಿ ಬ್ಯಾಟರಿ ಹೊಂದಿದೆ.!! ಹಾಗಾಗಿ, ಮೋಟೋ G5S ಪ್ಲಸ್ ಸ್ಮಾರ್ಟ್‌ಫೋನ್‌ಗಿಂತಲೂ ಹೆಚ್ಚು ಶಕ್ತಿಶಾಲಿ ಬ್ಯಾಟರಿಯನ್ನು ನೋಟ್ 4 ಹೊಂದಿದೆ ಎಂದು ಹೇಳಬಹುದು.

ಮೋಟೋ vS ಶಿಯೋಮಿ ಬೆಲೆ
ಮೋಟೋ G5S ಪ್ಲಸ್ 4GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ 15,999 ರೂಪಾಯಿಗಳಾಗಿದ್ದರೆ, 4GB RAM ಮತ್ತು 64GB ಮೆಮೊರಿ ವೆರಿಯಂಟ್ ರೆಡ್‌ಮಿ ನೋಟ್ 4 ಫೋನ್ ಬೆಲೆ 12,999ರೂಪಾಯಿಗಳಾಗಿವೆ.!!

ಖರೀದಿಸಲು ಯಾವುದು ಬೆಸ್ಟ್?
ಮೋಟೋ G5S ಪ್ಲಸ್ ಮತ್ತು ರೆಡ್‌ಮಿ ನೋಟ್ 4 ಎರಡೂ ಮೊಬೈಲ್‌ಗಳು ಸಹ ಕೆಲವೊಂದು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದ್ದು, ನಾವು ನೀಡುವ ಹಣಕ್ಕೆ ಮೋಟೋ G5S ಪ್ಲಸ್ ಉತ್ತಮ ಮೊಬೈಲ್ ಎನ್ನಬಹುದು.!! ಮುಂಬಾಗದಲ್ಲಿ ಸೆನ್ಸಾರ್, ಪ್ರೊಸೆಸರ್ ಮತ್ತು ಕ್ಯಾಮೆರಾದಲ್ಲಿ ಮೋಟೋ G5S ಪ್ಲಸ್ ಕಿಂಗ್ ಎನ್ನಬಹುದು.!!


Click it and Unblock the Notifications