Home
ಮೊಬೈಲ್

Motorola: ಇಂದು ಭಾರತಕ್ಕೆ ಹೊಸ ಫೋನ್ ಎಂಟ್ರಿ: 50MP ಕ್ಯಾಮೆರಾ, 5,400mAh ಬ್ಯಾಟರಿ.. ಯಾವ ಫೋನ್?

ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಹವಾ ಕ್ರಿಯೇಟ್‌ ಮಾಡಲು ಮೊಟೊರೊಲಾ ಸಜ್ಜಾಗಿದೆ. ಈಗಾಗಲೇ ವಿಭಿನ್ನ ಹಾಗೂ ಅತ್ಯಾಕರ್ಷಕ ಫಿಚರ್ಸ್‌ಗಳ ನೂತನ ಫೋನ್‌ಗಳೊಂದಿಗೆ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ, Motorola G85 ಹೆಸರಿನ ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ನೂತನ Motorola G85 ಫೋನ್ ಇಂದು (ಜುಲೈ 10) ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನು ಎರಡು ಸ್ಟೋರೇಜ್ ವೇರಿಯಂಟ್ ಮತ್ತು ಮೂರು ಬಣ್ಣದ ಆಯ್ಕೆಗಳಲ್ಲಿ ಲಾಂಚ್ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳೇನು? ಬೆಲೆ ಎಷ್ಟು? ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ ಬನ್ನಿ.

ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ ಇಂದು ತನ್ನ G ಸರಣಿಯ ಅಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಮುಂಬರುವ ಸ್ಮಾರ್ಟ್‌ಫೋನ್ Motorola G85 ಹೆಸರಿನೊಂದಿಗೆ ಲಾಂಚ್ ಆಗಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಈ ಫೋನ್ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಬಿಡುಗಡೆಗೆ ಮುಂಚೆಯೇ, ಫೋನ್‌ನ ಹೆಚ್ಚಿನ ವಿವರಗಳನ್ನು ಫ್ಲಿಪ್‌ಕಾರ್ಟ್‌ನ ಮೈಕ್ರೋಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ವೆಗಾನ್ ಲೆದರ್ (vegan leather) ಫಿನಿಶ್‌ನೊಂದಿಗೆ ಫೋನ್ ಅನ್ನು ರಿಲೀಸ್ ಮಾಡಲಾಗುತ್ತದೆ.

Motorola: ಇಂದು ಹೊಸ ಫೋನ್ ಎಂಟ್ರಿ: 50MP ಕ್ಯಾಮೆರಾ, 5,400mAh ಬ್ಯಾಟರಿ

ಕಣ್ಣು ಕುಕ್ಕವ ಮೂರು ಬಣ್ಣಗಳಲ್ಲಿ ಲಾಂಚ್

ಈ ಮೊಟೊರೊಲಾ ಸ್ಮಾರ್ಟ್‌ಫೋನ್ ಅನ್ನು ಕಂಪನಿಯು 12GB + 256GB ಮತ್ತು 8GB + 128GB ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ. ಫ್ಲಿಪ್‌ಕಾರ್ಟ್ ಫೋನ್‌ನ ವಿಶೇಷತೆಗಳ ಕುರಿತು ಮಾಹಿತಿಯನ್ನು "ಆಲ್ ಈಸ್ ಆನ್ ಯು" ಎಂಬ ಅಡಿಬರಹದೊಂದಿಗೆ ಸ್ವೀಕರಿಸಲಾಗಿದೆ. ಬಿಡುಗಡೆಯಾದ ನಂತರ, ಈ ಫೋನ್ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಕೋಬಾಲ್ಟ್ ಬ್ಲೂ, ಅರ್ಬನ್ ಗ್ರೇ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ತರಲಾಗುತ್ತಿದೆ.

Moto G85 ಬೆಲೆ ಎಷ್ಟು?

ಇಷ್ಟಲ್ಲಾ ವಿಶೇಷತೆ ಹೊಂದಿರುವ ಈ ಮೊಬೈಲ್‌ನ ಬೆಲೆ ಎಷ್ಟು ಎಂಬ ಕುತೂಹಲ ಸಹಜ. ಈ ಫೋನ್‌ನ 12+256GB ಸ್ಟೋರೇಜ್‌ ಮಾದರಿಯ ಬೆಲೆಯು 18,999 ರೂ. ಇರಲಿದೆ. ಇದು ಬಿಡುಗಡೆಯ ಆಫರ್ ಅಥವಾ ಕೆಲವು ಬ್ಯಾಂಕ್ ಕೊಡುಗೆಗಳೊಂದಿಗಿನ ಬೆಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ.

Motorola G85 ವಿಶೇಷತೆಗಳು

ಡಿಸ್ಪ್ಲೇ: ಮೊಟೊರೊಲಾ ಜಿ85 ಫೋನ್‌ನ ಡಿಸ್ಪ್ಲೇ ಮತ್ತು ಪ್ರೊಸೆಸರ್ ಸೇರಿದಂತೆ ಹಲವು ವಿವರಗಳನ್ನು ಕಂಪನಿಯು ಫ್ಲಿಪ್‌ಕಾರ್ಟ್ ಮೂಲಕ ಖಚಿತಪಡಿಸಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ 3D ಬಾಗಿದ p-OLED ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಡಿಸ್ಪ್ಲೇ 120hz ರಿಫ್ರೆಶ್ ದರದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆಯನ್ನು ಸಹ ಹೊಂದಿದೆ. ಇದರಲ್ಲಿ ಎಸ್‌ಜಿಎಸ್ ಕಣ್ಣಿನ ರಕ್ಷಣೆಯನ್ನೂ ಒದಗಿಸಲಾಗುವುದು.

ಪ್ರೊಸೆಸರ್: Qualcomm ನ Snapdragon 6s Gen 3 ಚಿಪ್‌ಸೆಟ್ ಕಾರ್ಯಕ್ಷಮತೆಗಾಗಿ ಫೋನ್‌ನಲ್ಲಿ ಲಭ್ಯವಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ಹೇಳುತ್ತದೆ. ಇದನ್ನು ಎರಡು RAM ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ.

ಮೆಮೊರಿ: ನೀವು ಈ ಫೊನ್‌ ಅನ್ನು 12GB RAM ಮತ್ತು 256GB ಸ್ಟೋರೇಜ್‌ ಕಾನ್ಫಿಗರೇಶನ್‌ನಲ್ಲಿ ಆಯ್ಕೆ ಮಾಡಬಹುದು. 24GB RAM ಬೂಸ್ಟ್ ವೈಶಿಷ್ಟ್ಯವೂ ಇದೆ.

ಕ್ಯಾಮೆರಾ ಸೆಟಪ್: 50MP Sony LYTIA 600 OIS ಕ್ಯಾಮೆರಾ ಈ ಫೋನ್‌ನಲ್ಲಿ ಪ್ರಾಥಮಿಕ ಸಂವೇದಕವಾಗಿ ಲಭ್ಯವಿರುತ್ತದೆ. 8MP ಅಲ್ಟ್ರಾ ಮತ್ತು 8MP ಡೆಪ್ತ್ ಸೆನ್ಸರ್ ಅನ್ನು ಫೋನ್‌ನಲ್ಲಿ ಒದಗಿಸಲಾಗುವುದು. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಮತ್ತು OS: ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 33w ಟರ್ಬೊ ಪವರ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದು 90 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್, 22 ಗಂಟೆಗಳ ವಿಡಿಯಯೋ ಪ್ಲೇಬ್ಯಾಕ್ ಮತ್ತು 38 ಗಂಟೆಗಳ ಮಾತುಕತೆಯನ್ನು ಕ್ಲೈಮ್ ಮಾಡುತ್ತದೆ. ಈ ಮೊಬೈಲ್ ಪ್ರಸ್ತುತ ಆಂಡ್ರಾಯ್ಡ್ 14 ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಅಪ್ಡೇಟ್‌ಗಳು ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಯುತ್ತದೆ.

ಇತರೆ ಫೀಚರ್ಸ್‌: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು ಮತ್ತು IP54 ಧೂಳು ಮತ್ತು ನೀರಿನ ಪ್ರತಿರೋಧವನ್ನು ಸಹ ಒಳಗೊಂಡಿದೆ.

Best Mobiles in India

English summary
Moto G85 5G launching in india today: Moto G85 price in India has leaked out on a Flipkart Google page listing. Expected specs, price and all we know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+