Home
ಮೊಬೈಲ್

ಏಪ್ರಿಲ್ 19ಕ್ಕೆ 'ಮೊಟೊ ಜಿ6' ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಫಿಕ್ಸ್!!

ಬಿಡುಗಡೆಗೂ ಮುನ್ನವೇ ಹೆಚ್ಚು ಸುದ್ದಿಯಾಗುತ್ತಿರುವ 'ಮೊಟೊ ಜಿ6' ಸರಣಿ ಸ್ಮಾರ್ಟ್‌ಫೋನ್‌ಗಳು ಇದೇ 19ನೇ ತಾರೀಖು ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

By Bhaskar N J

ಬಿಡುಗಡೆಗೂ ಮುನ್ನವೇ ಹೆಚ್ಚು ಸುದ್ದಿಯಾಗುತ್ತಿರುವ 'ಮೊಟೊ ಜಿ6' ಸರಣಿ ಸ್ಮಾರ್ಟ್‌ಫೋನ್‌ಗಳು ಇದೇ 19ನೇ ತಾರೀಖು ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಏಪ್ರಿಲ್ 19 ನೇ ತಾರೀಖಿನಂದು ಬ್ರೆಜಿಲ್‌ನಲ್ಲಿ ಮೊಟೊರೊಲಾ ಕಂಪೆನಿ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಸುದ್ದಿಯಿಂದ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿದ್ದು, ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳಿಗಾಗಿ ಭಾರೀ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಮೊಟೊ ಜಿ6, ಮೊಟೊ ಜಿ6 ಪ್ಲೇ ಮತ್ತು ಮೊಟೊ ಜಿ6 ಪ್ಲಸ್ ಮೂರು ಸ್ಮಾರ್ಟ್‌ಫೋನ್‌ಗಳು ಬಹುಬೇಗ ಗ್ರಾಹಕರಿಗೆ ಲಭ್ಯವಾಗುವುದು ಪಕ್ಕಾ ಆಗಿದೆ.

ಏಪ್ರಿಲ್ 19ಕ್ಕೆ 'ಮೊಟೊ ಜಿ6' ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಫಿಕ್ಸ್!!

ಈಆಗಗಲೇ ಮೊಟೊ ಜಿ6 ಸರಣಿಯ ಮೊಟೊ ಜಿ6, ಮೊಟೊ ಜಿ6 ಪ್ಲೇ ಮತ್ತು ಮೊಟೊ ಜಿ6 ಪ್ಲಸ್ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು ಎಂಬುದರ ಬಗ್ಗೆ ಹಲವು ಮಾಹಿತಿಗಳು ಲೀಕ್ ಕೂಡ ಆಗಿದೆ. ಹಾಗಾದರೆ, ಇದೇ ಏಪ್ರಿಲ್ 19 ನೇ ತಾರೀಖು ಬಿಡುಗಡೆಯಾಗುತ್ತಿರುವ ಈ ಮೂರು ಸ್ಮಾರ್ಟ್‌ಫೋನ್ ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮೊಟೊ ಜಿ6

ಮೊಟೊ ಜಿ6

ಮೊಟೊ ಜಿ6 ಸ್ಮಾರ್ಟ್‌ಫೋನ್ 5.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಚಿಪ್ಸೆಟ್, 3 ಜಿಬಿ/ ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಆಂತರಿಕ ಮೆಮೊರಿ, 12 ಎಂಪಿ + 5 ಎಂಪಿ ರಿಯರ್ ಡ್ಯುಯಲ್ ಕ್ಯಾಮೆರಾಗಳು 16 ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ 3,000 mAh ಬ್ಯಾಟರಿ ಫೀಚರ್ಸ್ ಈ ಫೋನಿನಲ್ಲಿರಲಿವೆ.

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ 18: 9 ಆಕಾರ ಅನುಪಾತದ 5.7 ಇಂಚಿನ ಹೆಚ್‌ಡಿ+ (1440x720p) ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. 4000mAh ದೊಡ್ಡ ಬ್ಯಾಟರಿ, 2 ಜಿಬಿ / 3 ಜಿಬಿ RAM, 16 ಜಿಬಿ / 32 ಜಿಬಿ ಶೇಖರಣಾ ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 427 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಮೊಟೊ ಜಿ6 ಪ್ಲೇ ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಮೊಟೊ ಜಿ6 ಪ್ಲಸ್

ಮೊಟೊ ಜಿ6 ಪ್ಲಸ್

ಮೋಟೋ ಜಿ 6 ಪ್ಲಸ್ 18: 9 ಆಕಾರ ಅನುಪಾತದ 5.93-ಇಂಚಿನ ಪೂರ್ಣ ಹೆಚ್‌ಡಿ+ (2160x1080p) ಡಿಸ್‌ಪ್ಲೇ ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 630 ಪ್ರೊಸೆಸರ್, 3 ಜಿಬಿ / 4 ಜಿಬಿ / 6 ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಸ್ಟೋರೇಜ್, ಡ್ಯುಯಲ್ 12 ಎಂಪಿ + 5 ಎಂಪಿ ಹಾಗೂ 16 ಎಂಪಿ ಫ್ರಂಟ್ ಕ್ಯಾಮೆರಾ ಮತ್ತು 3,200 mAh ಬ್ಯಾಟರಿಯನ್ನು ಹೊಂದಿರಲಿದೆ.

Best Mobiles in India

English summary
Moto G6 Play hands-on photo leaked ahead of April 19 launch.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+