ಮೊಟೊ G6 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೂಹುರ್ತ ಫಿಕ್ಸ್,,,!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಭಾರೀ ಕುತೂಹಲವನ್ನು ಕೆರಳಿಸಿರುವ ಲಿನೊವೊ ಒಡೆತನದ ಮೊಟೊರೊಲಾ, ಕೊನೆಗೂ ತನ್ನ ಮೊಟೊ G6 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡುವ ದಿನಾಂಕವನ್ನು ಪ್ರಕಟಿಸಿದೆ. ಇದೇ ಏಪ್ರಿಲ್ 19ರಂದು ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳು ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದಲ್ಲದೇ ಈ ಬಾರಿ ಮೊಟೊ ಹೆಡ್ ಸೆಟ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಮೊಟೊ G6 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೂಹುರ್ತ ಫಿಕ್ಸ್,,,!

ಮೊಟೊ G6, ಮೊಟೊ G6 ಪ್ಲೇ ಮತ್ತು ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಿರುವ ಈ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಲಿದೆ. ಆದರೆ ಈ ಸ್ಮಾರ್ಟ್‌ಫೋನ್‌ಗಳ ಬೆಲೆಯ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

ಮೊಟೊ G6: ಮೊಟೊ G6 ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ FHD + ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ನೊಂದಿಗೆ 4GB RAM ಹಾಗೂ 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, SD ಕಾರ್ಡ್ ಮೂಲಕ 256 GB ಮೆಮೊರಿಯನ್ನು ವಿಸ್ತರಿಸಿಕೊಳ್ಳವ ಅವಕಾಶವು ಇದೆ. ಹಿಂಭಾಗದಲ್ಲಿ 12MP + 5MP ಕ್ಯಾಮೆರಾವನ್ನು, ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ.

ಮೊಟೊ G6 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೂಹುರ್ತ ಫಿಕ್ಸ್,,,!


ಮೊಟೊ G6 ಪ್ಲಸ್: ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5.93 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಜೊತೆಗೆ 6GB RAM ಮತ್ತು 64GB ಇಂಟರ್ನಲ್ ಮೆಮೊರಿಯೂ ಲಭ್ಯವಿದೆ. 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. 3200 mAh ಬ್ಯಾಟರಿಯನ್ನು ನೋಡಬಹುದಾಗಿದೆ. ಹಿಂಭಾಗದಲ್ಲಿ 12MP + 5MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಮೊಟೊ G6 ಪ್ಲೇ : 5.7 ಇಂಚಿನ HD+ IPS ಡಿಸ್‌ಪ್ಲೇಯನ್ನು ಮೊಟೊ G6 ಪ್ಲೇ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿದ್ದು, SD ಕಾರ್ಡ್ ಮೂಲಕ 256 GB ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ 4000mAh ಬ್ಯಾಟರಿಯನ್ನು ನೀಡಿದೆ. 12MP ಹಿಂಭಾಗದ ಕ್ಯಾಮೆರಾವನ್ನು ಹಾಗೂ 5 MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದೆ.

Best Mobiles in India

English summary
Moto G6 Launch at April 19 Launch Event. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X