4 ವರ್ಷ ವಾರಂಟಿ ಗುರು..! ಶೀಘ್ರದಲ್ಲೇ Moto S50 Neo ಫೋನ್ ಬಿಡುಗಡೆ
4 ವರ್ಷದ ವಾರಂಟಿ ಗುರು..! ಶೀಘ್ರದಲ್ಲೇ ಲಾಂಚ್ ಆಗಲಿದೆ Moto S50 Neo ಫೋನ್. ಇದೇ ನೋಡಿ 4 ವರ್ಷಗಳ ವಾರಂಟಿಯೊಂದಿಗೆ ಬಿಡುಗಡೆಯಾಗುತ್ತಿರುವ ವಿಶ್ವದ ಮೊದಲ ಮೊಬೈಲ್. ಹೌದು, ಮೊಟೊರೊಲಾ ಕಂಪನಿಯು ಶೀಘ್ರದಲ್ಲೇ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇವು Motorola Razr 50 ಸರಣಿಯ ಸ್ಮಾರ್ಟ್‌ಫೋನ್‌ಗಳು. ಜೂನ್ 25 ರಂದು ಚೀನಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ Moto S50 Neo, Razr 50 ಮತ್ತು Razr 50 Ultra ಅನ್ನು ಲಾಂಚ್ ಮಾಡುವುದಾಗಿ ಕಂಪನಿ ದೃಢಪಡಿಸಿದೆ. ಈ ಮಧ್ಯೆ, ಪೋಸ್ಟ್‌ವೊಂದನ್ನು ಮಾಡಿದ್ದು, ಮೊಟೊ ಎಸ್50 ನಿಯೋ 4 ವರ್ಷಗಳ ವಾರಂಟಿಯೊಂದಿಗೆ ಲಾಂಚ್ ಆಗುವುದು ಖಚಿತವಾಗಿದೆ.
ಮೊಟೊರೊಲಾ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಇದೀಗ Razr 50 ಸರಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಇದರಲ್ಲಿ ಮೊಟೊ ಎಸ್50 ನಿಯೋ ಮೊಬೈಲ್ ಪ್ರಿಯರನ್ನು ಆಕರ್ಷಿಸುವುದರಲ್ಲಿ ಡೌಟೇ ಇಲ್ಲ. ಮೊಟೊ S50 ನಿಯೋ 4 ವರ್ಷಗಳ ವಾರಂಟಿಯನ್ನು ನೀಡುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಚಾರದ ಪೋಸ್ಟರ್, 1 ವರ್ಷದ ವಾರಂಟಿ ಮತ್ತು ಪೂರಕವಾದ 3 ವರ್ಷದ ದೀರ್ಘಾವದಿ ವಾರಂಟಿಯನ್ನು ಒಳಗೊಂಡಿದೆ.

ಈ ಹಿಂದೆ, Xiaomi, OnePlus, Lenovo ಮತ್ತು ಇತರ ಕೆಲವು ಕಂಪನಿಗಳು 2 ವರ್ಷದ ವಾರಂಟಿಗಳನ್ನು ನೀಡಿವೆ. Meizuನ 20 ಮತ್ತು 21 ಸರಣಿಗಳು ಪ್ರಚಾರದ ಸಮಯದಲ್ಲಿ 3 ವರ್ಷದ ವಾರಂಟಿಗಳನ್ನು ನೀಡಿವೆ. ಆದಾಗ್ಯೂ, ಮೊಟೊ ಎಸ್50 ನಿಯೋ ತನ್ನ 4 ವರ್ಷಗಳ ವಾರಂಟಿಯೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಿದೆ. ಸೋರಿಕೆಯಾಗಿರುವ ಫೀಚರ್‌ಗಳು ಈ ಫೋನ್ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಹಾಗಿದ್ರೆ, ಇದು ಏನೆಲ್ಲಾ ವಿಶೇಷತೆ ಒಳಗೊಂಡಿದೆ ತಿಳಿಯೋಣ ಬನ್ನಿ.
ಮೊಟೊ ಎಸ್50 ನಿಯೋ ದೀರ್ಘಾವಧಿ ವಾರಂಟಿಯನ್ನು ಹೇಗೆ ಪಡೆಯುವುದು? ಎಂಬುವುದನ್ನು ಕಂಪನಿಯು ಈವರೆಗೆ ಬಹಿರಂಗಪಡಿಸಿಲ್ಲ. ಈ ದೀರ್ಘಾವಧಿ ವಾರಂಟಿಯು 4 ವರ್ಷಗಳ ಅವಧಿಯಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ. ಇದು ಗ್ರಾಹಕರಿಗೆ ಚಿಂತೆ ಮುಕ್ತ ಅನುಭವವನ್ನು ನೀಡುತ್ತದೆ. ವರದಿಗಳ ಪ್ರಕಾರ, ಜಾಗತಿಕ ಮಾರುಕಟ್ಟೆಯು S50 ನಿಯೋವನ್ನು Moto G85 5G ಮರುಬ್ರಾಂಡ್ ಎಂದು ಹೇಳುತ್ತಿದೆ. G85 4 ವರ್ಷಗಳ ವಾರಂಟಿಯೊಂದಿಗೆ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
ಮೊಟೊ ಎಸ್50 ನಿಯೋ ವಿಶೇಷತೆಗಳು
ವರದಿಗಳ ಪ್ರಕಾರ, ಮೊಟೊ ಎಸ್50 ನಿಯೋ 6.6 ಇಂಚಿನ OLED ಕರ್ವ್ಡ್-ಎಡ್ಜ್ ಡಿಸ್ಲ್ಪೇಯನ್ನು ಹೊಂದಿದೆ. ಇದು FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ನೀಡುತ್ತದೆ. ಜೊತೆಗೆ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತದೆ. ಇದು ಹೊಸ ಮಧ್ಯಮ ಶ್ರೇಣಿಯ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಮತ್ತು 5000mAh ಬ್ಯಾಟರಿಯನ್ನು ಸ್ಲಿಮ್ 7.59mm ಬಾಡಿಯೊಳಗೆ ಹೊಂದಿರುವ ಸಾಧ್ಯತೆಯಿದೆ.

ಮೊಟೊ ಎಸ್50 ನಿಯೋ ಫೋನ್ 33W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳು, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಮತ್ತು ಆಂಡ್ರಾಯ್ಡ್ 14 ನಂತಹ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಕಪ್ಪು, ಹಸಿರು ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
S50 ನಿಯೋ ಸಂಪೂರ್ಣ ಫೀಚರ್ಸ್
- ಪ್ರೊಸೆಸರ್: SD 6s Gen 3
- ಡಿಸ್ಲ್ಪೇ: 6.6 ಪೋಲ್ಇಡಿ, 1600nits GG5 ಬ್ರೈಟ್‌ನೆಸ್, 92.7% Screen to Body Ratio
- ರಿಫ್ರೆಶ್ ದರ: 120Hz HDR10+ 10-ಬಿಟ್ DCI P3
- ಕ್ಯಾಮೆರಾಗಳು: 50MP f/1.8 IMX882, 8MP (UW + ಮ್ಯಾಕ್ರೋ), 32MP (ಫ್ರಂಟ್ ಕ್ಯಾಮೆರಾ)
- ಅಳತೆ: 7.59 ಮಿಮೀ
- ತೂಕ: 171 ಗ್ರಾಂ ತೂಕ
- ಸ್ಟೋರೇಜ್: 8/12GB RAM
- ಆಪರೇಟಿಂಗ್ ಸಿಸ್ಟಮ್: MyUI 7 (Android 14) ಮತ್ತು MotoAi
- ಬ್ಯಾಟರಿ: 5000mAh + 33W, 4 ವರ್ಷಗಳ ವಾರಂಟಿ
ಜೂನ್ 25 ರಂದು Razr 50 ಸರಣಿ ಬಿಡುಗಡೆ
ಮೊಟೊರೊಲಾ Razr 2024 ಸರಣಿಯ ಫೋನ್‌ಗಳು ಜೂನ್ 25 ರಂದು ಚೀನಾದಲ್ಲಿ ಅನಾವರಣಗೊಳ್ಳಲಿವೆ. ಆದರೆ, ಮುಂಬರುವ ಫೋಲ್ಡಬಲ್ ಫೋನ್‌ಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಚೀನಾದಲ್ಲಿ Razr 50 ಮತ್ತು Razr 50 ಅಲ್ಟ್ರಾ ಎರಡನ್ನೂ ಅನಾವರಣಗೊಳಿಸುತ್ತದೆಯೇ? ಅಥವಾ ಇಲ್ಲವೇ? ಅನ್ನೋದನ್ನು ಕಾದುನೋಡಬೇಕಾಗಿದೆ. ಈ ಮೊಟೊರೊಲಾ Razr 50 ಸರಣಿಯ ಫೋನ್‌ಗಳು ಭಾರತದಲ್ಲಿ ಯಾವಾಗ ಬಿಡುಗಡೆ? ಮತ್ತು ಈ ಮೊಬೈಲ್ ಏನೆಲ್ಲಾ ಫೀಚರ್ಸ್ ಹೊಂದಿವೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Razr 50 ಸರಣಿ ನಿರೀಕ್ಷಿತ ವೈಶಿಷ್ಟ್ಯಗಳೇನು?
ಈ ಫೋನ್‌ಗಳು 8GB RAM ಮತ್ತು 13MP ಸೆಕೆಂಡರಿ ಸಂವೇದಕದೊಂದಿಗೆ ಜೋಡಿಯಾಗಿರುವ 50MP ಮುಖ್ಯ ಕ್ಯಾಮರಾದೊಂದಿಗೆ ಬರಲಿವೆ. Razr 50 6.9 ಇಂಚಿನ pOLED 120Hz ಮುಖ್ಯ ಡಿಸ್ಪ್ಲೇ ಮತ್ತು 3.6 ಇಂಚಿನ OLED ಸೆಕೆಂಡರಿ ಸ್ಕ್ರೀನ್ ಹೊಂದಿರಲಿವೆ. ಇದು 68W ಫಾಸ್ಟ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿವೆ.
ಈ ಫೋನ್‌ಗಳ ಪ್ರೊಸೆಸರ್ ಏನು?
ಮೊಟೊರೊಲಾ Razr 50 ಸರಣಿಯು ಅಲ್ಟ್ರಾ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇಮೇಜಿಂಗ್‌ಗಾಗಿ, ಅಲ್ಟ್ರಾ ರೂಪಾಂತರವು 50MP ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ ಮತ್ತು 32MP ಮುಂಭಾಗದ ಕ್ಯಾಮೆರಾದೊಂದಿಗೆ ಜೋಡಿಸಲಾದ ಹಿಂಭಾಗದ ಪ್ಯಾನೆಲ್‌ನಲ್ಲಿ 50MP 2x ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. Razr 50 Ultra ನಲ್ಲಿನ ಡಿಸ್ಪ್ಲೇ ಸ್ಟ್ಯಾಂಡರ್ಡ್ Motorola Razr 50 ನಂತೆಯೇ ಇರುವ ಸಾಧ್ಯತೆಯಿದೆ.
ಮೊಟೊರೊಲಾ Razr 50 Ultra ಸರಣಿಯು ಈಗಾಗಲೇ BIS ಸೇರಿದಂತೆ ಹಲವಾರು ಆನ್‌ಲೈನ್ ಸೈಟ್‌ಗಳಿಗೆ ಲಗ್ಗೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ದಿನಾಂಕ ಲಭ್ಯವಾಗಲಿದೆ. ಆದರೆ, ಈ ಬಗ್ಗೆ Motorola ಕಂಪನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ, ಮೊಟೊರೊಲಾ Razr 50 Ultra ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.


Click it and Unblock the Notifications








