Home
ಮೊಬೈಲ್

Moto G85 5G: ಜುಲೈ 10ರಂದು ಬಿಡುಗಡೆ.. ಕೈಗೆಟುಕುವ ಬೆಲೆ, ಫೀಚರ್‌ನಲ್ಲಿ ರಾಜಿಯಿಲ್ಲ!

ಭಾರತೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳ ಅಬ್ಬರ ಜೋರಾಗಿದೆ. ತನ್ನ ವಿಭಿನ್ನ ಹಾಗೂ ಹೊಸ ಫೀಚರ್ಸ್‌ನೊಂದಿಗೆ ಮೊಬೈಲ್ ಪ್ರಿಯರನ್ನು ಸೆಳೆಯುವಲ್ಲಿ ಈ ಫೋನ್‌ಗಳು ಸಕ್ಸಸ್ ಆಗಿವೆ. ಈ ನಡುವೆಯೇ, ಮೊಟೊರೊಲಾ ಕಂಪನಿಯು ಶೀಘ್ರದಲ್ಲೇ 'Moto G' ಸರಣಿಯ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಕಂಪನಿಯು ಈಗಾಗಲೇ Motorola Edge 50 ಪ್ರೊ, Edge 50 ಫ್ಯೂಷನ್ ಮತ್ತು Edge 50 ಅಲ್ಟ್ರಾವನ್ನು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಇದೀಗ, Moto G85 5G ಮೊಬೈಲ್‌ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಹೌದು, ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಮೊಟೊರೊಲಾ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್ ಅನೇಕ ಪ್ರಮಾಣೀಕರಣಗಳನ್ನು ಪಡೆದಿದೆ. ಇತ್ತೀಚಿನ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಮತ್ತು ಯುರೋಪ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದ Moto G84ನ ಉತ್ತರಾಧಿಕಾರಿಯಾಗಿ Moto G85 5G ಯನ್ನು ಬಿಡುಗಡೆ ಮಾಡಲಿದೆ. ಚೀನಾದಲ್ಲಿ S50 ನಿಯೋ ಎಂದು ಪರಿಚಯಿಸಿದೆ. ಈ ಫೋನಿನ ಮತ್ತಷ್ಟು ವಿವಿರಗಳನ್ನು ತಿಳಿಯೋಣ ಬನ್ನಿ.

Moto G85 5G: ಜುಲೈ 10ರಂದು ಲಾಂಚ್.. ಕೈಗೆಟುಕುವ ಬೆಲೆ, ಫೀಚರ್‌ನಲ್ಲಿ ರಾಜಿಯಿಲ್ಲ

ಜುಲೈ 10ಕ್ಕೆ ಭಾರತದಲ್ಲಿ ಗ್ರ್ಯಾಂಡ್ ಲಾಂಚ್

Moto G85 5G ಫೋನ್‌ ಇದೇ ಜುಲೈ 10 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು 8GB + 128GB ಮತ್ತು 12GB + 256GB ಸ್ಟೋರೇಜ್‌ ಆಯ್ಕೆಗಳನ್ನು ದೃಢಪಡಿಸಿದೆ. Android 14 2 ವರ್ಷಗಳ Android ಅಪ್ಡೇಟ್‌ಗಳು ಮತ್ತು 3 ವರ್ಷಗಳ ಭದ್ರತಾ ಅಪ್ಡೇಟ್‌ಗಳೊಂದಿಗೆ ಬರಲಿದೆ. ಈ ಫೋನ್ ಕೋಬಾಲ್ಟ್ ಬ್ಲೂ, ಅರ್ಬನ್ ಗ್ರೇ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಬರಲಿದೆ. 13 5G ಬ್ಯಾಂಡ್‌ಗಳು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್‌ ಹೊಂದಿದೆ.

Moto G85 5Gನ ವಿಶೇಷತೆಗಳು

Moto G85 5G ಫೋನ್ ಸ್ನಾಪ್‌ಡ್ರಾಗನ್ 6s Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ, 2GB RAM ಜೊತೆಗೆ ಚಾಲಿತವಾಗಿದೆ. 6.67 ಇಂಚಿನ ಫುಲ್ HD+ 120Hz ಪೋಲ್‌ಡ್ ಡಿಸ್‌ಪ್ಲೇಯನ್ನು ಹೊಂದಿದೆ. 2400×1080 ಪಿಕ್ಸೆಲ್‌, 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. 1600 ನಿಟ್ಸ್ ವರೆಗಿನ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.

ಸೂಪರ್ ಸ್ಟೈಲಿಶ್ ಕ್ಯಾಮೆರಾ

50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಕ್ಯಾಮೆರಾ ಜೊತೆಗೆ ಮ್ಯಾಕ್ರೋ ಆಯ್ಕೆಯನ್ನು ಹೊಂದಿದೆ. ಇದು 32MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದು 30W ವೇಗದ ಚಾರ್ಜಿಂಗ್‌ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಹಿಂಭಾಗದ ಕವರ್ ಐಚ್ಛಿಕ ಪ್ಯಾಂಟೋನ್ ಬಣ್ಣ ಹೊಂದಾಣಿಕೆ ಮತ್ತು ಎಂಡ್‌ ಇಲ್ಲದ ಅಂಚಿನ ವಿನ್ಯಾಸದೊಂದಿಗೆ ತಾಂತ್ರಿಕ ನ್ಯಾನೊ ಲೆದರ್ ಹೊಂದಿದೆ.

ಈ ಫೋನ್‌ನ ಬೆಲೆ ಎಷ್ಟು?

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಫೋನ್‌ನ ಬೆಲೆ ಬಗ್ಗೆ ನಿಮಗೆ ಕುತೂಹಲ ಮೂಡುವುದು ಸಾಮಾನ್ಯ. ಈಗಾಗಲೇ ಆಯ್ದ ಯುರೋಪಿಯನ್ ದೇಶಗಳಲ್ಲಿ 12GB + 256GB ಒಂದೇ ವೇರಿಯಂಟ್‌ ಬೆಲೆ ಸುಮಾರು 31,275 ರೂ. (349.99 ಯುರೋ / USD 374) ಇದೆ. ಈ ಫೋನ್ ಭಾರತದಲ್ಲಿ ಜುಲೈ 10 ರಂದು ಬಿಡುಗಡೆಯಾಗಲಿದೆ. ಇದರ 8GB + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಸುಮಾರು 20,000 ರೂ. ಇರಲಿದೆ.

Moto G85 5Gನ ಸಂಪೂರ್ಣ ಫೀಚರ್ಸ್‌

  • ಡಿಸ್ಲ್ಪೇ: 6.67-ಇಂಚಿನ (2400×1080 ಪಿಕ್ಸೆಲ್‌ಗಳು) FHD+, 10-ಬಿಟ್ ಕರ್ವ್ಡ್ ಪೋಲೆಡ್ ಡಿಸ್‌ಪ್ಲೇ, 1600nits ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ.
  • ರಿಫ್ರೆಶ್ ರೇಟ್: 120Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್.
  • ಪ್ರೊಸೆಸರ್: Qualcomm Snapdragon 6s Gen 3 6nm 5G SoC ಜೊತೆಗೆ Adreno 619 GPU.
  • ಸ್ಟೋರೇಜ್: 8GB / 12GB LPDDR4x RAM, 128GB / 256GB (UFS 2.2) ಸ್ಟೋರೇಜ್.
  • ಮೆಮೊರಿ: ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ.
  • ಸಿಮ್: ಡುಯೆಲ್ ಸಿಮ್.
  • OS: Android 14 ಜೊತೆ My UX.
  • ಕ್ಯಾಮೆರಾ: 50MP ಹಿಂಬದಿಯ (1/1.95″ ಸೋನಿ LYT-600 ಸಂವೇದಕದೊಂದಿಗೆ) ಕ್ಯಾಮರಾ, f/1.8 ಅಪರ್ಚರ್, OIS, LED ಫ್ಲ್ಯಾಷ್, 8MP 118° ಅಲ್ಟ್ರಾ-ವೈಡ್/ಮ್ಯಾಕ್ರೋ ಕ್ಯಾಮರಾ ಜೊತೆಗೆ f/2.2 ಅಪರ್ಚರ್.
  • ಫ್ರಂಟ್ ಕ್ಯಾಮೆರಾ: 32MP ಫ್ರಂಟ್ (f/2.45 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ.
  • ಆಡಿಯೊ: ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಮೈಕ್ರೊಫೋನ್‌ಗಳು.
  • ಪ್ರೊಟೆಕ್ಷನ್: ನೀರು-ನಿರೋಧಕ (IP52 ರೇಟಿಂಗ್)
  • ಅಳತೆ: 161.91 x 74.06 x 7.59mm
  • ತೂಕ: 171g (Vegan Leather) / 173g (PMMA)
  • ಬಣ್ಣಗಳು: ಆಲಿವ್ ಗ್ರೀನ್, ಕೋಬಾಲ್ಟ್ ಬ್ಲೂ ಮತ್ತು ಅರ್ಬನ್ ಗ್ರೇ ಕಲರ್
  • ಬ್ಯಾಟರಿ: 5000mAh ಬ್ಯಾಟರಿ
  • ಚಾರ್ಜಿಂಗ್: 30W ಟರ್ಬೋಚಾರ್ಜಿಂಗ್
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ Beidou, USB ಟೈಪ್-C
  • ಬೆಲೆ: 8GB + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಅಂದಾಜು 20,000 ರೂಪಾಯಿ.
  • ಲಭ್ಯತೆ: Moto g85 5G ಬಿಡುಗಡೆಯ ನಂತರ ಫ್ಲಿಪ್‌ಕಾರ್ಟ್, ಮೋಟೋರೋಲಾ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.

ಪ್ರಸ್ತುತ, ಮೊಟೊರೊಲಾ ಕಂಪನಿಯು ಲಾಂಚ್ ಮಾಡಿರುವ ಹೊಸ ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಂಪನಿಯು, ಕಡಿಮೆ ಬೆಲೆಯಲ್ಲಿ ಭರಪೂರ ಫೀಚರ್ಸ್‌ಗಳೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಮಧ್ಯೆಯೇ ಸದ್ದಿಲ್ಲದೇ ಹೊಸ ಮೊಬೈಲ್‌ಗಳ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇದರ ಭಾಗವಾಗಿ, Moto G85 5G ಫೋನ್ ಅನ್ನು ಲೋಕಾರ್ಪಣೆಗೊಳಿಸಲು ಮುಂದಾಗಿದೆ.

Best Mobiles in India

English summary
Moto G85 5G Set to Launch on July 10 in India. To Feature 120Hz Curved Display and 50MP OIS-enabled Camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+