Moto: ಬಜೆಟ್ ಬೆಲೆಗೆ ಶಕ್ತಿಶಾಲಿ ಫೋನ್ ಲಾಂಚ್: 5,000mAh ಬ್ಯಾಟರಿ, 50MP ಕ್ಯಾಮೆರಾ!
ಮೊಟೊರೊಲಾ (Motorola) ಕಂಪನಿಯು ಸೈಲೆಂಟ್ ಆಗಿಯೇ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಅದುವೇ, ಮೊಟೊ G75 5G (Moto G75 5G) ಸ್ಮಾರ್ಟ್‌ಫೋನ್. ಕಂಪನಿಯು ಪಶ್ಚಿಮ ಯುರೋಪ್‌ನಲ್ಲಿ ನೂತನ ಫೋನನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಬಜೆಟ್ ಬೆಲೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶೀಘ್ರದಲ್ಲೇ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಮೊಟೊ G75 5G ಬಿಡುಗಡೆಯಾಗಲಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಮೊಟೊ G75 5G ಫೋನಿನ ವಿಶೇಷತೆ ಎಂದರೆ, ಇದು ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್‌ನಿಂದ ಚಾಲಿತವಾಗಿರುವ ವಿಶ್ವದ ಮೊದಲ ಫೋನ್ ಆಗಿದೆ. ಇದು ಆರು ವರ್ಷಗಳ ಸಾಫ್ಟ್‌ವೇರ್ (ಸೆಕ್ಯುರಿಟಿ) ಅಪ್‌ಡೇಟ್ ಬೆಂಬಲವನ್ನು ನೀಡುತ್ತದೆ. ಈ ಫೋನ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ, 15W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಲೋಕಾರ್ಪಣೆಯಾಗಿದೆ.

ಮೊಟೊ G75 5G ಬೆಲೆ ಮತ್ತು ಲಭ್ಯತೆ
ಕಂಪನಿಯು ಮೊಟೊ G75 5G ಪೋನನ್ನು ಜಾಗತಿಕವಾಗಿ ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅವುಗಳೆಂದರೆ, ಚಾರ್ಕೋಲ್ ಗ್ರೇ (ಮ್ಯಾಟ್), ಆಕ್ವಾ ಬ್ಲೂ ಮತ್ತು ಸಕ್ಯುಲೆಂಟ್ ಗ್ರೀನ್ ಬಣ್ಣ. ಕಂಪನಿಯು ಈ ಫೋನನ್ನು ಸುಮಾರು 27,000 ರೂ.ಗಳ (369 ಯುರೋಗಳು) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ನವೆಂಬರ್ 5 ರಿಂದ ಮೊಟೊ G75 5G ಮೊಬೈಲ್ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.
ಈ ಸುದ್ದಿ ಓದಿದ್ದೀರಾ? OnePlus: ಈ 5G ಫೋನ್ ಬೆಲೆ ಇಳಿಕೆ: 3,000 ಅಗ್ಗ.. 1,299 ರೂ.ನ ನೆಕ್‌ಬ್ಯಾಂಡ್ ಉಚಿತ!
ಮೊಟೊ G75 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಮೊಟೊ G75 5G ಮೊಬೈಲ್ 6.78 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು ಎಫ್‌ಹೆಚ್‌ಡಿ ಪ್ಲಸ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನಸೆ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ, ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಹೊಸ ಮೊಟೊ G75 5G ಸ್ಮಾರ್ಟ್‌ಫೋನ್ 4ಎನ್ಎಂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಅನ್ನು ಹೊಂದಿದೆ. ಇದು 4x 2.4 GHz ಕಾರ್ಟೆಕ್ಸ್-A78 ಮತ್ತು 4x 1.8 GHz ಕಾರ್ಟೆಕ್ಸ್-A55 ಕೋರ್ ಕಾನ್ಫಿಗರೇಶನ್ ಅನ್ನು ಹೊಂದಿದೆ.ಈ ಫೋನ್ MyUX ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಐದು OS ನವೀಕರಣಗಳು ಮತ್ತು ಆರು ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸಲಾಗಿದೆ ಎಂದು ಕಂಪನಿ ಹೇಳಿದೆ.
ಸ್ಟೋರೇಜ್: ಮೊಟೊ G75 5G ಫೋನ್‌ನಲ್ಲಿ 8GB RAM ಮತ್ತು 256 GB ವರೆಗಿನ ಆಂತರಿಕ ಸ್ಟೋರೇಜ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ, RAM ಬೂಸ್ಟ್ ತಂತ್ರಜ್ಞಾನದೊಂದಿಗೆ 8GB RAM ಅನ್ನು ವಿಸ್ತರಿಸಬಹುದು. ಇದರ ಸಹಾಯದಿಂದ 16GB ಯ ಒಟ್ಟು ಶಕ್ತಿ ಲಭ್ಯವಿದೆ. ಮೆಮೊರಿಯನ್ನು ಹೆಚ್ಚಿಸಲು ಫೋನಿನಲ್ಲಿ ವಿಸ್ತರಿಸಬಹುದಾದ ಬೆಂಬಲವೂ ಇದೆ.
ಕ್ಯಾಮೆರಾ: ನೂತನ ಮೊಟೊ G75 5G ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ, OIS, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಫ್ಲಿಕರ್ ಸೆನ್ಸಾರ್ ಸೆಟಪ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಕಂಪನಿಯು ಮೊಟೊ G75 5G ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ಲಭ್ಯವಿದೆ. ಈ ಮೊಬೈಲ್ 166.09 x 77.24 x 8.44 ಎಂಎಂ ಅಳತೆ ಮತ್ತು 208 ಗ್ರಾಂ ತೂಕ ಹೊಂದಿದೆ. ಆದರೆ, ಮ್ಯಾಟ್ ಫಿನಿಶ್ ಆಯ್ಕೆಯು 166.09 x 77.24 x 8.34 ಮಿಮೀ ಮತ್ತು 205 ಗ್ರಾಂ ತೂಕ ಇದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಮತ್ತು MIL-STD-810H ರೇಟಿಂಗ್ ಪಡೆದಿದೆ. ಇದು ಭದ್ರತೆಗಾಗಿ ಸೈಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಡಾಲ್ಬಿ ಅಟ್ಮಾಸ್ ಡ್ಯುಯಲ್ ಸ್ಪೀಕರ್‌ಗಳನ್ನು ಆಡಿಯೋಗಾಗಿ ನೀಡಲಾಗಿದೆ. ವೈ-ಫೈ, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಯುಎಸ್‌ಬಿ-ಸಿ ಪೋರ್ಟ್ ಸಂಪರ್ಕ ಸೌಲಭ್ಯ ಹೊಂದಿದೆ.


Click it and Unblock the Notifications








