Moto S50: ಹೊಸ ಫೀಚರ್‌ನೊಂದಿಗೆ ಮೊಟೊ S50 ಬಿಡುಗಡೆ.. ಕಡಿಮೆ ಬೆಲೆ!
Moto S50 Launched: ಮೊಟೊ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಸದ್ದಿಲ್ಲದೇ ಹೊಚ್ಚ ಹೊಸ ಮೊಬೈಲ್ ಬಿಡುಗಡೆಯಾಗಿದೆ. ಹೌದು, ಮೊಟೊರೊಲಾ ಕಂಪನಿಯು ಮೊಟೊ S50 (Moto S50) ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಲಾಂಚ್ ಆಗಿದೆ. ಇದು ಕಂಪನಿಯ 'S' ಸರಣಿಯ ಹೊಸ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಚೀನಾದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಅನಾವರಣಗೊಂಡಿದೆ. ಇದು ಮಧ್ಯಮ ಶ್ರೇಣಿಯ ಇತ್ತೀಚಿನ ಮೊಬೈಲ್ ಆಗಿದೆ. ಬನ್ನಿ, ಹೊಸ ಮೊಟೊ S50 ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಮೊಟೊ S50 ಫೋನ್ 120Hz ರಿಫ್ರೆಶ್ ದರದೊಂದಿಗೆ 6.36 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 7300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. 12GB RAM ಮತ್ತು 512GB ಸ್ಟೋರೇಜ್, 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 4310mAh ಸಾಮರ್ಥ್ಯದ ಬ್ಯಾಟರಿ, 68W ಫಾಸ್ಟ್ ಚಾರ್ಜಿಂಗ್, IP68 ರೇಟಿಂಗ್‌ನಂತಹ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮೊಟೊ S50 ಫೋನಿನ ಬೆಲೆ
ಮೊಟೊ S50 ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 26,000 ರೂ. (2,199 ಯುವಾನ್) ಇದೆ. ಟಾಪ್ ಮಾಡೆಲ್ 12GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 29,500 ರೂ.ಗೆ (2,499 ಯುವಾನ್) ಮಾರಾಟವಾಗಲಿದೆ. ಈ ಫೋನನ್ನು ಪರ್ಸಿಮನ್ ಆರೆಂಜ್, ಫ್ಲೋರಾ ಬ್ಲೂ ಮತ್ತು ಲ್ಯಾಟೆ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಮೊಟೊ S50 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಮೊಟೊ S50 ಮೊಬೈಲ್ 6.36 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯಲ್ಲಿ LTPO ತಂತ್ರಜ್ಞಾನ ಮತ್ತು 120Hz ರಿಫ್ರೆಶ್ ದರವನ್ನು ಪಡೆಯಬಹುದು. ಜೊತೆಗೆ ಈ ಫೋನ್ 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನ ವಿಶೇಷ ಸೌಲಭ್ಯವನ್ನು ಹೊಂದಿದೆ.
ಪ್ರೊಸೆಸರ್: ಮೊಟೊ S50 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಪ್ರೊಸೆಸರ್ ಸಹಾಯದಿಂದ 2.5GHz ವರೆಗೆ ಹೆಚ್ಚಿನ ಗಡಿಯಾರದ ವೇಗವನ್ನು ಪಡೆಯಬಹುದು. ಇದು ಬಳಕೆದಾರರಿಗೆ ಸುಗಮ ಅನುಭವ ನೀಡಲಿದೆ. ಈ ಹೊಸ ಮೊಟೊ S50 ಮೊಬೈಲ್ Android 14 ಆಧಾರಿತ Halo UI ನೊಂದಿಗೆ ಕೆಲಸ ಮಾಡಲಿದೆ.
ಸ್ಟೋರೇಜ್: ಮೊಟೊ S50 ಮೊಬೈಲ್ 12GB ವರೆಗೆ LPDDR4X RAM ಮತ್ತು 512GB ವರೆಗೆ UFS 2.2 ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ.
ಕ್ಯಾಮೆರಾ: ಮೊಟೊ S50 ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೋನಿ IMX896 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಹೊಂದಿದೆ. ಜೊತೆಗೆ, ಮ್ಯಾಕ್ರೋ ಸಾಮರ್ಥ್ಯದೊಂದಿಗೆ 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3X ಆಪ್ಟಿಕಲ್ ಜೂಮ್‌ನೊಂದಿಗೆ 10 ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಕಂಪನಿಯು ಮೊಟೊ S50 ಫೋನನ್ನು 4310mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಕೇವಲ 13 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ, 15 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ.
ಇತರೆ ವೈಶಿಷ್ಟ್ಯಗಳು: ಮೊಟೊ S50 ಸ್ಮಾರ್ಟ್‌ಫೋನ್ ಧೂಳು ಮತ್ತು ನೀರು ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. NFC ಬೆಂಬಲ, ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಗೊರಿಲ್ಲಾ ಗ್ಲಾಸ್ ರಕ್ಷಣೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








