Home
ಮೊಬೈಲ್

ಇಂದು Moto G67 Power 5G ಸೇಲ್: 14 ಸಾವಿರಕ್ಕೆ ಹುಡುಕಿದರೂ ಮತ್ತೊಂದು ಸಿಕ್ಕಲ್ಲ!

ಕಳೆದ ನವೆಂಬರ್ 5 ರಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಪರಿಚಯಗೊಂಡಿರುವ ಬಹುನಿರೀಕ್ಷಿತ Moto G67 Power 5G ಸ್ಮಾರ್ಟ್‌ಫೋನ್ ಇಂದು ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಮೋಟೊರೊಲಾ ಕಂಪನಿಯು ತನ್ನ ಜನಪ್ರಿಯ G ಸರಣಿಗೆ ಹೊಸ ಸೇರ್ಪಡೆಯಾಗಿ ಬಿಡುಗಡೆಗೊಳಿಸಿರುವ ಈ ಹೊಸ ಸ್ಮಾರ್ಟ್‌ಫೋನ್, ಅತ್ಯುತ್ತಮ ವಿನ್ಯಾಸ, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ, 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್, ಶಕ್ತಿಯುತ Snapdragon 7s Gen 2 ಪ್ರೊಸೆಸರ್ ಮತ್ತು 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯಂತಹ ಹಲವಾರು ವೈಶಿಷ್ಟ್ಯಗಳನ್ನು ಬಂದಿದ್ದು, ಇದನ್ನು ಕೇವಲ 14,999 ರೂ. ಬೆಲೆಯಲ್ಲಿ ಖರೀದಿಸಬಹುದು. ಹೊಸ Moto G67 Power 5G ಫೋನ್ ಮಾರಾಟದ ಕುರಿತು ಮತ್ತು ಪೋನ್ ಫೀಚರ್ಸ್ ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

Moto G67 Power 5G ಬೆಲೆ ಮತ್ತು ಲಭ್ಯತೆ
Moto G67 Power 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಏಕೈಕ GB RAM + 128GB ಸ್ಟೋರೇಜ್ ಮಾದರಿಯಲ್ಲಿ 15,999 ರೂ. ಬೆಲೆ ಹೊಂದಿದೆ. ಆದರೆ, ಬಿಡುಗಡೆ ಕೊಡುಗೆಯಾಗಿ ಆಕ್ಸಿಸ್ ಬ್ಯಾಂಕ್ ಮತ್ತು SBI ನಿಂದ ಕಾರ್ಡ್ ವಹಿವಾಟುಗಳೊಂದಿಗೆ ಗ್ರಾಹಕರು 1,000 ರೂ.ಗಳ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು .ಇಂದು ಮಧ್ಯಾಹ್ನ 12 ಗಂಟೆಯಿಂದ (IST) ಫ್ಲಿಪ್‌ಕಾರ್ಟ್, motorola.in ಮತ್ತು ಆಫ್‌ಲೈನ್ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ Moto G67 Power 5G ಸ್ಮಾರ್ಟ್‌ಫೋನ್ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು Pantone Parachute Purple, Pantone Blue Curacao, ಮತ್ತು Pantone Cilantro ಮೂರು ಆಕರ್ಷಕ ಶೇಡ್ ಬಣ್ಣ ಆಯ್ಕೆಗಳಲ್ಲಿ ಫೋನ್ ಅನ್ನು ಖರೀದಿಸಬಹುದು.

ಇಂದು Moto G67 Power 5G ಸೇಲ್: 14 ಸಾವಿರಕ್ಕೆ ಹುಡುಕಿದರೂ ಮತ್ತೊಂದು ಸಿಕ್ಕಲ್ಲ!

Moto G67 Power 5G : ಪ್ರಮುಖ ವೈಶಿಷ್ಟ್ಯಗಳು
ಹೊಸ Moto G67 Power 5G ಪೋನ್ ವೀಗನ್ ಲೆದರ್ ಹಿಂಭಾಗ ಮತ್ತು ಬಾಳಿಕೆ ಬರುವ ನಿರ್ಮಾಣದೊಂದಿಗೆ ಸ್ಲಿಮ್, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಇದು ಧೂಳು ಮತ್ತು ತುಂತುರು ನಿರೋಧಕತೆಗಾಗಿ ಅಧಿಕೃತ IP64 ರೇಟಿಂಗ್ ಜೊತೆಗೆ ಮಿಲಿಟರಿ-ದರ್ಜೆಯ MIL-STD-810H ಡ್ರಾಪ್ ಪ್ರೊಟೆಕ್ಷನ್‌ನೊಂದಿಗೆ ಬರುತ್ತದೆ ಎಂದು ಹೇಳಿಕೊಂಡಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 20:9 ಆಕಾರ ಅನುಪಾತ ಮತ್ತು 85.97 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 6.7 ಇಂಚಿನ Full HD+ LCD ಸ್ಕ್ರೀನ್ ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್, HDR10+ ಬೆಂಬಲ, ಮತ್ತು Corning Gorilla 7i ಗ್ಲಾಸ್ ಪ್ರೊಟೆಕ್ಷನ್ ಇದೆ.

ಕಾರ್ಯಕ್ಷಮತೆಗಾಗಿ, ಈ Moto G67 Power 5G ಫೋನ್‌ Qualcomm Snapdragon 7s Gen 2 (4nm) ಪ್ರೊಸೆಸರ್ 2.4GHz ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ Adreno GPU ಬೆಂಬಲ ದೊರೆಯುತ್ತದೆ. 8GB RAM ಇರುವ ಈ ಫೋನ್‌ನಲ್ಲಿ RAM Boost 4.0 ತಂತ್ರಜ್ಞಾನದಿಂದ 24GB ವರೆಗೆ ವಿಸ್ತರಣೆ ಸಾಧ್ಯ. ಇನ್ನು ಇದರ ಸ್ಟೋರೇಜ್ 256GB ವರೆಗೆ ಲಭ್ಯವಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 ಆಧಾರಿತ Hello UX ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಒಂದು ಪ್ರಮುಖ OS ಅಪ್ಡೇಟ್ ಮತ್ತು 3 ವರ್ಷಗಳ ಭದ್ರತಾ ಅಪ್ಡೇಟ್‌ಗಳು ನೀಡುವುದಾಗಿ ಭರವಸೆಯನ್ನು ನೀಡಿರುವುದು ಗಮನಾರ್ಹವಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Moto G67 Power 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾ, f/2.2 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು "ಟು-ಇನ್-ಒನ್ ಫ್ಲಿಕರ್" ಕ್ಯಾಮೆರಾವನ್ನು ಪಡೆಯುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಇದು Dual Capture, Slow Motion, Timelapse, ಮತ್ತು Audio Zoom ಮೋಡ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ, ಈ ಫೋನ್‌ಗೆ Dolby Atmos ಸ್ಪೀಕರ್‌ಗಳು, Hi-Res ಆಡಿಯೋ, ಹಾಗೂ Gemini AI ವಾಯ್ಸ್ ಅಸಿಸ್ಟೆಂಟ್ ಸೌಲಭ್ಯಗಳಿವೆ.

ಈ Moto G67 Power 5G ಫೋನ್‌ನ ಅತ್ಯಂತ ಶಕ್ತಿಯುತ ಅಂಶವೆಂದರೆ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ. ಇದು 30W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ, ಒಂದೇ ಚಾರ್ಜ್‌ನಲ್ಲಿ ಈ ಫೋನ್ 130 ಗಂಟೆಗಳ ಮ್ಯೂಸಿಕ್, 33 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 49 ಗಂಟೆಗಳ ಕಾಲ್ ಟೈಮ್ ನೀಡುತ್ತದೆ. ಇನ್ನುಳಿದಂತೆ, ಈ ಫೋನ್ ಪ್ರಾಕ್ಸಿಮಿಟಿ ಸೆನ್ಸರ್, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, SAR ಸೆನ್ಸರ್ ಮತ್ತು ಇ-ದಿಕ್ಸೂಚಿಯನ್ನು ಸಹ ಒಳಗೊಂಡಿದೆ. ಇದು ಸಂಪರ್ಕಕ್ಕಾಗಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, GPS, GLONASS, ಗೆಲಿಲಿಯೋ, QZSS ಮತ್ತು BeiDou ಅನ್ನು ಬೆಂಬಲಿಸುತ್ತದೆ.

Best Mobiles in India

English summary
The Moto G67 Power 5G smartphone will go on sale for the first time today at 12 noon (IST) on Flipkart, motorola.in and offline partner retail stores, where customers can buy the phone in three attractive shade color options - Pantone Parachute Purple, Pantone Blue Curacao, and Pantone Cilantro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+