ಬಂತು ಮೊಟೊ G6 ಪ್ಲಸ್: ವಿಶೇಷತೆ ತಿಳಯಲೇ ಬೇಕಾದದ್ದು..!

|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ ಒಂದಾದ ಮೊಟೊರೊಲಾ, ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ ಫೋನ್ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೊಟೊ G ಸರಣಿಯ ಮತ್ತೊಂದು ಆವೃತ್ತಿಯಾಗಿರುವ ಮೊಟೊ G6 ಪ್ಲಸ್ ಲಾಂಚ್ ಆಗಿದೆ. ಮಧ್ಯಮ ಸರಣಿ ಈ ಫೋನ್ ಹೊಸ ಧೂಳ್ ಎಬ್ಬಿಸಲಿದೆ.

ಬಂತು ಮೊಟೊ G6 ಪ್ಲಸ್: ವಿಶೇಷತೆ ತಿಳಯಲೇ ಬೇಕಾದದ್ದು..!

ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ G6 ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮೊಟೊ G6 ಪ್ಲಸ್ ಕುರಿತ ಕುತೂಹಲವು ಹೆಚ್ಚಾಗಿದೆ. ಹೀಗಾಗಿ ಈ ನೂತನ ಸ್ಮಾರ್ಟ್‌ ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಬೆಲೆ:

ಬೆಲೆ:

ಭಾರತದಲ್ಲಿ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ರೂ.22499ಕ್ಕೆ ಮಾರಾಟವಾಗಲಿದೆ. 6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ರೂ.22,499ಕ್ಕೆ ಮಾರಾಟವಾಗಲಿದೆ. ಅಮೆಜಾನ್‌ ನಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ ಎನ್ನಲಾಗಿದೆ. ಇಂಡಿಗೋ ಬ್ಲಾಕ್ ಕಲರ್ ನಲ್ಲಿ ಮಾತ್ರವೇ ಈ ಸ್ಮಾರ್ಟ್‌ಪೋನ್ ದೊರೆಯಲಿದೆ.

ಮೊಟೊ G6 ಪ್ಲಸ್ ಡಿಸ್‌ಪ್ಲೇ:

ಮೊಟೊ G6 ಪ್ಲಸ್ ಡಿಸ್‌ಪ್ಲೇ:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5.93 ಇಂಚಿನ FHD+ (1080 x 2160 pixels) ಗುಣಮಟ್ಟದ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಆಕ್ಟಾಕೋರ್ ಸ್ನಾಪ್‍ಡ್ರಾಗನ್ 630 ಪ್ರೋಸೆಸರ್ ನೊಂದಿಗೆ ಆಡ್ರಿನೋ 508 GPUವನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ 6 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿದ್ದು, ಬಳಕೆದಾರರಿಗೆ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೆ ವಿಸ್ತರಿಸಿಕೊಳ್ಳು ಅವಕಾಶವನ್ನು ಮಾಡಿಕೊಡಲಾಗಿದೆ.

ಸಾಫ್ಟ್‌ವೇರ್‌:

ಸಾಫ್ಟ್‌ವೇರ್‌:

ಆಂಡ್ರಾಯ್ಡ್ 8.0 ಓರಿಯೋಯಲ್ಲಿ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದ್ದು, ಡ್ಯುಯಲ್ ಸಿಮ್ (ನ್ಯಾನೋ) ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. 4G LTE, Wi-F ಸೌಲಭ್ಯವನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP + 5 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ. ಉತ್ತಮವಾದ ಸೆಲ್ಫಿಗಳನ್ನು ನಾವು ಕ್ಲಿಕ್ ಮಾಡಬಹುದಾಗಿದೆ.

ಭಿನ್ನವಾಗಿದೆ:

ಭಿನ್ನವಾಗಿದೆ:

ಉಳಿದೆರಡು ಫೋನ್‌ಗಳಿಗೆ ಹೋಲಿಸಿದರೆ ಮೊಟೊ G6 ಪ್ಲಸ್ ವೇಗವಾದ ಪ್ರೋಸೆಸರ್, RAM, ಲೋ ಲೈಟ್ ಫೋಟೋಗ್ರಫಿ, ಸ್ಮಾರ್ಟ್ ಡ್ಯುಯಲ್ ಕ್ಯಾಮೆರಾದಂತಹ ವಿಶೇಷಗಳನ್ನು ಇದರಲ್ಲಿ ಕಾಣಬಹುದಾಗಿದೆ. ರ್ಬೋ ಪವರ್ ಚಾರ್ಜಿಂಗ್‍ನಂತಹ ವಿಶೇಷತೆಗಳು ಈ ಫೋನ್‌ನಲ್ಲಿವೆ.

Best Mobiles in India

English summary
Moto G6 Plus With 6GB RAM, Dual Rear Cameras Launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X